ಚಿಕ್ಕನಾಯಕನಹಳ್ಳಿ: ಅಜಾದಿ ಕಾ ಅಮೃತಮಹೋತ್ಸವದ ಅಂಗವಾಗಿ ಕರುಣಾ ಕಾರ್ಯಕ್ರಮ ಹಾಗೂ ಪಶು ಆರೋಗ್ಯ ಶಿಬಿರವನ್ನು ತಾಲ್ಲೂಕಿನ ಎಚ್.ಎಂ. ಕಾವಲು ಗ್ರಾಮದಲ್ಲಿ ನಡೆಸಲಾಯಿತು.
ತಾಲ್ಲೂಕಿನ ಹಂದನಕೆರೆ ಹೋಬಳಿ ಎಚ್.ಎಂ. ಕಾವಲು ಗ್ರಾಮದಲ್ಲಿ ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆಯಡಿ ನಡೆದ ಪಶು ಆರೋಗ್ಯ ಶಿಬಿರದಲ್ಲಿ ಬೆಳಿಗ್ಗೆ ಡಾ. ಪ್ರಮೋದ್‌ಕುಮಾರ್ ತಂಡದಿAದ ೧೦ ಬರಡುರಾಸುಗಳ ತಪಾಸಣೆ, ಚಿಕಿತ್ಸೆ ಹಾಗೂ ಗರ್ಭ ಪರೀಕ್ಷೆ ನಡೆಸಿ ಇವುಗಳಲ್ಲಿ ನಾಲ್ಕು ರಾಸುಗಳ ಗರ್ಭದೋಶ ಪತ್ತೆಹಚ್ಚಿ ಚಿಕಿತ್ಸೆ ನೀಡಲಾಯಿತು. ೨೦ ರಾಸುಗಳಿಗೆ ವಿವಿಧ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ನೀಡಿ, ೫೦೦ ಕುರಿ ಮೇಕೆಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಲಾಯಿತು. ೭೫ ಮಿಶ್ರತಳಿ ಹಸುಗಳಿಗೆ ತಲಾ ಒಂದು ಕೇಜಿ ಲವಣ,ಖನಿಜ ಹಾಗೂ ಜೀವಸತ್ವಯುಕ್ತ ಮಿಶ್ರಣವನ್ನು ನೀಡಲಾ ಯಿತು. ೩೦ ಕರುಗಳಿಗೆ ಜಂತುನಾಶಕ ಔಷಧಿಕುಡಿಸಿ ಆರೋಗ್ಯವರ್ಧಕ ಚುಚ್ಚುಮದ್ದು ನೀಡಲಾಯಿತು. ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೆ.ಮಾ. ನಾಗಭೂಷಣ್‌ರವರು ರೈತರ ಸೆಭೆನಡೆಸಿ ಮಾತನಾಡಿ, ಪಶುಪಾಲನೆಯನ್ನು ಲಾಭದಾಯಿಕಗೊಳಿಸಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ವೈಜ್ಞಾನಿಕ ಹಾಗೂ ಆರೋಗ್ಯಯುಕ್ತ ಕೊಟ್ಟಿಗೆ ನಿರ್ಮಾಣ, ಹಸಿರುಮೇವಿನ ಮಹತ್ವ ಹಾಗೂ ಬೆಳೆಯುವುದು, ಕರುಗಳ ಪಾಲನೆ, ಟಗರುಗಳ ನಿರ್ವಹಣೆ ಹಾಗೂ ಕಾಲಕಾಲಕ್ಕೆ ಕೈಗೊಳ್ಳಬೇಕಾದ ಔಷದೋಪಚಾರಗಳ ಬಗ್ಗೆ ಮಾಹಿತಿ ನೀಡಿ, ನಿಮ್ಮಕಸುಬಿನಲ್ಲಿ ಇಲಾಖೆಯ ಸಹಕಾರವಿರಲಿದೆ ಎಂದರು. ಈ ಶಿಬಿರದಲ್ಲಿ ಡಾ,ರಕ್ಷಿತ್, ಪಶು ವೈದ್ಯ ಪರೀಕ್ಷಕರಾದ ದಿನೇಶ್ ಎನ್. ಕಿರಿಯ ಪಶುವೈದ್ಯಪರೀಕ್ಷಕ ಪ್ರಜ್ವಲ್, ಸಿಬ್ಬಂದಿಗಳಾದ ನಾಗರಾಜು, ನವೀನ್‌ಕುಮಾರ್, ಕಿರಣ್‌ಕುಮಾರ್, ಅತಾವುಲ್ಲಾ ಪಶುಸಖಿ ಶೋಭ,ಉಷಾ ಮತ್ತಯ ಗ್ರಾಮಸ್ಥರು ಇದ್ದರು.

(Visited 1 times, 1 visits today)