ತುಮಕೂರುಃ ಆಧಾರ್ ಕಾರ್ಡ್ನೊಂದಿಗೆ ಎಪಿಕ್(ಇPIಅ) ಸಂಖ್ಯೆಯನ್ನು ಕೂಡಲೇ ಜೋಡಣೆ(ಐiಟಿಞ) ಮಾಡಲು ಕ್ರಮ ವಹಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ.ಮಂಗಳವಾರ ನವದೆಹಲಿಯ ನಿರ್ವಾಚನ ಸದನದಲ್ಲಿ ಚುನಾವಣಾ ಆಯುಕ್ತರಾದ ಡಾ: ಸುಖಬೀರ್ ಸಿಂಗ್ ಸಂಧು ಹಾಗೂ ಡಾ: ವಿವೇಕ್ ಜೋಶಿ, ಕೇಂದ್ರ ಗೃಹ ಕಾರ್ಯದರ್ಶಿ, ಶಾಸಕಾಂಗ ಇಲಾಖೆ ಕಾರ್ಯದರ್ಶಿ, ಯುಐಡಿಎಐ ಮುಖ್ಯ ಕಾರ್ಯ ನಿರ್ವಣಾಧಿಕಾರಿ, ಇಸಿಐನ ತಾಂತ್ರಿಕ ತಜ್ಞರೊಂದಿಗೆ ಸಭೆ ನಡೆಸಿ ಚರ್ಚಿಸಿದ ಅವರು, ಚುನಾವಣಾ ಆಯೋಗವು ಆರ್ಟಿಕಲ್ ೩೨೬, ಆರ್‌ಪಿ ಆಕ್ಟ್, ೧೯೫೦ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಕ್ರಮ ಕೈಗೊಳ್ಳಲಿದ್ದು, ತಜ್ಞರ ನಡುವಿನ ತಾಂತ್ರಿಕ ಸಮಾಲೋಚನೆಗಳನ್ನು ಶೀಘ್ರದಲ್ಲೇ ಪ್ರಾರಂಭವಾಗುವುದು ಎಂದು ತಿಳಿಸಿದ್ದಾರೆ.
ಭಾರತದ ಸಂವಿಧಾನದ ೩೨೬ನೇ ವಿಧಿಯ ಪ್ರಕಾರ ಮತದಾನದ ಹಕ್ಕನ್ನು ಭಾರತದ ನಾಗರಿಕರಿಗೆ ಮಾತ್ರ ನೀಡಲಾಗುವುದು, ಆಧಾರ್ ಕಾರ್ಡ್ ವ್ಯಕ್ತಿಯ ಗುರುತನ್ನು ಮಾತ್ರ ಸ್ಥಾಪಿಸುತ್ತದೆಯಾದ್ದರಿಂದ ಇPIಅ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದನ್ನು ಸಂವಿಧಾನದ ೩೨೬ನೇ ವಿಧಿ, ೧೯೫೦ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ ೨೩(೪), ೨೩(೫) ಮತ್ತು ೨೩(೬)ರ ನಿಬಂಧನೆಗಳ ಪ್ರಕಾರ ಕ್ರಮವಹಿಸಲಾಗುವುದು ತಿಳಿಸಿದ್ದಾರೆ.

(Visited 1 times, 1 visits today)