ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ಕೇಂದ್ರ(ರಿ) ತುಮಕೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕರೆದು ಆಡಿಸುವುದರ ಜೊತೆ, ಕಲಿಸಿ, ಕಲಿತು ಆಡೋಣ ಎಂಬ ಧ್ಯೇಯ ವಾಕ್ಯದೊಂದಿಗೆ “ವಿಶ್ವ ರಂಗಭೂಮಿ ದಿನಾಚರಣೆಯ-೨೦೨೫”ರ ಅಂಗವಾಗಿ ಮಾರ್ಚ್ ೨೨ ರಿಂದ ೨೬ ರವರೆಗೆ ೫ ದಿನಗಳ ಯುಗಾದಿ ನಾಟಕೋತ್ಸವ-೨೦೨೫ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮಕೂರು ಇವರು ಹಮ್ಮಿಕೊಂಡಿರುವ ಯುಗಾದಿ ನಾಟಕೋತ್ಸವ ಮಾರ್ಚ್ ೨೨ ರಿಂದ ೨೬ರವರೆಗೆ ಪ್ರತಿ ದಿನ ಸಂಜೆ ೬:೩೦ ಗಂಟೆಗೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯಲಿದೆ.ಯುಗಾಧಿ ರಂಗೋತ್ಸವದಲ್ಲಿ ಜಾನಪದ ಕಲೆ, ರಂಗಸAಗೀತ, ಭರತನಾಟ್ಯ, ಪೌರಾಣಿಕ, ಸಾಮಾಜಿಕ ನಾಟಕಗಳು, ತತ್ವಪದ ಗಾಯನ, ಪರಿಸರ ಗೀತೆಗಳು, ಯಕ್ಷಗಾನ ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಥಳೀಯ ಮತ್ತು ನಾಡಿನ ವಿವಿಧ ಕಲಾ ತಂಡಗಳೊAದಿಗೆ ಏರ್ಪಡಿಸಲಾಗಿದೆ.
ಮಾರ್ಚ್ ೨೨ ರ ಶನಿವಾರ ಸಂಜೆ ೬:೩೦ ಗಂಟೆಗೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ “ವಿಶ್ವ ರಂಗಭೂಮಿ ದಿನಾಚರಣೆಯ-೨೦೨೫”ರ ಅಂಗವಾಗಿ ಯುಗಾದಿ ರಂಗೋತ್ಸವ-೨೦೨೫ ಚಾಲನೆ ದೊರೆಯಲಿದ್ದು, ಹಿರಿಯ ಹರಿಕಥಾ ವಿದ್ವಾನ್ ಡಾ.ಲಕ್ಷö್ಮಣದಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಗೀತ ಮತ್ತು ನೃತ್ಯ ಅಕಾಡೆಮಿ ರಿಜಿಸ್ಟಾರ್ ನರೇಂದ್ರ ಬಾಬು ಎನ್, ಹಿರಿಯ ರಂಗಕರ್ಮಿ ಡಾ.ಸಿ.ಬಸವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್.ಕೆ.ಮಿರ್ಜಿ, ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾದ ಕೆ.ಜಿ.ಮರಿಯಪ್ಪ, ಯಕ್ಷದೀವಿಗೆ ಟ್ರಸ್ಟ್ನ ಅಧ್ಯಕ್ಷರಾದ ಶ್ರೀಮತಿ ಆರತಿ ಪಟ್ರಮೆ ಇವರುಗಳ ಭಾಗವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ನಂತರ ಸಂಜೆ ೭ ಗಂಟೆಗೆ ತುಮಕೂರಿನ ಕಲಾಕೇಸರಿ ಜಾನಪದ ಕಲಾತಂಡದ ಭಾನುಪ್ರಕಾಶ್ ಮತ್ತು ತಂಡದವರ ನೇತೃತ್ವದಲ್ಲಿ ವೀರಗಾಸೆ ನೃತ್ಯ ಮತ್ತು ಚಿಟ್ಟಿಮೇಳ ಹಾಗೂ ಸಾಯಿರಾಮನ್ ನೃತ್ಯಕೇಂದ್ರ ತುಮಕೂರು ಟಿ.ಎಸ್.ಸಾಗರ್ ಟಿ.ಎಸ್. ಅವರ ನೇತೃತ್ವದಲ್ಲಿ ಮಕ್ಕಳ ಭರತನಾಟ್ಯ, ಸಂಜೆ ೭:೩೦ಕ್ಕೆ ರಂಗ ಸೊಗಡು ಸಿದ್ದರಾಜು ಸ್ವಾಂದೇನಹಳ್ಳಿ ಇವರ ನೇತೃತ್ವದಲ್ಲಿ ಪಾವಗಡ ತಾಲೂಕು ವೀರಗೊಂದಿಯ ಶ್ರೀ ಕರಡಿ ಬುಳ್ಳಪ್ಪ ಸಾಂಸ್ಕೃತಿಕ ಸೇವಾ ಟ್ರಸ್ಟ್ನ ತಂಡದಿAದ ದ್ರೌಪದಿಯ ವಸ್ತಾçಪಹರಣ ಅಥವಾ ದುಶ್ಯಾಸನನ ವಧೆ ನಾಟಕ ಪ್ರದರ್ಶನಗೊಳ್ಳಲಿದೆ.
ಮಾರ್ಚ್ ೨೩ರ ಭಾನುವಾರ ಸಂಜೆ ೬:೩೦ ಗಂಟೆಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿದ್ದಯ್ಯ ಸಿ.ಹೆಚ್. ಅವರ ನೇತೃತ್ವದಲ್ಲಿ ಸಿಂಚನಾ ಕಲಾ ಕೇಂದ್ರ ಟ್ರಸ್ಟ್ (ರಿ) ನೆಲಮಂಗಲ ಇವರಿಂದ ಜಾನಪದ ಗೀತ ಗಾಯನ, ಸಂಜೆ ೭:೩೦ಕ್ಕೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮಕೂರು ಇವರು ನಿರ್ದೇಶಕ ಕಾಂತರಾಜು ಕೌತುಮಾರನಹಳ್ಳಿ ಅವರ ನಿರ್ದೇಶನದಲ್ಲಿ ಸುಯೋಧನ ನಾಟಕವನ್ನು ಪ್ರರ್ದಶಿಸಲಿದ್ದಾರೆ.
ಮಾರ್ಚ್ ೨೪ರ ಸೋಮವಾರ ಸಂಜೆ ೬:೩೦ಕ್ಕೆ ಡಿ.ಸಿ.ಕುಮಾರ್ ದೊಮ್ಮನಕುಪ್ಪೆ, ನವೀನ್ ಕುಮಾರ್ ನೆಲಮಂಗಲ ಮತ್ತು ಸಂಗಡಿಗರು, ಇವರ ನೇತೃತ್ವದಲ್ಲಿ ತತ್ವಪದ ಗಾಯನ ನಡೆಸಿಕೊಡಲಿದ್ದಾರೆ.ಸಂಜೆ ೭ ಗಂಟೆಗೆ ಅನುರಾಗ್ ಭೀಮಸಂದ್ರ ಇವರ ನಿರ್ದೇಶನದಲ್ಲಿ ಕಲಾಕಲ್ಪಂ(ರಿ) ತುಮಕೂರು ತಂಡದಿAದ ಸೋರುತಿಹುದು ಸಂಬAಧ ನಾಟಕ ಪ್ರದರ್ಶನಗೊಳ್ಳಲಿದೆ
ಮಾರ್ಚ್ ೨೫ರ ಮಂಗಳವಾರ ಸಂಜೆ ೬:೩೦ಕ್ಕೆ ಲೋಕೇಶ್ ದ್ವಾರನಕುಂಟೆ, ಗಂಗಣ್ಣ ಇರಕಸಂದ್ರ ಮತ್ತು ಸಂಗಡಿಗರ ನೇತೃತ್ವದಲ್ಲಿ ಪರಿಸರ ಗೀತೆಗಳ ಗಾಯನ ನಡೆಲಿದೆ. ಸಂಜೆ ೭ ಗಂಟೆಗೆ ಶ್ರೀಸಿದ್ದಿವಿನಾಯಕ ಹವ್ಯಾಸಿ ಯಕ್ಷಗಾನ ಕಲಾ ತಂಡ(ರಿ), ಎಂ.ಆರ್.ಪುಟ್ಟಸ್ವಾಮಿ ಮತ್ತು ಸಂಗಡಿಗರ ಭಾಗವತದಲ್ಲಿ ದಕ್ಷಯಜ್ಞ ಮೂಡಲಪಾಯ ಯಕ್ಷಗಾನ ಪ್ರಸಂಗ ನಡೆಯಲಿದೆ.
ಮಾರ್ಚ್ ೨೬ರ ಬುಧವಾರ ಸಂಜೆ ೬:೩೦ಕ್ಕೆ “ವಿಶ್ವ ರಂಗಭೂಮಿ ದಿನಾಚರಣೆಯ-೨೦೨೫”ರ ಅಂಗವಾದ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಯುಗಾದಿ ನಾಟಕೋತ್ಸವ-೨೦೨೫ರ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಶಾಸಕರಾದ ಜಿ.ಬಿ.ಜೋತಿಗಣೇಶ್, ತುಮಕೂರು ಮಹಾನಗರಪಾಲಿಕೆ ಆಯುಕ್ತರಾದ ಶ್ರೀಮತಿ ಅಶ್ವಿಜ.ಬಿ.ವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ, ವಾರ್ತಾ ಸಹಾಯಕರಾದ ಶ್ರೀಮತಿ ರೂಪಕಲಾ.ಆರ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಉಗಮ ಶ್ರೀನಿವಾಸ್ ಭಾಗವಹಿಸಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಹೆಚ್.ರಾಮು ಜೋಗಿಹಳ್ಳಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.ಇದೇ ವೇಳೆ ತುಮಕೂರು ನಗರ ಡಿವೈಎಸ್ಪಿ ಕೆ.ಆರ್. ಚಂದ್ರಶೇಖರ್, ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ದಿನೇಶಕುಮಾರ್.ಬಿ.ಎಸ್. ಅವರುಗಳಿಗೆ ರಂಗಗೌರವ ಸಲ್ಲಿಸಲಾಗುವುದು.
ಕಾರ್ಯಕ್ರಮದ ನಂತರ ಸಂಜೆ.೭:೩೦ಕ್ಕೆ ರಂಗಕೀರ್ತನ ಸಂಪದ ಮಲ್ಲಸಂದ್ರ ತಂಡದಿAದ ಕಲಾಶ್ರೀ ಡಾ.ಲಕ್ಷö್ಮಣದಾಸ್ ನೇತೃತ್ವದಲ್ಲಿ ರಂಗಗೀತೆ ರಂಗ ಸಂಗೀತ ಮತ್ತೆ ವೈಭವದತ್ತ ಎಂಬ ಕಾರ್ಯಕ್ರಮ ಜರುಗಲಿದೆ.
ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮಕೂರು ಹಮ್ಮಿಕೊಂಡಿರುವ ೫ ದಿನಗಳ ಯುಗಾದಿ ರಂಗೋತ್ಸವ-೨೦೨೫ ಪ್ರವೇಶ ಉಚಿತವಾಗಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಲಾವಿದರು ಹಾಗೂ ಕಲಾ ಸಂಘಟಕರನ್ನು ಪ್ರೋತ್ಸಾಹಿಸುವಂತೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಲಾಪುರ ಮನವಿ ಮಾಡಿದ್ದಾರೆ.
(Visited 1 times, 1 visits today)