ತುಮಕೂರು: ಜಿಲ್ಲೆಯ ಶಿರಾ ನಗರದ ಕಲ್ಲುಕೋಟೆಯ ಸ್ಲಂ ಬೋರ್ಡ್ ಹಾಗೂ ಆಶ್ರಯ ಬಡಾವಣೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿAದ ಸರ್ವೆ ನಂಬರ್ ೧೦೩/೨Pಯ ೮ ಎಕರೆ ಜಾಗದಲ್ಲಿ ಉ೨ ಮಾದರಿಯ ೧೦೦೮ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಈ ಪೈಕಿ ೨೫೨ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು. ಆಶ್ರಯ ಬಡಾವಣೆಯಲ್ಲಿ ಸುಮಾರು ೪೦೦೦ ನಿವೇಶನಗಳ ಅಭಿವೃದ್ಧಿ ಕಾರ್ಯ ಪ್ರಗತಿ ಯಲ್ಲಿದ್ದು, ಶಿರಾ ನಗರದ ಕಲ್ಲುಕೋಟೆಯ ಸರ್ವೆ ನಂಬರ್ ೧೦೦ರ ೨೦ ಎಕರೆ ಜಾಗದಲ್ಲಿ ನಿವೇಶನಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳ ಲಾಗಿದೆ ಎಂದು ತಿಳಿಸಿದರಲ್ಲದೆ, ಶಿರಾ ತಾಲೂ ಕಿನ ಎಮ್ಮೇರಹಳ್ಳಿಯಲ್ಲಿ ೯೦ ಎಕರೆ ಜಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿರಾ ತಾಲೂಕಿನ ತಹ ಶೀಲ್ದಾರ್ ರೇಷ್ಮ ಹಾಗೂ ನಗರ ಸಭೆ ಆಯುಕ್ತ ರುದ್ರೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿ. ಯೋಗಾನಂದ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪ್ಥಿತರಿದ್ದರು.
(Visited 1 times, 1 visits today)