ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಜೆ.ಸಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಪಾಳ್ಯದ ಶ್ರೀ ಸಿದ್ದರಾಮೇಶ್ವರ ಕಿವುಡು ಮಕ್ಕಳ ವಸತಿಶಾಲೆಯಲ್ಲಿ ಜೇನು ಕೃಷಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊ ಳ್ಳಲಾಯಿತು.
ಬೆಂಗಳೂರಿನ ಜಿಕೆವಿಕೆ ಜೇನುಕೃಷಿ ವಿಭಾಗ ಹಾಗೂ ಬಿ.ಪಾಳ್ಯದ ಶ್ರೀಸಿದ್ದರಾಮೇಶ್ವರ ಕಿವುಡು ಮಕ್ಕಳ ವಸತಿ ಶಾಲೆಯ ಸಹಯೋಗದಲ್ಲಿ ನಡೆದ ಜೇನು ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಬೆಂಗಳೂರಿನ ಜಿಕೆವಿಕೆಯ ಕೃಷಿ ವಿಜ್ಞಾನಿ ಕೆ.ಟಿ. ವಿಜಯ್‌ಕುಮಾರ್ ಮಾತನಾಡಿ ನಮ್ಮಲ್ಲಿ ನಾಲ್ಕು ವಿಧದ ಜೇನುಹುಳುಗಳಿದ್ದು, ಅವುಗಳಲ್ಲಿ ತುಡುವೆ ಹಾಗೂ ವೆಲ್ಲಿಫ್ರೆರ್ ಜೇನುಗಳು ಸಾಕಲಿಕ್ಕೆ ಯೋಗ್ಯವಾಗಿದೆ. ಜೇನುಹುಳುಗಳ ಗುಣಸ್ವಭಾವ, ಜೀವನಶೈಲಿ ಅರಿತಾಗ ಜೇನುಕೃಷಿ ಮಾಡಲು ಸಾಧ್ಯ, ಜೇನು ಸಾಕಾಣಿಕೆಯಿಂದ ಪರಾಗಸ್ಪರ್ಷ ಕ್ರಿಯೆಯು ಹೆಚ್ಚಿ ರೈತರ ಉತ್ಪನ್ನಗಳು ಹೆಚ್ಚಿನ ಇಳುವರಿ ನೀಡಲಿದೆ ಎಂದರು. ಕೃಷಿ ವಿಜ್ಞಾನಿ ಕೆ.ಎಸ್. ಜಗದೀಶ್ ಮಾಹಿತಿ ನೀಡಿ ಜೇನು ಸಾಕಾಣಿಕೆಯಲ್ಲಿ ಅದರ ಮೌಲ್ಯವರ್ಧನೆಗೆ ಅವಕಾಶವಿದೆ, ಇದರಿಂದ ಉಪ ಉತ್ಪನ್ನಗಳಾದ ಬಿ.ವಿನಮ್, ರಾಯಲ್‌ಜೆಲ್ಲಿ ಹಾಗೂ ಲಿಪ್ಸಿ÷್ಟಕ್ ಬಾಮ್ ತಯಾರಿಸಿ ಲಾಭಗಳಿಸಬಹುದೆಂದರು. ತಾಲೂಕಿನ ತೊರೆಮಾವಿನಲ್ಲಿ ಜೇನುಕೃಷಿ ಮಾಡಿ ಯಶಸ್ವಿಯಾಗಿರುವ ರೈತ ಪ್ರಭಾಕರ್ ಮಾತನಾ ಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಯಸ್ಸಾದ ತಂದೆ, ತಾಯಿಯವರಜೊತೆಯಿದ್ದು ಪ್ರೀತಿಯಿಂದ ಪೋಷಿ ಸಿತ್ತಿರುವ ಯುವಕ ರನ್ನು ಗುರುತಿಸಿ ವಸತಿ ಶಾಲೆಯ ಮುಖ್ಯೋಪಾ ಧ್ಯಾಯರಾದ ಬಿ.ಸಿ. ಸಿದ್ದೇಶ್‌ರವರು ಸನ್ಮಾನಿಸಿ, ಈ ಸನ್ಮಾನ ಇಂದಿನ ಸಮಾಜಕ್ಕೆ ನೀಡುವ ಮಾನವೀ ಯ ಸಂದೇಶವಾಗಿದೆ ಎಂದರು. ಶಿಬಿರದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಚಂದ್ರಮ್ಮ ಚಂದ್ರಶೇಖರಯ್ಯ,ಜ್ಯೋತಿಬಸವರಾಜು ಅದಲಗೆರೆ, ಸಂಜುಶ್ರೀ, ಪ್ರೇರಣಾಶ್ರೀ,ರೋಜಾ, ಬಿ.ಎಂ.ರತ್ಮಮ್ಮ, ರಾಜು ಮುಂತಾದವರಿದ್ದರು.
(Visited 1 times, 1 visits today)