ಕೊರಟಗೆರೆ: ಗಡಿಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸರಕಾರಿ ಮತ್ತು ಖಾಸಗಿ ಬಸ್ಸಿನ ಸೌಲಭ್ಯವಿಲ್ಲದೇ ರಂಗನಾಥ ಅನುಧಾನಿತ ಪ್ರೌಢಶಾಲೆಯ ಆಡಳಿತ ಮಂಡಳಿಯು ಗೂಡ್ಸ್ ವಾಹನದಲ್ಲೇ ೨೮ಜನ ಮಕ್ಕಳನ್ನು ಬೈರೇನಹಳ್ಳಿಯಿಂದ ಅಕ್ಕಿರಾಂಪುರಕ್ಕೆ ಕನ್ನಡ ಪರೀಕ್ಷೆ ಬರೆಯಲು ಕಳುಹಿಸಿರುವ ಘಟನೆ ಶುಕ್ರವಾರ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂಯ ಬೈರೇನ ಹಳ್ಳಿಯ ಶ್ರೀರಂಗನಾಥ ಪ್ರೌಢಶಾಲೆಯ ೨೮ ಜನ ವಿದ್ಯಾರ್ಥಿಗಳು ಬೈರೇನಹಳ್ಳಿಯಿಂದ ಅಕ್ಕಿರಾಂಪುರ ಪರೀಕ್ಷಾ ಕೇಂದ್ರಕ್ಕೆ ಗೂಡ್ಸ್ ವಾಹನದಲ್ಲೇ ಹೋಗಿದ್ದರು. ಪರೀಕ್ಷೆ ಮುಗಿ ಸಿಕೊಂಡು ಹಿಂದಕ್ಕೆ ಬರುವಾಗ ಬೈಚಾಪುರ ಕ್ರಾಸಿನ ನರ್ಸರಿ ಸಮೀಪದ ಮುಖ್ಯರಸ್ತೆ ಸೇತುವೆ ಬಳಿ ಆಗಬೇಕಿದ್ದ ಅನಾಹುತ ತಪ್ಪಿದೆ.
ಬೈರೇನಹಳ್ಳಿಯಿಂದ ಕಡೆಯಿಂದ ಕೊರಟಗೆರೆ ಕಡೆಗೆ ಬರುತ್ತಿದ್ದ ಲಾರಿಯೊಂದು ಸೇತುವೆ ಬಳಿ ವೇಗವಾಗಿ ಬಂದಾಗ ೨೮ಜನ ಮಕ್ಕಳನ್ನು ತುಂಬಿದ್ದ ಗೂಡ್ಸ್ ಟಾಟಾ ಎಸಿ ವಾಹನ ರಸ್ತೆಯಿಂದ ಕೆಳಗಡೆ ಇಳಿಸುತ್ತಾನೆ. ಹಿಂದೇ ಒಬ್ಬರ ಮೇಲೋಬ್ಬರ ನಿಂತಿದ್ದ ಮಕ್ಕಳು ಕೆಳಗೇ ಬಾಗಿ ಮತ್ತೇ ಒಳಗಡೆ ಹೋಗುವುದು ಸಹ ಕಂಡುಬರುತ್ತೇ. ವಾಹನ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಆಗಿಲ್ಲ.
ವಾಹನ ಚಾಲಕ ಮತ್ತು ಮುಂದೆ ಕುಳಿ ತುಕೊಂಡಿದ್ದ ಶಿಕ್ಷಕನನ್ನು ಪ್ರಶ್ನಿಸಿದಾಗ ಸರ ಕಾರಿ ಬಸ್ಸಿನ ಕೊರತೆ ಇದೆ. ಸಮಯಕ್ಕೆ ಸರಿ ಯಾಗಿ ಯಾವುದೇ ವಾಹನ ಸೀಗದಿರುವ ಪರಿಣಾಮ ನಾವು ಗೂಡ್ಸ್ವಾಹನದಲ್ಲೇ ಹೋಗ ಬೇಕಾ ಯಿತು ಅಂತಾರೇ. ಬೆಳಿಗ್ಗೇ ಗೂಡ್ಸ್ ವಾಹನ ಸರಿ ಆದರೇ ಮಧ್ಯಾಹ್ನವು ಸಹ ಬಸ್ಸಿನ ವ್ಯವಸ್ಥೆ ಮುಖ್ಯಶಿಕ್ಷಕರಿಗೆ ಇರಲಿಲ್ಲವೇ. ಗ್ರಾಮೀಣ ಮಕ್ಕಳ ಜೀವದ ಜೊತೆ ಚೆಲ್ಲಾಟ ಬೇಡ ಎಂಬುದಷ್ಟೇ ನಮ್ಮ ಉದ್ದೇಶ.
(Visited 1 times, 1 visits today)