ತುರುವೇಕೆರೆ: ೨೦೨೪-೨೫ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯು ತಾಲ್ಲೂಕಿನ ೮ ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಸುಗಮವಾಗಿ ನಡೆದು; ವಿದ್ಯಾರ್ಥಿಗಳು ಪರೀಕ್ಷೆ ಬರೆದು ನಗುಮೊಗದಿಂದ ಹೊರ ಬರುತ್ತಿದ್ದದು ಕಂದು ಬಂದಿತು.
ಪಟ್ಟಣದಲ್ಲಿ ಜಿಜೆಸಿ ಪ್ರೌಢ ಶಾಲೆ, ಸರಸ್ವತಿ ಭಾಲಿಕಾ ಪ್ರೌಢ ಶಾಲೆ, ಜೆಪಿ ಆಂಗ್ಲಮಾಧ್ಯಮ ಪ್ರೌಢ ಶಾಲೆ, ಮಾಯಸಂದ್ರ ಹೋಬಳಿಯ ಎಸ್.ಬಿ.ಜಿ ವಿದ್ಯಾಲಯ ಟಿ.ಬಿ.ಕ್ರಾಸ್, ನೆಹರೂ ಬಾಲಿಕಾ ಪ್ರೌಢ ಶಾಲೆ ಮಾಯಸಂದ್ರ, ದಬ್ಬೇ ಘಟ್ಟ ಹೋಬಳಿಯ ದಬ್ಬೇಘಟ್ಟ ಗ್ರಾಮದ ಸರ್ಕಾರಿ ಪ್ರೌಢ ಶಾಲೆ, ದಂಡಿನಶಿವರ ಹೋಬ ಳಿಯ ಕೆಪಿಎಸ್ ಶಾಲೆ ದಂಡಿನಶಿವರ ಮತ್ತು ಹುಲ್ಲೇಕೆರೆಯ ಬಸವೇಶ್ವರ ಪ್ರೌಢಶಾಲಾ ಕೇಂದ್ರ ಗಳಲ್ಲಿ ಪರೀಕ್ಷೆಯು ಜರುಗಿತು.
ತಾಲ್ಲೂಕಿನ ೧೬ ಸರ್ಕಾರಿ ಪ್ರೌಢಶಾಲೆ, ವಸತಿ ಶಾಲೆ ೫, ಅನುದಾನಿತ ಪ್ರೌಢ ಶಾಲೆ ೨೩, ಅನುದಾನರಹಿತ ೮, ಮೌಲಾನ ಆಜಾದ್ ಪ್ರೌಢ ಶಾಲೆ ೧ ಒಟ್ಟು ೫೩ ಪ್ರೌಢಶಾಲೆಗಳ ೧೮೨೧ ವಿದ್ಯಾರ್ಥಿ ಗಳು ಪರೀಕ್ಷೆಗೆ ತಮ್ಮ ಹೆಸರು ಗಳನ್ನು ನೋಂದಾಯಿಸಿಕೊAಡಿದ್ದರು. ಆ ಪೈಕಿ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ೩೯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ೧೭೮೨ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಅಮ್ಮಸಂದ್ರದ ಮೈಸೆಂಕೋ ಆಂಗ್ಲ ಪ್ರೌಢ ಶಾಲೆಯ ಮಕ್ಕಳು ಪ್ರಥಮ ಭಾಷೆ ಇಂಗ್ಲೀಷ್ ವಿಷಯದ ಪರೀಕ್ಷೆ ಬರೆದರೆ; ಇನ್ನುಳಿದ ಎಲ್ಲಾ ಶಾಲೆಗಳ ಮಕ್ಕಳು ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ಬರೆದರು.
ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ಕೊಡುವ ಮತ್ತು ಉತ್ತರ ಪತ್ರಿಕೆಗಳನ್ನು ತರಲು ೩ ಮಾರ್ಗಾಧಿಕಾರಿಗಳು ತಂಡ, ೮ ಕೇಂದ್ರಗಳಿಗೂ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ಮೊಬೈಲ್ ಸ್ವಾದೀನಾಧಿಕಾರಿಗಳು, ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕಾ ಪಾಲಕರು ಕೊಠಡಿ ಮೇಲ್ವಿಚಾರಕರು ಒಟ್ಟಾರೆ ೨೦೦ ಸಿಬ್ಬಂದಿಗಳು ಶುಕ್ರವಾರ ಪರೀಕ್ಷಾ ಕಾರ್ಯ ನಿರ್ವಹಿಸಿದರು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆ ರಾ, ವೆಬ್ ಕಾಸ್ಟಿಂಗ್ ಇದ್ದು, ಮಕ್ಕಳು ಸಂತೋ ಷದಿಂದ ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ಬರೆದರು ಎಂದು ತಾಲ್ಲೂಕು ಕ್ಷೇತ್ರ ಶಿಕ್ಷ ಣಾಧಿಕಾರಿ ಎನ್.ಸೋಮಶೇಖರ್ ತಿಳಿಸಿದರು’.
ತಹಶೀಲ್ದಾರ್ ಎನ್.ಎ.ಕುಂಞಅಹಮದ್, ಬಿಇಒ ಎನ್.ಸೋಮಶೇಖರ್, ಜಿಲ್ಲಾ ಡಯಟ್ ತಂಡದ ಅಧಿಕಾರಿಗಳು ಪಟ್ಟಣ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದರು
೨೧ಪೋಟೋ ಶೀರ್ಷಿಕೆ೧ತಾಲ್ಲೂಕಿನ ದಂಡಿನಶಿವರ ಹೋಬಳಿಯ ಪರೀಕ್ಷಾ ಕೇಂದ್ರವೊAದರಲ್ಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಖುಷಿಯಿಂದ ಹೊರ ಬರುತ್ತಿರುವುದು.
(Visited 1 times, 1 visits today)