ಕೊರಟಗೆರೆ: ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರದಸಂತೆ ಸುಂಕ ವಸೂಲಿ, ಬಸ್ಟಾಂಡ್ ಫೀ ವಸೂಲಿ ಹಾಗೂ ದಿನವಹಿ ಸುಂಕ ೨೦೨೫-೨೬ ನೇ ಸಾಲಿನ ವಸೂಲಿಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆದು ೧೩ ಲಕ್ಷ ರೂಗಳಿಗೆ ಬಹಿರಂಗ ಹರಾಜು ಕೂಗುವ ಮೂಲಕ ಬೀಡ್ ದಾರರು ಹಕ್ಕು ಪಡೆದರು.
ಕೊರಟಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅನಿತಾ, ಮುಖ್ಯಾಧಿಕಾರಿ ಉಮೇಶ್ ಹಾಗೂ ಸದಸ್ಯರು ಸೇರಿದಂತೆ ಸಾರ್ವಜನಿಕರ ಸಮಾಕ್ಷಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಾರದಸಂತೆ ಸುಂಕ ವಸೂಲಿ, ಬಸ್ ಸ್ಟಾಂಡ್ ಫೀ ವಸೂಲಿ, ದಿನವಹಿ ಸುಂಕ ವಸೂಲಿ ಹಾಗೂ ಕಛೇರಿಯ ಹಳೆ ನ್ಯೂಸ್ ಪೇಪರ್, ಹಳೆ ಸಾಮಗ್ರಿಗಳ ವಸೂಲಾತಿಗೆ ಮಾ.೨೧ ರಂದು ಪಟ್ಟಣ ಪಂಚಾಯಿತಿ ಮುಂಭಾಗ ೨೦೨೫-೨೬ ನೇ ಸಾಲಿನಲ್ಲಿ ಒಂದು ವರ್ಷದ ಅವದಿಯ ವಸೂಲಿಗೆ ಬಹಿರಂಗ ಹರಾಜು ನಡೆದು ವಾರದಸಂತೆ ಸುಂಕ ವಸೂಲಿ ೫ ಲಕ್ಷ ಒಂದುಸಾವಿರಕ್ಕೆ, ಬಸ್ ಸ್ಟಾಂಡ್ ಫೀ ವಸೂಲಿ ೫ ಲಕ್ಷ ಕ್ಕೆ, ದಿನವಹಿ ಸುಂಕ ವಸೂಲಿ ೩ ಲಕ್ಷ ಹಾಗೂ ಕಛೇರಿಯ ಹಳೆ ನ್ಯೂಸ್ ಪೇಪರ್ ಹಾಗೂ ಹಳೆಯ ಸಾಮಗ್ರಿಗಳಿಗೆ ೫ ಸಾವಿರ ರೂಗಳೊಟ್ಟು ೧೩ ಲಕ್ಷ ೫ ಸಾವಿರ ರೂಗಳಿಗೆ ಸವಾಲ್ ಕೂಗುವ ಮೂಲಕ ಹರಾಜು ಷರತ್ತುಗಳ ನಿಯಮ ದಂತೆ ಭಾಗವಹಿಸಿದ್ದ ಬಿಡ್‌ದಾರರು ಪಡೆದರು.
ಬಹಿರಂಗ ಹರಾಜಿನ ನಂತರ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇ ಶ್ ಅಖೈರು ಬಿಡ್‌ದಾರರು ಹರಾಜು ಮೂಲಕ ಪಡೆದ ಬಾಬ್ತುಗಳನ್ನು ಬೇರೆಯವರಿಗೆ ಪರಭಾರೆ ಮಾಡುವುದು, ವರ್ಗಾಯಿಸುಯವುದು ನಿಷೇದಿ ಸಿರುತ್ತದೆ, ಸಂತೆ, ಬಸ್‌ಸ್ಟಾಂಡ್ ವಸೂಲಿಯನ್ನು ಪಟ್ಟಣ ಪಂಚಾಯಿತಿಯವರು ವಿಧಿಸಿರುವ ಷೆಡ್ಯೂಲ್ ದರದಂತೆ ವಸೂಲು ಮಾಡಬೇಕು ಹಾಗೂ ರಶೀದಿಗಳಿಗೆ ಪಟ್ಟಣ ಪಂಚಾಯಿತಿ ಮುದ್ರೆ ಹಾಕಿಸಿಕೊಳ್ಳವುದು ಖಡ್ಡಾಯವಾಗಿದೆ, ಹರಾಜಿನ ಬಗ್ಗೆ ಪಟ್ಟಣ ಪಂಚಾಯಿತಿ ಆಗಿಂದಾಗ್ಗೆ ವಿಧಿಸುವ ನಿಬಂಧನೆಗಳಿಗೆ ಒಳಪಟ್ಟಿರತ್ತಕ್ಕದ್ದು, ನಿಗದಿಪಡಿಸಿರುವ ಧರಕ್ಕಿಂತ ಹೆಚ್ಚಿಗೆ ವಸೂಲಿ ಮಾಡಕೂಡದು ಮತ್ತು ವಸೂಲಿ ಬಗ್ಗೆ ಕ್ರಮವಾಗಿ ರಸೀದಿ ಪುಸ್ತಕ ಆಖೈರು ಬಿಡ್‌ದಾರರೇ ಸ್ವಂ ತ ಖರ್ಚಿನಿಂದ ಮುದ್ರಿಸಿಕೊಳ್ಳತಕ್ಕದ್ದು. ಬಿಡ್ ದಾರರು ಪಟ್ಟಣ ಪಂಚಾಯಿತಿ ಹಾಗೂ ಸರ್ಕಾರದ ನಿಯಮಗಳಿಗೆ ಒಳಪಟ್ಟಿರಬೇಕು ಎಲ್ಲಾ ಅಧಿಕಾರ ಪಟ್ಟಣ ಪಂಚಾಯಿತಿಗೆ ಸೇರಿರುತ್ತದೆ ಎಂದು ತಿಳಿಸಿದ ಅವರು ಹರಾಜಿನಲ್ಲಿ ಭಾಗವಹಿಸಿದ್ದ ಸಾರ್ವಜನಿಕರನ್ನು ಹಾಗೂ ಬಿಡ್ ದಾರರನ್ನು ಅಬಿನಂದಿಸಿದರು. ಹರಾಜು ಪ್ರಕ್ರಿಯೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನಿತಾ, ಸದಸ್ಯ ರುಗಳಾದ ಎ.ಡಿ.ಬಲರಾಮಯ್ಯ, ಕೆ.ಎನ್.ಲಕ್ಷಿö್ಮನಾರಾಯಣ್, ಪುಟ್ಟನರಸಪ್ಪ, ಕೆ. ಆರ್.ಓಬಳರಾಜು, ಮುಖಂಡರುಗಳಾದ ರಮೇಶ್, ಖಲೀಂಉಲ್ಲಾ, ಗಣೇಶ್, ಪ.ಪಂ. ಆರೋಗ್ಯ ನಿರೀಕ್ಷಕ ಮಹಮದ್ದ ಹುಸೇನ್, ವೇಣುಗೋಪಾಲ್ ಸೇರಿದಂತೆ ಪ.ಪಂ. ಎಲ್ಲಾ ನೌಕರರು ಭಾಗವಹಿಸಿದ್ದರು.
(Visited 1 times, 1 visits today)