ಹುಳಿಯಾರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ೨೦ ಸಾವಿರ ಅಸಹಾಯಕರಿಗೆ ಪ್ರತಿ ತಿಂಗಳು ೧ ಸಾವಿರ ಮಾಸಾಶನವನ್ನು ಕಳೆದ ೩೦ ವರ್ಷಗಳಿಂದ ವಿತರಿಸುತ್ತಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ೧೯೬ ಮಂದಿಗೆ ಮಾಸಾಶನ ನೀಡಲಾಗುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೆಶಕ ದಿನೇಶ್ ತಿಳಿಸಿದರು.
ಹುಳಿಯಾರು ಪಟ್ಟಣದ ಮಾರುತಿನಗರದ ನಿರಾಶ್ರಿತ ಅನಾಥೆ ಲಕ್ಷಮ್ಮ ಅವರಿಗೆ ಕನಕ ಬ್ಯಾಂಕ್ ಅಧ್ಯಕ್ಷ ಗುಜರಿನಾಗಣ್ಣ ಅವರ ದಾನ ನೀಡಿದ ನಿವೇಶನದಲ್ಲಿ ಧರ್ಮಸ್ಥಳ ಯೋಜನೆಯಿಂದ ನಿರ್ಮಿಸಲಾಗಿದ್ದ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
೨೦ ಸಾವಿರ ಅಸಹಾಯಕರಲ್ಲಿ ೮೦೦ ಮಂದಿಗೆ ಮನೆ ಕಟ್ಟಿಕೊಡಲಾಗಿದೆ. ಅಲ್ಲದೆ ಅನಾ ಥರಿಗೆ ಬಟ್ಟೆ, ಪಾತ್ರೆ, ಚಾಪೆ, ಬೆಡ್‌ಶೀಟ್, ಆಹಾರ ಪದಾರ್ಥಗಳನ್ನೂ ಸಹ ಕೊಡುತ್ತಿದೆ. ಜೊತೆಗೆ ಅವರಿಗೆ ಆರೋಗ್ಯದ ಸಮಸ್ಯೆ ಕಂಡುಬAದಾಗ ಸೇವಾಪ್ರತಿನಿಧಿಯ ಮೂಲಕ ಆಸ್ಪತ್ರೆಗೆ ಕರೆದೊಯ್ದು ಚಿಕತ್ಸೆ ಸಹ ಕೊಡಿಸುವುದರ ಮೂಲಕ ನೀವು ನನಗ್ಯಾರೂ ಇಲ್ಲವೆಂದು ಎದೆಗುಂಡಬೇಡಿ ನಿಮ್ಮೊಂದಿಗೆ ಧರ್ಮಸ್ಥಳ ಸಂಸ್ಥೆಯಿದೆ ಎಂದು ಧೈರ್ಯ ತುಂಬಲಾಗುತ್ತಿದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ ವೀರೇಂದ್ರ ಹೆಗಡೆಯವರು ಸಮಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಧರ್ಮಸ್ಥಳ ಯೋಜನೆ ಆರಂಭಿಸಿ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡುವ ಜೊತೆಗೆ ದೇವಸ್ಥಾನ, ಶಾಲೆ, ನೀರಿನ ಘಟಕ, ಹಾಲಿನ ಡೇರಿ ಹೀಗೆ ಅನೇಕ ಸಮಾಜಮುಖಿ ಕಾರ್ಯ ಗಳಿಗೆ ಹಣ ಕೊಡುತ್ತಿದೆ. ಈಗ ಅನಾಥಗೆ ಮನೆ ಕಟ್ಟಿಕೊಟ್ಟಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.
ನಿವೇಶನ ದಾನಿಗಳಾದ ಗುಜರಿನಾಗಣ್ಣ ಹಾಗೂ ಸಿದ್ಧಗಂಗಮ್ಮ, ಪಟ್ಟಣ ಪಂಚಾಯ್ತಿ ಅದ್ಯಕ್ಷೆ ರತ್ನಮ್ಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡ್ಡಿಪುಟ್ಟರಾಜು, ನಿರ್ದೇಶಕ ಜಯಣ್ಣ, ಯೋಜನಾಧಿಕಾರಿ ರಾಮಚಂದ್ರ, ಗಣಪತಿ ದೇವಸ್ಥಾನದ ತಮ್ಮಯ್ಯ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪೂರ್ಣಮ್ಮ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುನಿತಾ, ಮೇಲ್ವಿಚರಕರಾದ ಚೈತ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
(Visited 1 times, 1 visits today)