ತುಮಕೂರು :
ಬಡವನಹಳ್ಳಿ ಪೊಲೀಸ್ ಠಾಣೆ ಮೊ.ನಂ. ೬೦/೨೦೧೯, ಎಸ್.ಸಿ. ಸಂ: ೫೦೩೭/೨೦೧೯ ರಲ್ಲಿ ದಾಖಲಾದ ಠಾಣಾ ಸರಹದ್ದಿನಲ್ಲಿ ಆರೋಪಿ-೦೧ ಶಿವಕುಮಾರ್ @ ಶಿವ @ ಗೆಣಸು ಬಿನ್ ನಂಜಪ್ಪ, ೪೨ ವರ್ಷ ವಯಸ್ಸು, ಮುಗ್ಗೊಂಡನಹಳ್ಳಿ ಗ್ರಾಮ, ಕೊರಟಗೆರೆ ತಾಲ್ಲೋಕು ಮತ್ತು ಕೊಲೆಯಾದ ತುಂಬಾಡಿ ಗ್ರಾಮದ ಗಿರಿಜಮ್ಮ ಕೊಂ. ಲೇ. ಮೂಡಲಗಿರಿಯಪ್ಪ ರವರು ಪರಸ್ಪರ ಸಂಬAಧಿಕರಾಗಿದ್ದು ಗಿರಿಜಮ್ಮ ರವರ ಬಳಿಯಿದ್ದ ಬಂಗಾರದ ವಡವೆಗಳ ಆಸೆಗಾಗಿ ಆರೋಪಿ-೧ ರವರು ಗಿರಿಜಮ್ಮ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿ-೦೨ ಮಂಜುನಾಥ @ ಮಂಜ @ ಮೆಂಟಲ್ ಮಂಜ, ೪೪ ವರ್ಷ, ಮಧುಗಿರಿ ತಾಲ್ಲೋಕು ಬಿಜಾವರ ಗ್ರಾಮ, ರವರೊಂದಿಗೆ ಸೇರಿ ಇಬ್ಬರು ಸಮಾನ ಉದ್ದೇಶದಿಂದ ಪೂರ್ವ ಸಿದ್ದತೆ ಮಾಡಿಕೊಂಡು ದಿ:೦೬-೦೬-೧೯ ರಂದು ಮೃತೆ ಗಿರಿಜಮ್ಮ ರವರನ್ನು ಮಧ್ಯಾಹ್ನ ೧೨-೩೦ ಗಂಟೆಯಲ್ಲಿ ತುಂಬಾಡಿಯಿAದ ಕೆ.ಎ-೦೬-ಡಿ-೩೨೭೯ ಟಾಟಾ ಇಂಡಿಕಾ ವಿಸ್ತಾ ಕಾರಿನಲ್ಲಿ ಗರಣಿ ಹೊಸಕೋಟೆಗೆ ಮಟನ್ ಊಟಕ್ಕೆ ಹೋಗಿಬರೋಣ ಎಂತಾ ಹೇಳಿ ಕರೆದುಕೊಂಡು ಬಂದು ಅದೇ ದಿವಸ ಸಂಜೆ ೦೬-೩೦ ಗಂಟೆಗೆ ಬಡವನಹಳ್ಳಿ ಠಾಣಾ ಸರಹದ್ದು ಮಾಯಗೊಂಡನಹಳ್ಳಿ ಕ್ರಾಸ್ ಹತ್ತಿರದ ರಸ್ತೆ ಬದಿಯ ಕೆಂಪಚೆನ್ನೇನಹಳ್ಳಿ ಸರ್ವೆ ನಂ:೮/೧ರ ಪಾಳು ಜಮೀನಿಗೆ ಕರೆದುಕೊಂಡು ಬಂದು ಹೊಂಗೆಗಿಡದ ಮರೆಯಲ್ಲಿ ಕಾರುನಿಲ್ಲಿಸಿ ಕಾರಿನಲ್ಲಿಯೇ ಆರೋಪಿ-೦೧ ರವರು ಹಗ್ಗವನ್ನು ಗಿರಿಜಮ್ಮಳ ಕುತ್ತಿಗೆಗೆ ಬಿಗಿದ್ದಿದ್ದು ಕೊಲೆ ಮಾಡುವ ಉದ್ದೇಶದಿಂದ ಆರೋಪಿ-೦೧ & ೦೨ ರವರು ಹಗ್ಗವನ್ನು ಬಿಗಿಯಾಗಿ ಎಳೆದು ಆರೋಪಿ-೦೧ ರವರು ಗಿರಿಜಮ್ಮಳ ಎದೆಗೆ ಕಾಲಿನಿಂದ ಒದ್ದು ಕೈಯಿಂದ ಗುದ್ದಿ ಇಬ್ಬರೂ ಸೇರಿ ಕೊಲೆ ಮಾಡಿರುತ್ತಾರೆ.
ನಂತರ ಆಕೆಯ ಬಳಿಯಿದ್ದ ಸುಮಾರು ೧,೮೩,೫೦೦/- ರೂ ಬೆಲೆ ಬಾಳುವ ಬಂಗಾರದ ವಡವೆಗಳನ್ನು ಆರೋಪಿ-೦೧ ರವರು ತೆಗೆದುಕೊಂಡು ಅದೇ ಕಾರಿನಲ್ಲಿ ಗಿರಿಜಮ್ಮಳ ಮೃತದೇಹದೊಂದಿಗೆ ರಂಟವಾಳಕ್ಕೆ ಬಂದು ಸಾಕ್ಷಿ-೦೨ ಹೇಮಂತ ರವರ ಅಂಗಡಿಯಲ್ಲಿ ೨ನೇ ಆರೋಪಿ ಡಿಸೇಲ್ ತೆಗೆದುಕೊಂಡು ಸಂಜೆ ೦೭-೦೦ ಗಂಟೆ ಸಮಯದಲ್ಲಿ ಆಂದ್ರ ಗಡಿಭಾಗದ ರಸ್ತೆ ಬದಿಯಲ್ಲಿದ್ದ ಸಾಕ್ಷಿ-೦೧ ಪುಲಮಘಟ್ಟದ ನಾರಾಯಣಪ್ಪ ರವರ ಜಮೀನಿನಲ್ಲಿ ಕೊಲೆ ಕೃತ್ಯದ ಸಾಕ್ಷö್ಯನಾಶ ಮಾಡುವ ಸಲುವಾಗಿ ಗಿರಿಜಮ್ಮಳ ಮೃತ ದೇಹಕ್ಕೆ ಡೀಸೆಲ್ ಹಾಕಿ ಸುಟ್ಟು ಹಾಕಿ ಮೃತಳ ಮೊಬೈಲ್ ಮತ್ತು ಸಿಮ್ ಅನ್ನು ಸಿಗದಂತೆ ಎಲ್ಲೋ ಎಸೆದು ಸಾಕ್ಷö್ಯ ನಾಶ ಪಡಿಸಿ ಮೃತಳ ಮೈಮೇಲಿನ ಒಡವೆಗಳನ್ನು ಕೊರಟಗೆರೆಯ ಮುತ್ತೂಟ್ ಪೈನಾನ್ಸ್ನಲ್ಲಿ ನೆಕ್ಲೆಸ್ ಮತ್ತು ಉಂಗುರ ಅಡವಿಟ್ಟು ಸಾಲ ಪಡೆದು ಇನ್ನುಳಿದ ಒಡವೆಗಳನ್ನು ತೋವಿನಕೆರೆಯ ಭಾಗ್ಯಲಕ್ಷಿö್ಮÃ ಜ್ಯೂವೆರ‍್ಸ್ಗೆ ಹೊಸದಾಗಿ ಸರ ತಾಳಿ ಓಲೆ ಮಾಡಿಕೊಡುವಂತೆ ಕೊಟ್ಟುಬಂದಿದ್ದು ತನಿಖೆಯಿಂದ ದೃಢಪಟ್ಟ ಮೇರೆಗೆ ಆರೋಪಿತನÀ ವಿರುದ್ಧ ಭಾ.ದಂ.ಸA ಕಲಂ ೩೦೨, ೨೦೧, ೪೦೪ರ ಅಡಿಯಲ್ಲಿ ಅಂದಿನ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾಕರ್. ಕೆ ರವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದÄ, ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ ಮಾನ್ಯ ೪ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಯಾದವ ಕರಕೇರ ರವರು ದಿನಾಂಕ: ೨೪-೦೩-೨೦೨೫ ರಂದು ಇಬ್ಬರೂ ಆರೋಪಿತರಿಗೆೆ ಭಾರತೀಯ ದಂಡ ಸಂಹಿತೆಯ ಕಲಂ: ೩೦೨, ೨೦೧, ೪೦೪ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. ೬೦,೦೦೦/- ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಬಿ.ಎಂ. ನಿರಂಜನಮೂರ್ತಿ, ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.