ತುರುವೇಕೆರೆ: ತಾಲ್ಲೂಕಿನ ಹಲವೆಡೆ ಬಿರುಗಾಳಿ, ಗುಡುಗು, ಮಿಂಚು ಸಹಿತ ಭಾನುವಾರ ರಾತ್ರಿ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ, ದೊಂಬರನಹಳ್ಳಿ ಗೊಲ್ಲರಹಟ್ಟಿ, ಅಕ್ಕಳಸಂದ್ರ ಗೊಲ್ಲರಹಟ್ಟಿ, ಅಕ್ಕಳಸಂದ್ರ, ತೋವಿ ನಕೆರೆ, ಹರಿಕಾರನಹಳ್ಳಿ, ಸೊಪ್ಪನಹಳ್ಳಿ, ಕೊಂಡಜ್ಜಿ ಕ್ರಾಸ್, ಹಟ್ಟಿಹಳ್ಳಿ, ಹಾಲದೇವರಹಟ್ಟಿ, ಕುರುಬರಹಳ್ಳಿ ಬ್ಯಾಲಾ, ಸಂಪಿಗೆ ಹೊಸಹಳ್ಳಿ, ಆಯರಹಳ್ಳಿ, ಸಂಪಿಗೆ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಅದೇ ರೀತಿ ಮಾಯಸಂದ್ರ, ತುರುವೇಕೆರೆ ಪಟ್ಟಣ, ದಂಡಿನಶಿವರ ಮತ್ತು ದಬ್ಬೇಘಟ್ಟ ಗ್ರಾಮದ ಆಸುಪಾಸು ಸಾಧಾರಣ ಮಳೆಯಾಗಿದೆಂದು ಇಲಾಖಾ ಮೂಲಗಳಿಂದ ತಿಳಿದು ಬಂದಿದೆ.
ರಾತ್ರಿ ಬೀಸಿದ ಬಿರುಗಾಳಿಗೆ ಶ್ರೀರಂಗಪಟ್ಟಣ-ಬೀದರ್ ೧೫೦ಎ ರಾಷ್ಟ್ರೀಯ ಹೆದ್ದಾರಿ ಬಾಣಸಂದ್ರ ಕಾಲೋನಿ ಬಳಿಯ ರಸ್ತೆ ಮೇಲೆ ಹಾಗು ವಿದ್ಯುತ್ ಕಂಬದ ಮೇಲೆ ಬೃಹತ್ ಗ್ರಾತ್ರದ ಹಗಲರಾಣಿ ಮರದ ಕೊಂಬೆ ಮುರಿದು ಬಿದ್ದು ಕೆಲ ಗಂಟೆಯವರೆಗೆ ವಾಹನ ಸಂಚಾರ ತೊಂದರೆಯಾಯಿತು. ಇನ್ನೂ ಮರದ ಕೊಂಬೆ ಬಿದ್ದು ೪ ವಿದ್ಯುತ್ ಕಂಬಗಳು ಮುರಿದಿದ್ದು ನಿರಂತರ ಜ್ಯೋತಿಯ ವಿದ್ಯುತ ಕೇಬ ಲ್ ನೆಲಕ್ಕೆ ಬಿದ್ದಿದೆ. ಅದೇ ರೀತಿ ತುಯ್ಯಲಹಳ್ಳಿ೨, ಹುಲಿಕೆರೆ೨, ಮುನಿಯೂರಿನಲ್ಲಿ ೩ ವಿದ್ಯುತ್ ಕಂಬಗಳು ಮುರಿದು ಲೈನ್ ತುಂಡರಿಸಿ ನಿನ್ನೆ ರಾತ್ರಿ ಕೆಲ ಗಂಟೆಯತನಕ ವಿದ್ಯುತ್ ವ್ಯತ್ಯಯವಾಗಿತ್ತು. ಆಗೆಯೇ ಗೋರಾ ಘಟ್ಟ ಗ್ರಾಮದ ನಿವಾಸಿ ಶಾರದ ಮ್ಮನವರ ಮನೆಯ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದವು. ಮಾಯಸಂದ್ರ ಹೋಬಳಿಯ ಅಜ್ಜನಹಳ್ಳಿಯ ಮನೆಯೊಂದರ ಮನೆಯ ಶೀಟ್ ಹಾರಿ ಹೋಗಿ ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಕಳೆದ ಎರಡು ತಿಂಗಳುಗಳಿAದ ಬಿಸಿಲಿ ಝಳಕ್ಕೆ ನೀರಿಲ್ಲದೆ ಹೈರಾ ಣಾಗಿದ್ದ ರೈತರ ತೆಂಗು, ಅಡಿಕೆ, ಬಾಳೆ ಮತ್ತು ಜಾನು ವಾರು ಮೇವಿನ ಬೆಳೆಗಳಿಗೆ ಜೀವ ಕಳೆಯನ್ನು ಮಳೆ ತಂದಿದೆ. ಹಾನಿಯಾದ ಸ್ಥಳಕ್ಕೆ ಬೆಸ್ಕಾಂ ಶಾಖಾಧಿಕಾರಿ ಸೋಮೇಖರ್, ವಾಣಿ ಮತ್ತು ಸಿಂಬ್ಬAದಿಗಳು ಭೇಟಿ ನೀಡಿ ತೆರವು ಕಾರ್ಯಚರಣೆ ನಡೆಸಿದ್ದಾರೆ.
(Visited 1 times, 1 visits today)