ಚಿ.ನಾ.ಹಳ್ಳಿ : ತಾಲೂಕಿನ ಹಂದನಕೆರೆ ಹೋಬಳಿಯ ಬೆಳಗುಲಿ ಹೊನ್ನಮರಡಿ ಶ್ರೀ ರಂಗನಾ ಥಸ್ವಾಮಿ ಜಾತ್ರಾ ಮಹೋತ್ಸವ ಏ ೬ ರಿಂದ ೧೫ರವರೆಗೆ ನಡೆಯಲಿದೆ.
ಏ. ೬ ರಂದು ಧ್ವಜಾರೋಹಣ, ಹೊನ್ನಮರಡಿ ಬೆಟ್ಟದಲ್ಲಿ ಕಳಸ ಸ್ಥಾಪನೆ, ೭ ರಂದು ಹೊನ್ನಮರಡಿ ಬೆಟ್ಟದಲ್ಲಿ ಅನ್ನ ದಾಸೋಹ, ಹನುಮಂತೋತ್ಸವ, ೮ ರಂದು ಗರುಡೋತ್ಸವ, ೯ ರಂದು ಸರ್ಪೋತ್ಸವ, ೧೦ ರಂದು ಅಶ್ವರೋಹಣ, ೧೧ ರಂದು ಧ್ವಜರೋಹಣೋತ್ಸವ, ನೊರೊಂದಡೆ ಸೇವೆ, ೧೨ ರಂದು ಬೆಳಗುಲಿ ಗ್ರಾಮದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಅಂದು ರಾತ್ರಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ , ರಸಮಂಜರಿ ಹಮ್ಮಿಕೊಳ್ಳಲಾಗಿದೆ. ೧೩ ರಂದು ಆಳು ಪಲ್ಲಕ್ಕಿ ಉತ್ಸವ, ೧೪ ರಂದು ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಕೊನೆಯ ದಿನವಾದ ೧೫ ರಂದು ಗಂಗಸ್ನಾನ, ಅಗ್ನಿ ಕೊಂಡೋತ್ಸವ, ಅವಭೃತ ಸ್ನಾನ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
(Visited 1 times, 1 visits today)