ತುರುವೇಕೆರೆ:
ಜಾತಿ, ಮತ, ಧರ್ಮಗಳೆಂಬ ಸೀಮಾತೀತ ಎಲ್ಲೆಯನ್ನೂ ಮೀರಿದ ಆಶಯಗಳನ್ನು ಹೊಂದಿರುವ ರೋಟರಿ ಸಂಸ್ಥೆ ದೇಶದಾದ್ಯಂತ ಹೆಚ್ಚಿನ ಜನಮನ್ನಣೆ ಗಳಿಸಿಕೊಂಡಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಸುರೇಶ್‍ಹರಿ ಅಭಿಪ್ರಾಯಪಟ್ಟರು.
ಪಟ್ಟಣದ ಜೆ.ಪಿ, ಆಂಗ್ಲಶಾಲಾ ಆವರಣದಲ್ಲಿ ತಾಲ್ಲೂಕು ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ರೋಟರಿ ಜಿಲ್ಲಾ-3190 ರಾಜ್ಯಪಾಲಾರ ಅಧಿಕೃತ ಭೇಟಿ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಶುದ್ದಕುಡಿಯುವ ನೀರಿನ ಘಟಕ ಸ್ಥಾಪನೆ ಸೇರಿದಂತೆ ಜನರಿಗೆ ಅನುಕೂಲವಾಗುವ ಇನ್ನು ಹತ್ತಾರು ಶಾಶ್ವತ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ರೋಟರಿ ಕ್ಲಬ್ ತೊಡಗಿಸಿಕೊಳ್ಳಬೇಕು. ದುಡಿಮೆಯ ಸ್ವಲ್ಪಭಾಗವನ್ನಾದರೂ ಸಮಾಜಕ್ಕೆ ಮರಳಿ ನೀಡುವ ಎಷ್ಟೋ ಮಂದಿ ದಾನಿಗಳಿದ್ದಾರೆ. ಅವರಿಂದ ದಾನ ಪಡೆದು ಗ್ರಾಮೀಣ ಪ್ರದೇಶದ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸಿ ಎಂದು ರೋಟರಿ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಸಾರ್ವಜನಿಕರ ಹಿತಕ್ಕಾಗಿ ರೋಟರಿ ಸದಸ್ಯರು ಹಣದ ಬಿಕ್ಷೆ ಬೇಡುವುದರಲ್ಲಿ ಯಾವುದೇ ಕೀಳಿರುಮೆ ಉಂಟಾಗದು. ತನ್ನ ಕೆಲಸದಲ್ಲಿ ಸ್ವಾರ್ಥ, ಅಂಜಿಕೆ ಎಣಿಸದೆ ನಿಜಸೇವೆಯಲ್ಲಿ ತೊಡಗಿಸಿಕೊಳ್ಳಿ. ಹಣಗಳಿಸುದೇ ಜೀವನದ ಪ್ರಧಾನ ಗುರಿಯಲ್ಲಿ ತಾನಿರುಷ್ಟು ದಿನ ಸಮಾಜದ ಅಸಹಾಯಕರ ದನಿಯಾಗ ಬೇಕು; ಆಗ ಮಾತ್ರ ಬದುಕಿಗೊಂದು ಮೌಲ್ವಿಕತೆ ಪ್ರಾಸ್ತವಾಗುತ್ತದೆ ಎಂದರು.
ಇದೇ ವೇಳೆ ಸಮಾರಂಭದಲ್ಲಿ ರೋಟರಿ ಸದಸ್ಯರಿಂದ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ರೋಟರಿ ಉದ್ಯಾನವನ ಮತ್ತು ರೋಟರಿ ಭವನ ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ನಂತರ ನೂತನ ಜಿಲ್ಲಾ ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಅವರನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರೋಟರಿ ತಾಲ್ಲೂಕು ಅಧ್ಯಕ್ಷ ಡಾ.ಚೇತನ್, ಸದಸ್ಯರಾದ ಬಸವರಾಜು, ಥಾಮಸ್, ಎನ್.ಆರ್.ಜಯರಾಮ್, ನಂಜೇಗೌಡ, ಲೋಕೇಶ್, ಪ್ರಕಾಶ್‍ಗುಪ್ತಾ, ತುಕಾರಾಮ್, ರಾಜಣ್ಣ, ಗ್ಯಾಸ್‍ಪ್ರಭು, ದೇವರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ನಿರ್ದೇಶಕ ಷಣ್ಮುಖಪ್ಪ, ಚಿದಂಬರೇಶ್ವರ ಉಚಿತ ಗ್ರಂಥಾಲಯದ ಟಿ.ರಾಮಚಂದ್ರು ಮತ್ತು ಇತರರು ಇದ್ದರು.