ತುಮಕೂರು: ನಗರದ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಅಗಳಕೋಟೆ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ಎಸ್‌ಎಸ್‌ಐಟಿ ಕ್ಯಾಂಪಸ್, ಮರಳೂರು, ತುಮಕೂರು. ಈದಿನ ಡಾಟ್ ಕಾಮ್ ಹಾಗೂ ಶ್ರೀ ಸಿದ್ಧಾ ರ್ಥ ಪ್ರಥಮ ದರ್ಜೆ ಕಾಲೇಜು (ಪತ್ರಿಕೋದ್ಯಮ ವಿಭಾಗ) ಇವರ ಸಹಯೋಗದಲ್ಲಿ ಮಾರ್ಚ್ ೨೭ ಮತ್ತು ೨೮ರಂದು “ಡಿಜಿಟಲ್ ಮಾಧ್ಯಮ: ಸವಾಲು ಮತ್ತು ಸಾಧ್ಯತೆಗಳು” ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.
ಗುರುವಾರ ಬೆಳಗ್ಗೆ ೧೦.೦೦ಕ್ಕೆ ನಡೆಯುವ ಕಾರ್ಯಾ ಗಾರವನ್ನು ಕರ್ನಾಟಕ ಸರ್ಕಾರದ ಗೃಹ ಸಚಿವರು ಹಾಗೂ ಸಾಹೇ ವಿವಿಯ ಕುಲಾಧಿಪತಿಗಳಾದ ಡಾ. ಜಿ.ಪರಮೇಶ್ವರ ಅವರು ಉದ್ಘಾಟನೆ ಮಾಡಲಿದ್ದಾರೆ. ತುಮಕೂರು ಜಿಲ್ಲಾಧಿಕಾರಿಯಾದ ಶ್ರೀಮತಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಪತ್ರಕ ರ್ತರಾದ ಡಿ.ಉಮಾಪತಿ ಅವರು “ಉತ್ತಮ ಪತ್ರಕ ರ್ತರಾಗುವುದು ಹೇಗೆ..? ಮತ್ತು ತಯಾರಿ” ವಿಷಯ ಕುರಿತು ಮಾತನಾಡಲಿದ್ದಾರೆ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಪೂರ್ಣನಂದ್ ಡಿ.ಎಸ್, ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹ ಆಡಳಿತಾಧಿಕಾರಿಗಳಾ ದ ಖಲಂದರ್ ಪಾಷ ಅವರು ಅತಿಥಿಗಳಾಗಿ ಭಾಗವಹಿ ಸಲಿದ್ದಾರೆ. ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ.ಟಿ.ಮುದ್ದೇಶ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ೨.೩೦ ರಿಂದ ೪.೦೦ರವರೆಗೆ ಗೋಷ್ಠಿ ನಡೆಯ ಲಿದ್ದು, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇ ಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ರಮೇಶ್ ಮಣ್ಣೆ, ಪತ್ರಕರ್ತರಾದ ಚಂದನ್ ಡಿ.ಎನ್, ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಸಂತೋಷ್ .ಹೆಚ್.ಎಂ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಎರಡನೇ ದಿನದ ಕಾರ್ಯಾಗಾರವು ಮಾರ್ಚ್ ೨೮ ಬೆಳಗ್ಗೆ ೧೦ ರಿಂದ ೧೧.೩೦ರವರೆಗೆ ನಡೆಯಲಿದ್ದು, “ಡಿಜಿಟಲ್ ಮಾಧ್ಯಮ-ಸಾಮಾಜಿಕ ಪರಿವರ್ತನೆಗೆ ಇರುವ ಹಾದಿಗಳು” ಕುರಿತು ಪತ್ರಕರ್ತ ಡಾ. ಎಚ್.ವಿ.ವಾಸು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ ೨.೦೦ ರಿಂದ ೩.೩೦ರವರೆಗೆ ನಡೆಯುವ ಗೋಷ್ಠಿಯಲ್ಲಿ “ಫ್ಯಾಕ್ಟ್ ಚೆಕ್ – ಯಾವುz ÀÄ ನಿಜ?” ಕುರಿತು ಪತ್ರಕರ್ತರಾದ ಮುತ್ತುರಾಜು ವಿಷಯ ಮಂಡನೆ ಮಾಡಲಿದ್ದಾರೆ.
ಸಂಜೆ ೪ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ನುಡಿಯನ್ನು ಸಾಹೇ ವಿಶ್ವವಿದ್ಯಾನಿಲಯ, ಕುಲಪತಿಗಳಾದ ಡಾ. ಕೆ.ಬಿ.ಲಿಂಗೇಗೌಡ, ಕಾರ್ಯಾಗಾರದಲ್ಲಿ ಭಾಗವಹಿ ಸುವವರಿಗೆ ಪ್ರಮಾಣ ಪತ್ರ ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ .ಕೆ.ವಿ ವಿತರಿಸಲಿದ್ದಾರೆ.
(Visited 1 times, 1 visits today)