ಪಾವಗಡ: ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಡಿ ೬ ವರ್ಷದ ಮಕ್ಕಳ ಮತ್ತು ಗರ್ಭಿಣಿ ಹಾಗೂ ಬಾಣಂತಿ ತಾಯಂದಿರಿಗೆ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದ ಅನುಸಾರ ಅಕ್ಕಿ, ತರಕಾರಿ, ಬೆಳೆಗಳು, ಗೋಧಿ ಸಕ್ಕರೆ ಮೊಟ್ಟೆ ಇತ್ಯಾದಿಗಳನ್ನು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಮೂಲಕ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹಾಗೂ ದೈಹಿಕ ಆರೋಗ್ಯಕ್ಕೆ ಬಲ ನೀಡುವ ಸದುದ್ದೇಶದಿಂದ ಪೋಶಣ್ ಅಭಿಯಾನ ಯೋಜನೆ, ಮಾತೃಪೂರ್ಣ ಯೋಜನೆ, ಕ್ಷೀರಭಾಗ್ಯ ಹಾಗೂ ಸೃಷ್ಟಿ ಇತ್ಯಾದಿ ಯೋಜನೆಗಳನ್ನು ಪ್ರತಿಷ್ಠಾತ್ಮಕವಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಗ್ಯೂ ಅಧಿಕಾರಿಗಳ ಹಣದಾಸೆ ಮತ್ತು ಅಧಿಕಾರ ದುರುಪಯೋಗ ದಿಂದಾಗಿ ಯಾವುದೇ ಯೋಜನೆಯು ಸಂಪೂರ್ಣವಾಗಿ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ತಲುಪದೆ ಇರುವುದರಿಂದ ಸಫಲತೆ ಕಾಣ ದೆ ಸರ್ಕಾರದ ಹಣ ಪೋಲಾಗುತ್ತಿರುವುದು ವಿಪರ್ಯಾ ಸವೆ ಸರಿ. ಇದಕ್ಕೆ ನಿದರ್ಶನ ಪಾವಗಡ ಶಿಶುಅಭಿವೃದ್ಧಿ ಯೋಜನೆಯ ಅಕ್ರಮಗಳ ಕರ್ಮಕಾಂಡವೇ ಸಾಕ್ಷಿ ಆಗಿರುತ್ತದೆ. ಪಾವಗಡ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಸುಮಾರು ೩೩೬ ಅಂಗನವಾಡಿ ಕೇಂದ್ರಗಳಿಗೆ ಪೂರಕ ಪೌಷ್ಟಿಕ ಆಹಾರ ಸರಬರಾಜಾಗುತ್ತಿದ್ದು, ಬಹುತೇಕ ಪದಾರ್ಥಗಳನ್ನು ಕೆ ಜಿ ಪ್ಯಾಕೆಟ್ ನಲ್ಲಿ ಮತ್ತು ಕೆಲವು೭೭೫ಗ್ರಾಂ ಪ್ಯಾಕೆಟ್ ನಲ್ಲಿ ನೀಡುತ್ತಿದ್ದು ಸರಿ ಅಷ್ಟೇ.
ಇತ್ತೀಚೆಗೆ ಕೆಲವು ಕೇಂದ್ರಗಳಿಗೆ ಭೇಟಿ ನೀಡಿ ಆಹಾರ ಪದಾರ್ಥಗಳ ಪ್ಯಾಕೆಟ್ಗಳನ್ನು ಪರಿಶೀಲಿಸಿ ತೂಕ ಮಾಡಿ ನೋಡಿದಾಗ ಸುಮಾರು ೧೦೦ ಗ್ರಾಮಗಳಷ್ಟು ಪ್ರಮಾಣ ಕಡಿಮೆ ಇರುವುದು ಕಂಡುಬAದಿರುತ್ತದೆ..
ಟನ್ನುಗಟ್ಟಲೆ ಆಹಾರ ಪದಾರ್ಥಗಳಲ್ಲಿ ಒಂದೊAದು ಪ್ಯಾಕೆಟಿನಲ್ಲಿ ಸುಮಾರು ೫೦ ಅ ಥವಾ ೧೦೦ ಗ್ರಾಂ ಕಡಿಮೆ ವಿತರಣೆ ಆಗುತ್ತಿದ್ದು, ಬಾರಿ ಗೋಲ್ಮಾಲ್ ಮಾಡಿ ಅಕ್ರಮ ವೆಸಗಿ ತ್ತಿರುವುದು ತುಂಬಾ ಗಂಭೀರವಾದ ಅ ವ್ಯವಹಾರವಾಗಿರುತ್ತದೆ. ಈ ಬಗ್ಗೆ ಜಿಲ್ಲಾಡಳಿತವುಸಮಗ್ರ ತನಿಖೆ ನಡೆಸಿದ್ದಲ್ಲಿ ಇನ್ನಷ್ಟು ಅಕ್ರಮಗಳು ಬಯಲಾಗುವ ಸಾಧ್ಯತೆ ಇರುತ್ತದೆ ಎಂದು ಸಾರ್ವಜನಿಕರು ಅಗ್ರಹ ಪಡಿಸಿರು ತ್ತಾರೆ. ಕಡಿಮೆ ಪ್ರಮಾಣದ ಆಹಾರ ಪದಾರ್ಥಗಳು ಸರಬರಾಜಾಗುತ್ತಿದ್ದು ಇದರಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಬಡಪಾಯಿ ಅಂಗನವಾಡಿ ಕಾರ್ಯ ಕರ್ತೆಯರನ್ನು ಬಲಿ ಮಾಡಲಾಗುತ್ತಿದೆ ಅವರು ಅಧಿಕಾರಿಗಳನ್ನು ಪ್ರಶ್ನಿಸಲು ಹೆದರಿ,
ಕೊಟ್ಟಿರುವಂತಹ ಪದಾರ್ಥಗಳನ್ನು ಸ್ವೀಕರಿಸಿರುತ್ತಾರೆ. ಹಾಗೆಯೇ ಕಾರ್ಯಕರ್ತರ ದೂರಿನ ಪ್ರಕಾರ ಬಹುತೇಕ ಕೇಂದ್ರಗಳಲ್ಲಿ ಮೂರು ನಾಲ್ಕು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳು ಬಿದ್ದಿರುತ್ತದೆ ಆದಾಗಿಯೂ ಪ್ರತಿ ತಿಂಗಳು ಮತ್ತೆ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ತಂದು ತಂದು ಹಾಕುತ್ತಾರೆ.. ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಪದಾರ್ಥಗಳನ್ನು ನೀಡಿದ್ದಲ್ಲಿ ನಾವು ಹೇಗೆ ಖರ್ಚು ಮಾಡುವುದು ಎಂದು ಅಂಗನವಾಡಿ ಕಾರ್ಯಕರ್ತರು ಗೋಳಾ ಡಿರುತ್ತಾರೆ.ಅ ಕಸ್ಮಾತ್ ಆಹಾರ ಪದಾರ್ಥಗಳು ಅವಧಿ ಮೀರಿದ್ದಲ್ಲಿ ನಮ್ಮನ್ನೇ ಹೊಣೆ ಮಾಡಿ ಬಲಿಪಶು ಮಾಡಲಾಗುತ್ತದೆ ಎಂದು ಅವರು ಅಳಲು ತೋಡಿಕೊಂಡಿರುತ್ತಾರೆ. ಅಧಿಕಾರಿಗಳ ನಿರ್ಲಕ್ಷ ಮತ್ತು ಕರ್ತವ್ಯ ಲೋಕದಿಂದ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಅಂಗನವಾಡಿಯಲ್ಲಿ ಆಹಾರ ಪದಾರ್ಥಗಳು ರಾಶಿ ರಾಶಿ ಬಿದ್ದಿರುವುದು ವಿಷಾದನೀಯವಾಗಿರುತ್ತದೆ. ಅಧಿಕಾರಿಗಳ ಮತ್ತು ಸರಬರಾಜುದಾರರ ಕುಮ್ಮಕ್ಕಿನಿಂದ ಸುಮಾರು ನೂರು ಗ್ರಾಮಗಳಷ್ಟು ಕಡಿಮೆ ಪ್ರಮಾಣ ದಲ್ಲಿ ಆಹಾರ ಪದಾರ್ಥಗಳನ್ನು ನೀಡುತ್ತಿದ್ದು ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದು .ಗರ್ಭಿಣಿಯರಿಗೆ ನೀಡುವ ಹೆಸರುಕಾಳಿನಲ್ಲಿ ಹುಳುಗಳು, ಮೊತ್ತವು ಯಾರ ಜೇಬಿಗೆ ಹೋಗುತ್ತಿದ್ದೀಯೊ ತನಿಖೆಯಿಂದ ಅಷ್ಟೇ ಗೊತ್ತಾಗಬೇಕಾಗಿದೆ. ತಾಲೂ ಕಿನ ಮದ್ದೆ ಅಂಗನವಾಡಿ ಕೇಂದ್ರದ ಸಹಾಯಕಿಯು ೨೦೨೪ ಜೂನ್ ನಿಂದ ಅನ್ವಯ ಆಗುವಂತೆ ರಾಜೀ ನಾಮೆ ಸಲ್ಲಿಸುವುದು ಕಳೆದ ಏಪ್ರಿಲ್ ಇಂದ ಕೆಲಸಕ್ಕೆ ಹಾಜರಾಗುತ್ತಿಲ್ಲ ಆದರೆ ಸಿಡಿಪಿಓ ಅವರು ಸದರಿ ಯವರ ರಾಜೀನಾಮೆ ಪತ್ರವನ್ನು ಅಂಗೀಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಡದೆ ಅವರಿಗೆ ಪುಕ್ಕಟೆ ಸಂಬಳವನ್ನು ಪಾವತಿ ಮಾಡಿರುತ್ತಾರೆ ಮೇಲಾಗಿ ದಿನಾಂಕ ೧೭.೩.೨೦೨೫ರಂದು ಕಾರ್ಯಕರ್ತಗೆ ಕಚೇರಿಗೆ ಕಳುಹಿಸಿಕೊಂಡು,ಒAದು ವರ್ಷದ ಅಟೆಂಡೆನ್ಸ್ ಹಾಕಿಸಿರುತ್ತಾರೆ ಹಾಗೂ ಸಹಾಯಕಿಯು ರಾಜೀನಾಮೆ ಹಿಂಪಡೆದು. ಸದರಿ ದಿನದಂದು ಮತ್ತೆ ರಾಜೀನಾಮೆ ಪತ್ರ ನೀಡಿದಂತೆ ದಾಖಲಾತಿಗಳನ್ನು ಸೃಷ್ಟಿಸಿ. ಕಾರ್ಯಕರ್ತಯಿಂದ ಬಲವಂತವಾಗಿ ಹಾಜರಾತಿ ಪುಸ್ತಕದಲ್ಲಿ ಬರೆಸಿರುತ್ತಾರೆ. ಆ ದರೆ ಸದರಿ ಸಹಾಯಕಿರಾಜೀನಾಮೆ ನೀಡಿದ್ದು ಹಾಗೂ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಗೈರು ಹಾಜರಾಗಿದ್ದು ಇಡೀ ಗ್ರಾಮಕ್ಕೆ ಗೊತ್ತಿರುವ ವಿಷಯವಾಗಿರುತ್ತದೆ. ಆದಾಗ್ಗ್ಯು ಮೇಲಧಿಕಾರಿಗಳು ಯಾವ ಆ ಧಾರದ ಮೇಲೆ ಯಾವ ಧೈರ್ಯದ ಮೇಲೆ ಈ ರೀತಿ ಅಕ್ರಮ ವೆಸಿಗಿರುತ್ತಾರೋ ಅವರನ್ನು ಮೆಚ್ಚಲೇಬೇಕಾಗುತ್ತದೆ. ಸದರಿ ಅಧಿಕಾರಿಗಳಿಗೆ ರಾಜಕೀಯ ಬೆಂಬಲ ಪುಷ್ಕಲವಾಗಿದ್ದು ಯಾರಿಗೂ ಹೆದರುವ ಜಾಯಮಾ ನ ಅವರಿಗಿಲ್ಲ. ಗೈರು ಹಾಜರಾದ ಸಿಬ್ಬಂದಿಗೆ ಒಂದು ವರ್ಷದ ಸಂಬಳ ನೀಡಿರುವುದು ಹಿನ್ನೆಲೆಯಾದರೂ ಏನು? ಇದು ಹಾಜರಾತಿ ತಿದ್ದುವುದೆಂದರೆ ಹುಡುಗಾಟವೇ? ಅಕ್ಷಮ್ಯ ಹಾಗೂ ಗಂಭೀರಅಪರಾಧವಾಗಿರುತ್ತದೆ. ಅಷ್ಟೇ ಅಲ್ಲದೆ ಇಲಾಖೆಯಿಂದ ಜಾರಿ ಮಾಡಲಾಗುತ್ತಿರುವ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸದಯೇ ಸುಳ್ಳು ಹಾಗೂ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಿ ಹಣವನ್ನು ದುರುಪಯೋಗ ಮಾಡಿರುವುದು ಮಾಹಿತಿ ಹಕ್ಕಿ ನಲ್ಲಿ ಪಡೆದಿರುವ ದಾಖಲಾತಿಗಳ ಮೂಲಕ ತಿಳಿದು ಬಂದಿ ರುತ್ತದೆ. ಸಾರ್ವಜನಿಕರಿಗೆ ಮತ್ತು ಕಾರ್ಯ ಕರ್ತರಿಗೆ ಅರಿವು ಮೂಡಿಸುವ ಸರ್ಕಾರದ ಅನೇಕ ಮಹತ್ವಕಾಂಕ್ಷೆಯ ಕಾರ್ಯಕ್ರಮಗಳನ್ನು ಅನುಷ್ಠಾ ನಗೊಳಿಸದೆ ಸರ್ಕಾರಕ್ಕೆ ಮೋಸ ಮಾಡಿ ನಕಲಿಓ ಚರಗಳನ್ನು ಸೃಷ್ಟಿಸಿ ಹಣವನ್ನು ಗುಳುಂ ಮಾಡಿರುವ ಬಗ್ಗೆ ಸಮಗ್ರ ಮಾಡ ಬೇಕೆಂದು ಸಾರ್ವಜನಿಕರು ಒತ್ತಾಯವಾಗಿರುತ್ತದೆ. ಸಮಗ್ರತನಿಖೆಗೆ ಒಳಪಡಿಸಿದ್ದಲ್ಲಿ ಇನ್ನೂ ಅನೇಕ ಅಕ್ರಮಗಳು ಬಯಲಾಗುವ ಸಾಧ್ಯತೆಗಳಿರುತ್ತವೆ ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಧಿಕಾರಿಗಳು ಸೂಕ್ತ ಕ್ರಮ ವಹಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಿದಲ್ಲಿ ಮುಂದೆ ಈ ರೀತಿ ಅಕ್ರಮಗಳು ಆಗದಂತೆ ಕಡಿವಾಣ ಹಾಕಬಹುದಾಗಿದೆ..ಖುದ್ದು ಸಿಡಿಪಿಓ, ಒಬ್ಬ ಸಾಮಾನ್ಯ ಅಂಗನವಾಡಿ ಕಾರ್ಯಕರ್ತೆಯ ಒಂದು ವರ್ಷದಿಂದ ಗೈ ರು ಹಾಜರಿ ರುವ ಸಹಾ ಯಕಿಗೆ ಸಂಬಳ ಮಾಡುವ ದುರುದ್ದೇಶದಿಂದ ಅಟೆಂಡೆನ್ಸ್ ಟೆಂಪರಿAಗ್ ನಂತಹ ಅಪರಾಧ ಕೃತ್ಯ ಮಾಡಿದರೆ ಇನ್ನು ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಯರಿಗೆ ಇವರು ಎಂತಹ ಸಂದೇಶ ನೀಡುತ್ತಿದ್ದಾರೆ ಎಂಬುದು ಸೋಜಿಗದ ಸಂಗತಿ.
(Visited 1 times, 1 visits today)