ಪಾವಗಡ: ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಸಂಘಟನೆಗಳ ವತಿಯಿಂದ ಪಟ್ಟಣದ ಕುಮಾರಸ್ವಾಮಿ ಬಡಾವಣೆ ವಾಲ್ಮೀಕಿ ದೇವಸ್ಥಾನ ಆವರಣದಲ್ಲಿ ಎಲ್ .ಜಿ. ಹಾವನೂರು ರವರ ೧೦೦ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ನಿಡುಗಲ್ಲು ವಾಲ್ಮೀಕಿ ಆಶ್ರಮದ ಪೀಠಧ್ಯಕ್ಷರಾದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ ಸ್ವಾಮೀಜಿಗಳು ಎಲ್ .ಜಿ. ಹಾವನೂರು ಒಬ್ಬ ಮಹಾನ್ ಚೇತನ ಆದರ್ಶ ವ್ಯಕ್ತಿ ಒಬ್ಬ ಕಾನೂನು ಪಂಡಿತರಾಗಿ ಅವರ ಸೇವೆ ಅನನ್ಯವಾದುದು ನಮ್ಮ ನಾಡಿಗೆ ಹಿಂದುಳಿದ ತಳ ಸಮುದಾಯದ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕರು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದಕ್ಕೆ ಅವರ ಆಯೋಗ ನೀಡಿದ ವರದಿ ಹಿಂದುಳಿದ ವರ್ಗಗಳ ಬೈಬಲ್ ಆಗಿದೆ. ಅಂದಿನ ಮುಖ್ಯಮಂತ್ರಿ ಡಿ ದೇವರಾಜು ಅರಸು ರವರು ಸಚಿವ ಸಂಪುಟದಲ್ಲಿ ಹಾವನೂರು ವರದಿಯನ್ನು ಅನುಮೋದನೆ ಮಾಡಿ ಹಿಂದುಳಿದ ಸಮುದಾಯದಕ್ಕೆ ಕ್ರಾಂತಿಕಾರಿ ಸಾಮಾಜಿಕ ನ್ಯಾಯ ಕೊಡಿಸಿದ ಕೀರ್ತಿ ಹಾವನೂರು ರಚಿಸಿದ ಆಯೋಗ ಆಯೋಗಕ್ಕೆ ಸಲ್ಲುತ್ತದೆ . ಇಂತಹ ಮಹಾನ್ ನಾಯಕನನ್ನು ನಾವು ನಮ್ಮ ನಾಡಿನ ಪರವಾಗಿ ಪ್ರತಿಯೊಬ್ಬರು ಮರೆ ಯುವಂತಿಲ್ಲ ಎಂದು ತಿಳಿಸಿದರು.
ನಂತರ ಮಾತನಾಡಿದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತುಮಕೂರು ಜಿಲ್ಲಾ ಯುವ ಘಟಕ ಅಧ್ಯಕ್ಷ ಪಾಳೇಗಾರ್ ಲೋಕೇಶ್ ರವರು ಕರ್ನಾಟಕ ಹಿಂದುಳಿದ ಸಮುದಾಯದ ಪರವಾಗಿ ಸಾಮಾಜಿಕ ನ್ಯಾಯಯುತ ಹೋರಾಟ ಹಾಗೂ ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಪ್ರಗತಿ ಸಾಧಿಸಲು ಹಾವನೂರು ಕೊಡುಗೆ ಅಪಾರ ಹಾಗೂ ಹೈಕೋರ್ಟ್ ವಕೀಲ ವೃತ್ತಿ ಮಾಡಿ ದಕ್ಷಿಣ ಆಫ್ರಿಕಾ ಸಂವಿಧಾನ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದ ನಾಯಕ ಎಲ್ .ಜಿ. ಹಾವನೂರ್ ಇಂತಹ ನಾಯ ಕನ ಹೆಸರಲ್ಲಿ ಸರ್ಕಾರ ಯಾವುದಾದರೂ ಒಂದು ವಿಶ್ವ ವಿದ್ಯಾನಿಯಕ್ಕೆ ಹಾವನೂರು ವಿಶ್ವ ವಿದ್ಯಾನಿ ಲಯ ಎಂದು ನಾಮ ಕರಣ ಮಾಡಬೇಕು. ಹಾಗೂ ಬೆಂಗಳೂರಿನ ವಿಧಾ ನಸೌಧದ ಮುಂಭಾಗ ಎಲ್ .ಜಿ.ಹಾವನೂರ್ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು ಜೊತೆಗೆ ವಿದ್ಯಾರ್ಥಿಗಳ ಪಠ್ಯ ಪುಸ್ತಕದಲ್ಲಿ ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಪ್ರಕಟಣೆ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸುವಂತಾಗಲಿ ಮುಂದಿನ ದಿನಗಳಲ್ಲಿ ಸರ್ಕಾರ ಅವರ ಜಯಂತಿ ಆಚರಣೆ ಮಾಡಬೇಕೆಂದು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಯುವಕರ ಸಂಘ ದ ಅಧ್ಯಕ್ಷ ನರಸಿಂಹಕೃಷ್ಣ. ಮಾಜಿ ತಾಲೂಕು ಪಂ ಚಾಯಿತಿ ಸದಸ್ಯರಾದ ಅಂಜನಾಯಕ. ನರಸಿಂಹಲು.ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ಯುವ ಅಧ್ಯಕ್ಷರಾದ ಓಂಕಾರನಾಯಕ. ಪ್ರಧಾನ ಕಾರ್ಯದರ್ಶಿ ಬೇಕರಿ ನಾಗರಾಜ್. ಉಪಾಧ್ಯಕ್ಷ ಮಂಜುನಾಥ್. ಮಹಾಸಮಿತಿ ಕಾರ್ಯಧ್ಯಕ್ಷ ಮಂಜುನಾಥ್. ಹರ್ಷಆಸ್ಪತ್ರೆ ಈರಣ್ಣ, ಜಾಗೃತಿ ಮಹಿಳಾ ವೇದಿಕೆ ಅಧ್ಯಕ್ಷೆ ಅಂಬಿಕಾ ರಮೇಶ್, ಆದರ್ಶ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ. ಪ್ರಕಾಶ್ ನಾಯಕ ಬ್ಯಾಡನೂರು ಶಿವು. ಬಲರಾಮ್ ಅನಂತ ನಾಯಕ ಕ ರ ವೇ ಅಧ್ಯಕ್ಷ ಲಕ್ಷ್ಮಿ ನಾರಾಯಣ ಪಿ .ಎಲ್ .ಮಣಿ ಆಟೋ ಸತ್ತಿ , ನರಸಪ್ಪ. ಮೂರ್ತಿ. ಶ್ರೀಧರ್. ರಾಮಲಿಂಗಪ್ಪ. ಮೂರ್ತಿ ,ಬಲ್ಲೇನಹಳ್ಳಿ ರಾಮು. ತಿರುಮಲೇಶ.ರಮೇಶ್ ನಾಯಕ ಮಂಜು ಪಾಳೇಗಾರ ರಾಜು ಶ್ರೀಧರ್ ನಾಯಕ ಮಂಜುನಾಥ್. ಮುಂತಾದವರು ಹಾಜರಿದ್ದರು.
(Visited 1 times, 1 visits today)