ಹುಳಿಯಾರು: ಪಟ್ಟಣ ಪಂಚಾಯಿತಿಯ ೨೦೨೫-೨೬ ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷೆ ರತ್ನಮ್ಮ ಮಂಗಳವಾರ ಮಂಡಿಸಿದ್ದು ಪಟ್ಟಣ ಪಂಚಾಯಿತಿಗೆ ವಿವಿಧ ಮೂಲಗಳಿಂದ ಒಟ್ಟು ೩೩,೦೮,೬೨,೦೦೦ ರೂ ಆದಾಯ ನಿರೀಕ್ಷಿಸಲಾಗಿದ್ದು ಹಾಗೂ ೪೧, ೪೧,೨೪,೨೪೪ ರೂ ವೆಚ್ಚ ನಿರೀಕ್ಷಿಸಲಾಗಿದ್ದು ಒಟ್ಟು ೪೦,೪೮,೫೧೫ ರೂಪಾಯಿ ಆಖೈರು ಶಿಲ್ಕಿನೊಂದಿಗೆ ಉಳಿತಾಯ ಬಜೆಟ್ ಮಂಡಿಸಲಾಯಿತು.
ಬಜೆಟ್ ಪ್ರಮುಖ ಅಂಶಗಳು: ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ ೧೨೦ ಲಕ್ಷ ರೂಪಾಯಿ, ನೀರು ಸರಬರಾಜು ಸಂಪರ್ಕಗಳಿAದ ೩೦ ಲಕ್ಷ ರೂಪಾಯಿ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ ೫೦ ಲಕ್ಷ ರೂಪಾಯಿ, ಪರಿವೀಕ್ಷಣ ಶುಲ್ಕ- ಉದ್ಯಮ ಪರವಾನಿಗೆ-ಕಟ್ಟಡ ಪರವಾನಿಗೆ -ಖಾತಾ ನಕಲು ಮತ್ತಿತರ ಶುಲ್ಕಗಳಿಂದ ೧೦೫.೩೭ ಲಕ್ಷ ರೂಪಾಯಿ, ವೇತನ ಮತ್ತು ವಿದ್ಯುತ್ ಅನುದಾನ ಮೂಲಗಳಿಂದ ೫೪೮ ಲಕ್ಷ, ಎಸ್‌ಎಫ್‌ಸಿ ವಿಶೇಷ ಮತ್ತು ಇತರೆ ಮೂಲಗಳಿಂದ ೬೯ ಲಕ್ಷ ರೂಪಾಯಿ, ಬರಪರಿಹಾರ, ಕುಡಿಯುವ ನೀರು ಇತರೆ ಕಾಮಗಾರಿ ಅನುದಾನ ೫೫ ಲಕ್ಷ, ೧೫ ನೇ ಹಣಕಾಸು ಯೋಜ ನೆಯಿಂದ ೧೨೫ ಲಕ್ಷ, ಸೂಚನಫಲಕ, ಜಾಹೀರಾತು ತೆರಿಗೆಯಿಂದ ೨೫ ಸಾವಿರ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.
ಖರ್ಚು-ವೆಚ್ಚ: ಹುಳಿಯಾರು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳ ವೇತನಕ್ಕೆ ೧ ಕೋಟಿ ೬೫ ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ. ಪಟ್ಟಣ ಪಂಚಾಯಿತಿ ಆಡಳಿತ ವೆಚ್ಚ ಮತ್ತು ಮಾಸಿಕ ಬಾಡಿಗೆ ಆಧಾರದ ಮೇಲೆ ವಾಹನ ಖರೀದಿ ಇನ್ನಿತರ ವೆಚ್ಚಗಳಿಗಾಗಿ ೮೫.೦೪ ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ. ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ೧೯೪.೭೦ ಲಕ್ಷ ರೂಪಾಯಿ, ಉದ್ಯಾನವನ ನಿರ್ಮಿಸಲು ೧೮ ಲಕ್ಷ ರೂಪಾಯಿ, ರುದ್ರಭೂಮಿ ಮತ್ತು ಖಬರಸ್ಥಾನ ಅಭಿವೃದ್ಧಿಗೆ ೮೦ ಲಕ್ಷ, ಕಚೇರಿ ಉಪಯೋಗ ಮತ್ತು ಅಗತ್ಯ ಪೀಠೋಪಕರಣ ಖರೀದಿಗೆ ೭.೪೫ ಲಕ್ಷ ನೂತನ ಕಟ್ಟಡ ನಿರ್ಮಾಣಕ್ಕೆ ೨ ಕೋಟಿ, ಯುವ ಜನತೆಗೆ ತರಬೇತಿ ಮತ್ತು ಉದ್ಯೋಗ ಮೇಳಕ್ಕೆ ೫೦ ಲಕ್ಷ, ಎಸ್‌ಸಿಎಸ್‌ಟಿ ಸಮುದಾಯದ ಕಲ್ಯಾಣ ಹಾಗೂ ಅಂಗವಿಕಲರ ಶ್ರೇಯೋಭಿವೃದ್ಧಿಗೆ ೭೩.೬೦ ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ.
ಹುಳಿಯಾರು ಪಟ್ಟಣ ಪಂಚಾಯಿತಿಯ ನಾಗರೀಕರಿಗೆ ದಿನನಿತ್ಯದ ಅತ್ಯವಶ್ಯಕವಾಗಿರುವಂತಹ ಕುಡಿಯುವ ನೀರಿನ ವ್ಯವಸ್ಥೆ ರಸ್ತೆ ಮತ್ತು ಚರಂಡಿ ಬೀದಿ ದೀಪ ಸ್ವಚ್ಛತೆ ನಿರ್ವಹಣೆ ಮೊದಲ ಆ ದ್ಯತೆ ನೀಡಲಾಗಿದೆ ಎಂದರು. ಕೊಳವೆಬಾವಿ ಕೊರೆಸುವುದು, ಪೈಪ್ಲೆöÊನ್ ನಿರ್ಮಾಣ, ವಿದ್ಯುತ್ ವೆಚ್ಚ, ಶುದ್ಧ ಕುಡಿಯುವ ನೀರಿನ ಘಟಕ, ಸಾಮಗ್ರಿ ಖರೀದಿ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಒಟ್ಟು ಅಂದಾಜು ೩೪೦ ಲಕ್ಷ ರೂಪಾಯಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಕಾವ್ಯರಾಣಿ, ಸದಸ್ಯ ರುಗಳಾದ ಹೇಮಂತ್, ಕೆಎಂಎಲ್‌ಕಿರಣ್, ದಸ್ತು ಗಿರಿಸಾಬ್, ಬೀಬೀಫಾತಿಮಾ, ಎಸ್‌ಆರ್‌ಎಸ್ ದಯಾನಂದ್, ರಾಜುಬಡಗಿ, ಸಿದ್ಧಿಕ್, ಪ್ರೀತಿ, ವೆಂಕಟೇಶ್, ಜುಬೇರ್, ಮಂಜಣ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗಭೂಷಣ್ ಸೇರಿದಂತೆ ಸಿಬ್ಬಂದಿಗಳಿದ್ದರು.
(Visited 1 times, 1 visits today)