ತುಮಕೂರು: ರಂಗಭೂಮಿ ಇಂದು ಕಲಾಸ್ತಕರ ಕೊರತೆಯನ್ನು ಎದುರಿಸುತ್ತಿದ್ದು,ಈ ಕ್ಷೇತ್ರದಲ್ಲಿ ತೊಡಗಿರುವವರು ತಮ್ಮ ಉಳಿವಿನ ಜೊತೆಗೆ, ರಂಗಭೂಮಿಯ ಇರುವಿಕೆಗಾಗಿ ಅಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಪ್ರಚಾ ರ ಮಾಡುವ ಮೂಲಕ ತನ್ನತ್ತ ಸೆಳೆಯುವ ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಜಿ.ಬಿ. ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮ ಕೂರು, ವಿಶ್ವ ರಂಗಭೂಮಿ ದಿನಾಚರಣೆ ಅಂಗ ವಾಗಿ ಆಯೋಜಿಸಿದ್ದ ೫ ದಿನಗಳ ಯುಗಾದಿ ನಾಟಕೋತ್ಸವ-೨೦೨೫ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು, ಹಿರಿಯ ಕಲಾವಿದರುಗಳಿಗೆ ರಂಗಗೌರವ ಸಮರ್ಪಿಸಿ ಮಾತನಾಡುತಿದ್ದ ಅವರು,ರಂಗಭೂಮಿಯ ಬಗ್ಗೆ ಕುತೂಹಲ ಹೆಚ್ಚಿ ದೆ. ಮುಂದಿನ ಹತ್ತು ವರ್ಷಕ್ಕೆ ಏನಾಗಬಹುದು, ಅಸ್ಥಿತ್ವದಲ್ಲಿ ಇರುತ್ತದೆಯೋ, ಇಲ್ಲವೋ ಎಂಬ ಆಂತಕವನ್ನು ಹುಟ್ಟಿಸುತ್ತದೆ. ಇದೊಂದು ಪ್ರಬಲ ಮಾಧ್ಯಮವಾಗಿದ್ದು, ಉಳಿಸಿಕೊಳ್ಳುವ ಅನಿವಾರ್ಯತೆ ಕಲಾವಿದರು ಮತ್ತು ಕಲಾಸಕ್ತರು ಇಬ್ಬರಿಗೂ ಸೇರಿದೆ ಎಂದರು.
ರAಗಗೌರವ ಸ್ವೀಕರಿಸಿ ಮಾತನಾಡಿದ ನಗರ ಉಪವಿಭಾಗದ ಡಿವೈಎಸ್ಪಿ ಚಂದ್ರಶೇಖರ್, ನಾನು ಕಾಲೇಜು ದಿನಗಳಲ್ಲಿ ಬೀದಿ ನಾಟಕಗಳಿಗೆ ಬಣ್ಣ ಹಚ್ಚಿದ್ದೆ. ಅಕರ್ಷಣೆಯಂತು ಇತ್ತು. ಈಗ ನನ್ನ ಹಿರಿಯ, ಕಿರಿಯ ಸಹೋದ್ಯೋಗಿಗಳು ಸೇರಿ ಮತ್ತೊಮ್ಮೆ ಬಣ್ಣ ಹಚ್ಚುವಂತೆ ಮಾಡಿದರು. ಹಿರಿಯರಾದ ಲಕ್ಷö್ಮಣದಾಸ್ ಆಗಾಗ್ಗೆ ಬಂದು ಕೆಲ ಸಲಹೆ, ಸೂಚನೆಗಳನ್ನು ನೀಡಿದ್ದು, ಪಾತ್ರ ಮಾಡುವಾಗ ಸಹಕಾರಿಯಾಯಿತು ಎಂದು ತಿಳಿಸಿದರು.
ಮತ್ತೊಬ್ಬ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ಮಾತನಾಡಿ, ರಂಗಭೂಮಿಗೆ ಇಂದಿಗೂ ಜನರ ಮಧ್ಯ ಪ್ರಬಲ ಮಾಧ್ಯಮವಾಗಿಯೇ ಉಳಿದು ಕೊಂಡಿದೆ. ನಾಟಕ, ಬೀದಿ ನಾಟಕ, ಸಂಗೀತ, ನೃತ್ಯ, ಯಕ್ಷಗಾನದಂತಹ ಕಲೆಗಳ ಮೂಲಕ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬಹುದು. ಪೊಲೀಸ್ ಆಗಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ, ಕಲೆಯ ಮೂಲಕವೂ ಜನಸೇವೆ ಮಾಡಬ ಹುದು. ಮಾದಕ ವಸ್ತುಗಳ ಸೇವೆ, ಸಾಗಾಣಿಕೆ ಇಂತಹ ಸಮಾಜ ವಿದ್ರೋಹಿ ಕೃತ್ಯಗಳ ವಿರುದ್ದ ರಂಗಭೂಮಿಯನ್ನು ಪ್ರಬಲ ವೇದಿಕೆಯಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹೃದಯ ಪ್ರೇಕ್ಷ ಕರನ್ನು ಒಗ್ಗೂಡಿಸುವುದು ಇಂದು ಸವಾಲಿನ ಕೆಲಸ ವಾಗಿದೆ. ಹಾಗಾಗಿ ಬೆಂಗಳೂರಿನ ದೊಡ್ಡ ದೊಡ್ಡ ತಂಡಗಳು ತುಮಕೂರಿಗೆ ಬಂದು ಕಾರ್ಯಕ್ರಮ ನೀಡುವುದನ್ನು ಕಾಣಬಹುದು. ಯುವಜನತೆ ಕಲೆ ಯತ್ತ ತಮ್ಮ ಚಿತ್ತ ತೋರಬೇಕಿದೆ. ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದAತಹ ಸಂಘಟನೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಇದೇ ವೇಳೆ ಜಿಲ್ಲಾ ಪೊಲೀಸ್ ಕಲಾ ತಂಡದ ಹಿರಿಯ ಕಲಾವಿದರಾದ ಡಿವೈಎಸ್ಪಿ ಚಂದ್ರಶೇಖರ್ ಮತ್ತು ವೃತ್ತ ನಿರೀಕ್ಷಕ ದಿನೇಶಕುಮಾರ್ ಅವರುಗಳಿಗೆ ೨೦೨೫ನೇ ಸಾಲಿನ ರಂಗಭೂಮಿ ದಿನಾಚರಣೆಯ ರಂಗಗೌರವ ನೀಡಿ ಅಭಿನಂದಿಸಲಾಯಿತು. ಕಲಾಶ್ರೀ ಡಾ.ಲಕ್ಷö್ಮಣದಾಸ್, ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಲಾಪುರ, ಕಾಂತರಾಜು ಕೌತುಮಾರನಹಳ್ಳಿ, ರಂಗ ಸೊಗಡು ಕಲಾಟ್ರಸ್ಟ್ನ ಸಿದ್ದರಾಜು ಸ್ವಾಂದೇನಹಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು

(Visited 1 times, 1 visits today)