ಚಿಕ್ಕನಾಯಕನಹಳ್ಳಿ: ಇಂದು ವೃತ್ತಿನಿರತರಾಗಿದ್ದುಕೊಂಡು ತಮ್ಮ ಜೀವನಕ್ಕಾಗಿ ಪೋಟೊ ಮತ್ತು ವಿಡಿಯೋ ಗ್ರಾಫರ್ ಕೆಲಸವನ್ನು ತಮ್ಮ ಕಸುಬನ್ನಾಗಿಸಿಕೊಂಡಿರುವವರ ಬದುಕು ಮೂರಾಬಟ್ಟೆಯಾಗುತ್ತಿದೆ ಕಾರಣ ಹವ್ಯಾಸಿ ಪೋಟೊ ಗ್ರಾಫರ್‌ಗಳು, ಇವೆಂಟ್ಸ್ ಆರ್ಗನೈಸರ್‌ಗಳು, ಸಾಮಾಜಿಕ ಜಾಲತಾಣಗಳಿಂದ ನಮ್ಮನ್ನು ಗ್ರಾಹಕರೇ ರಕ್ಷಿಸಬೇಕಾಗಿದೆ ಅನಧಿಕೃತರಿಂದ ದೂರಿವಿದ್ದು ಅಧಿಕೃತ ಪೋಟೊ ಗ್ರಾಫರ್‌ಗಳಿಗೆ ಕೆಲಸ ನೀಡಬೇಕೆಂದು ವಿಡಿಯೋ ಮತ್ತು ಪೋಟೊ ಗ್ರಾಫರ್‌ಗಳಸಂಘದ ಜಿಲ್ಲಾಧ್ಯಕ್ಷ ಸುನೀಲ್‌ಕುಮಾರ್ ತಿಳಿಸಿದರು.
ಪಟ್ಟಣ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ವಿಡಿಯೋ ಮತ್ತು ಪೋಟೊ ಗ್ರಾಫರ್‌ಗಳ ಸಭೆಯಲ್ಲಿ ಮಾತನಾಡಿದ ಅವರು ಪೋಟೊ ಹಾಗೂ ವಿಡಿಯೋ ಗ್ರಾಫರ್‌ಗಳಿಗೆ ಕಲ್ಯಾಣಮಂಟಪಗಳು, ಸಮುಧಾಯಭವನಗಳು, ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳೇ ಜೀವನ ನಿರ್ವಹಣೆಗೆ ಅಧಾರ ಅದರೆ ಇತ್ತೀಚಿನ ದಿನಗಳಲ್ಲಿ ಕಲ್ಯಾಣಮಂಟಪದ ಮಾಲೀಕರೇ ಎಲ್‌ಇಡಿ ಸ್ಕಿçÃನ್ ಅಳವಡಿಸುತ್ತಿರುವ ಕಾರಣ ಇದು ವೃತ್ತಿನಿರತ ವಿಡಿಯೋ ಮತ್ತು ಪೋಟೊ ಗ್ರಾಫರ್‌ಗಳ ಕೆಲಸ ಕುಸಿಯುತ್ತಿದೆ ಮಾನವೀಯ ಹಿನ್ನೇಲೆಯಲ್ಲಿ ಕಲ್ಯಾಣ ಮಂಟಪಗಳಲ್ಲಿ ಎಲ್‌ಇಡಿ ಸ್ಕಿçÃನ್ ಆಳವಡಿಸಬೇಡಿ ಎಂದು ಈ ಮೂಲಕ ಮನವಿ ಮಾಡುತ್ತಿದ್ದು ಇದರೊಂದಿಗೆ ಇತ್ತಿಚೇಗೆ ಕೆಲವರು ಸಾಮಾಜಿ ಜಾಲತಾಣಗಳಲ್ಲಿ ಕಾರ್ಯಕ್ರಮಗಳ ಅರ್ಡ್ಗಳನ್ನು ಹಿಡಿಯುತ್ತಿದ್ದು ಇದರಲ್ಲಿ ಮೊಸ ಹೋಗುವ ಸಾದ್ಯತೆ ಹೆಚ್ಚಿದೆ ಅನೇಕರು ಇಂತಹವರಿAದ ಮಾರುಹೋಗಿ ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಅದ್ದರಿಂದ ನಮ್ಮ ಸಂಘದ ಅಧಿಕೃತ ಗುರುತಿನ ಚೀಟಿ ಇರುವವರಿಂದ ಕಾರ್ಯಕ್ರಮಗಳನ್ನು ವಿಡಿಯೋ ಹಾಗೂ ಪೋಟೊ ಗ್ರಫಿ ಮಾಡಿಸಿ ಎಂದ ಅವರು ಈ ನಿಟ್ಟಿನಲ್ಲಿ ನಮ್ಮ ಸಂಘಕ್ಕೆ ೭೦ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಮುಂಬರುವ ಏಪ್ರೀಲ್ ತಿಂಗಳ ೧೧ರಿಂದ ೧೩ವರೆಗೆ ಛಾಯಾಗ್ರಾಹಕರ ಹಬ್ಬವನ್ನು ಬೆಂಗಳೂರಿನ ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ನಮ್ಮ ವೃತ್ತಿನಿರತರು ಭಾಗವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅದ್ಯಕ್ಷ ಸಿ.ಕೆ.ರಂಗನಾಥಬಾಬು ಮಾತನಾಡಿ ನಮ್ಮ ವೃತ್ತಿನಿರತ ಪೋಟೋ ಹಾಗೂ ವಿಡಿಯೋ ಗ್ರಾಫರಗಳನ್ನು ಈಗಾಗಲೇ ಅಸಂಘಟಿತ ಕಾರ್ಮಿಕರ ವಲಯದಲ್ಲಿ ಗುರುತಿಸಲಾಗಿದ್ದು ಎಲ್ಲರು ನಮ್ಮ ಸಂಘದಲ್ಲಿ ನೊಂದಣಿಯಾಗುವ ಮೂಲಕ ಗುರುತಿನ ಚೀಟಿಯನ್ನು ಪಡೆದು ಪ್ರಾಮಾಣಿಕವಾಗಿ ನಮ್ಮ ವೃತ್ತಿಯನ್ನು ಮಾಡಿ ಎಲ್ಲರೂ ಈಶ್ರಮ್ ಕಾರ್ಡ್ಮಾಡಿಸುವುದರೊಂದಿಗೆ ಪೋಸ್ಟ್ಆಪೀಸ್‌ನಲ್ಲಿ ವಿಮೆ ಮಾಡಿಸಿಕೊಳ್ಳುವ ಮೂಲಕ ನಿಮ್ಮ ಜೀವನಕ್ಕೆ ಭದ್ರತೆ ಇಟ್ಟುಕೊಳ್ಳಿ ಎಂದ ಅವರು ಸದಕಾಲ ತಮ್ಮ ಜೀವನಕ್ಕಾಗಿ ಇದೇ ವೃತ್ತಿಯನ್ನು ಅವಲಂಬಿಸಿರುವವರು ಇಂದು ಬೀದಿಗೆ ಬೀಳುವ ಕಾಲಬರುತ್ತಿದೆ ಕಾರಣ ಎಲ್ಲರೂ ಹವ್ಯಾಸಕ್ಕಾಗಿ ಕೆಲವರು ಸರ್ಕಾರಿ ನೌಕರರು ಈ ಕೆಲಸವನ್ನು ಮಾಡುತ್ತಿದ್ದಾರೆ ಇದನ್ನಾದರು ನಾವು ತಪ್ಪಿಸಲು ಸಂಘಟಿತರಾಗಬೇಕಾಗಿದೆ ಇಂತಹವರ ವಿರುದ್ದ ಸೂಕ್ತಕ್ರಮ ಕೈಗೊಳ್ಳಬೇಕಿದೆ ಎಂದ ಅವರು ತಾಲ್ಲೂಕು ಸಂಘ ಬಲಗೊಂಡರೆ ಜಿಲ್ಲಾಸಂಘ ಬಲಗೊಳ್ಳುತ್ತದೆ ನಮ್ಮ ವೃತ್ತಿಧರ್ಮ ನಾವು ಪಾಲಿಸೋಣ ಎಂದರು.
ಈ ಸಂದರ್ಭದಲ್ಲಿ ವಿಡಿಯೋ ಮತ್ತು ಪೋಟೊ ಗ್ರಾಫರ್‌ಗಳ ಸಂಘದ ಜಿಲ್ಲಾ ಕಾರ್ಯದ್ಯಕ್ಷ ವೆಂಕಟೇಶ್ ಜಿಲ್ಲಾ ಕಾಂiÀiðದರ್ಶಿ ರಮೇಶ್ ಎನ್, ತಾಲ್ಲೂಕು ಕಾರ್ಯದರ್ಶಿ ವಿಜಯ್‌ಕುಮಾರ್ ಸೇರಿದಂತೆ ತಾಲ್ಲೂಕಿನ ಎಲ್ಲಾ ವಿಡಿಯೋ ಮತ್ತು ಪೋಟೊ ಗ್ರಾಫರ್‌ಗಳು ಇದ್ದರು.
(Visited 1 times, 1 visits today)