ಕೊರಟಗೆರೆ: ಯಾದಗಿರಿಯ ಸೆಂಟ್ ಮೇರಿಸ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ೮೯ ವಿದ್ಯಾರ್ಥಿಗಳ ಪೈಕಿ ೪೦ಜನ ವಿದ್ಯಾರ್ಥಿಗಳು ಶಾಲೆಯ ಶುಲ್ಕ ಪೂರ್ಣ ಪಾವತಿ ಮಾಡಿಲ್ಲ ಎಂದು ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆಗೆ ಅವಕಾಶ ನೀಡದೆ ಶಾಲೆಯ ಹೊರಗಡೆ ನಿಲ್ಲಿಸಿ ಮಕ್ಕಳಿಗೆ ಅವಮಾನ ಮಾಡಿರುವ ಘಟನೆ ಸೋಮವಾರ ಮತ್ತು ಮಂಗಳವಾರ ನಡೆದಿದೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಯಾದಗೆರೆಯ ಸೇಂಟ್ ಮೇರಿಸ್ ಪಬ್ಲಿಕ್ ಶಾಲೆಯಲ್ಲಿ ಘಟನೆ ಜರುಗಿದೆ. ೪೦ಜನ ವಿದ್ಯಾರ್ಥಿಗಳ ಪೋಷಕರು ಶಾಲೆಯ ಶುಲ್ಕ ಕಟ್ಟದಿರುವ ಪರಿಣಾಮ ಮಕ್ಕಳ ಪರೀಕ್ಷೆಯ ಭವಿಷ್ಯವನ್ನೇ ಮರೆತು ಶಿಕ್ಷಣ ಇಲಾಖೆಯ ನಿಯಮವನ್ನು ಗಾಳಿಗೆ ತೂರಿ ಮುಖ್ಯಶಿಕ್ಷಕಿ ತಮ್ಮ ಅಧಿಕಾರ ದುರುಪಯೋಗ ಆಗಿದೆ.
ಗಂಡು ಮಕ್ಕಳಿಗೆ ತೋಟವೇ ಶೌಚಾಲಯ..
೮೯ಜನ ವಿದ್ಯಾರ್ಥಿಗಳು ಇರೋದು ೪ಶೌಚಾಲಯ ಮಾತ್ರ. ಗಂಡು ಮಕ್ಕಳಿಗೆ ಜರೂರು ಆದರೇ ತೆಂಗಿನ ತೋಟಕ್ಕೆ ಹೋಗಬೇಕಂತೆ. ಇದನ್ನು ಶಾಲೆಯ ಮುಖ್ಯಶಿಕ್ಷಕಿಯೇ ಹೇಳುವ ಮಾತು. ಇನ್ನೂ ಶುದ್ದ ಕುಡಿಯುವ ನೀರು ಸಂಪೂರ್ಣ ಮರೀಚಿಕೆ ಆಗಿದೆ. ಕಟ್ಟಡದ ಕೆಲಸವು ಅರ್ಧಕ್ಕೆ ನಿಂತಿದ್ದು ಅದರ ಕೆಳಗಡೆಯೇ ಮಕ್ಕಳು ಊಟ ಮಾಡಬೇಕಿದೆ.
ಶಾಲೆಯ ಬಸ್ಸಿನಲ್ಲಿ ಸಿಸಿಟಿವಿ ಲಭ್ಯವಿಲ್ಲ ಎಂದು ಪತ್ರಕರ್ತರು ಮುಖ್ಯ ಶೀಕ್ಷಕಿಯನ್ನು ಪ್ರಶ್ನಿಸಿದರೇ ಪೋಷಕರು ಶುಲ್ಕ ಕಟ್ಟಿಲ್ಲ. ನಮ್ಮ ಶಾಲೆಯಲ್ಲಿ ಹಣದ ಕೊರತೆ ಇದೆ ಆದ್ದರಿಂದ ಸಿಸಿಟಿವಿ ಅಳವಡಿಕೆ ಮಾಡಿಲ್ಲ ಎಂಬ ಉಡಾಫೆಯ ಉತ್ತರ ನೀಡಿದ್ದಾರೆ. ಪೋಷಕರು ಶಾಲೆಯ ಮುಖ್ಯಶಿಕ್ಷಕಿ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದಾಗ ಪಿಎಸೈ ಚೇತನ್ ಮಧ್ಯಪ್ರವೇಶಿಸಿ ತಕ್ಷಣ ಮಕ್ಕಳಿಗೆÀ ಪರೀಕ್ಷೆಗೆ ಅವಕಾಶ ಕಲ್ಪಿಸಿ ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡೋದು ಬೇಡ ಎಂದು ಪೋಷಕರನ್ನು ಸಮಾಧಾನಪಡಿಸಿ ಆಡಳಿತ ಮಂಡಳಿಗೆ ಮನವರಿಕೆ ಮಾಡಿದರು.
೪೦ಜನ ಮಕ್ಕಳ ಪೋಷಕರ ಆಕ್ರೋಶ..
ವರ್ಷಪೂರ್ತಿ ಸುಮ್ಮನಿದ್ದು ಪರೀಕ್ಷೆ ವೇಳೆ ನಮ್ಮ ಮಕ್ಕಳ ಭವಿಷ್ಯವನ್ನೇ ಮರೆತು ಶಾಲೆಯ ಆಡಳಿತ ಹಣ ವಸೂಲಿ ಮಾಡೋದು ಎಷ್ಟು ಸರಿ. ೪೦ಜನ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಅವರ ಮುಂದೆಯೇ ಕೊಠಡಿಯಿಂದ ಹೊರಗಡೆ ಕಳಿಸೋದು ಮಕ್ಕಳಿಗೆ ಮಾಡಿದ ಅವಮಾನ ಅಲ್ಲದೇ. ಪರೀಕ್ಷೆಗೆ ಮುನ್ನವೇ ಪೋಷಕರಿಗೆ ಕರೆಮಾಡಿ ಶಾಲೆಯ ಶುಲ್ಕ ವಸೂಲಿ ಮಾಡಬಹುದಿತ್ತು ಎಂದು ಪೋಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆ ಬರೆಯಲು ಅವಕಾಶ ನೀಡದೇ ೪೦ಜನ ಮಕ್ಕಳಿಗೆ ಹೊರಗಡೆ ನಿಲ್ಲಿಸಿ ಅವಮಾನ ಮಾಡಿದ್ದಾರೇ. ಶಾಲೆಯ ಶುಲ್ಕದ ವಿಚಾರಕ್ಕೆ ನಮ್ಮ ಮಕ್ಕಳಿಗೆ ಶಿಕ್ಷೆ ನೀಡೋದು ಎಷ್ಟು ಸರಿ. ಬಿಇಓ ಗಮನಕ್ಕೆ ತಂದರೂ ಏನು ಸಹ ಪ್ರಯೋಜನಾ ಆಗಿಲ್ಲ. ಯಾದಗೆರೆಯ ಸೇಂಟ್ ಮೇರಿಸ್ ಪಬ್ಲಿಕ್ ಶಾಲೆಯ ವಿರುದ್ದ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಕಾಮರಾಜು. ಪೋಷಕರು. ಬುಕ್ಕಾಪಟ್ಟಣ
ಪೋಷಕರು ಶುಲ್ಕ ಪಾವತಿ ಮಾಡದ ಕಾರಣ ೧ರಿಂದ ೭ನೇ ತರಗತಿಯ ೨೮ಜನ ಮಕ್ಕಳಿಗೆ ಪರೀಕ್ಷೆಗೆ ಅವಕಾಶ ನೀಡಿಲ್ಲ. ಶುಲ್ಕಕ್ಕಾಗಿ ನಾವು ಪೋಷಕರನ್ನು ಸಂರ್ಪಕಿಸಿದ್ರೇ ನಾಳೆ ಬರ್ತೀನಿ ಅಂತಾರೇ. ಶುಲ್ಕ ಪಾವತಿ ಮಾಡದಿದ್ರೇ ಶಿಕ್ಷಕರಿಗೆ ಸಂಬಳ ಮತ್ತು ಶಾಲೆಯ ಅಭಿವೃದ್ದಿ ಹೇಗೆ ಆಗುತ್ತೇ. ಹಣದ ಕೊರತೆಯಿಂದ ಶಾಲಾ ವಾಹನಕ್ಕೆ ಸಿಸಿಟಿವಿ ಹಾಕಿಲ್ಲ.
ಕಾರ್ಮಿನಾ. ಮುಖ್ಯಶಿಕ್ಷಕಿ. ಸೆಂಟ್ ಮೇರಿಸ್ ಪಬ್ಲಿಕ್ ಶಾಲೆ. ಯಾದಗಿರಿ