ಚಿಕ್ಕನಾಯಕನಹಳ್ಳಿ:  ಪಟ್ಟಣದ ೨೩ವಾರ್ಡ್ಗಳ ಸಮಗ್ರ ಅಭಿವೃದ್ದಿಗೆ ಅದ್ಯತೆಯ ಮೇಲೆ ಅವಕಾಶ ಮಾಡಿಕೊಂಡು ಕೆಲಸ ಮಾಡಿ ಶಾಶ್ವತವಾಗಿ ಉಳಿಯುವಂತಹ ಕೆಲಸಗಳನ್ನು ಮಾಡಿ ಎಲ್ಲಾ ಸದಸ್ಯರು ಒಮ್ಮತದಿಂದ ಕೈಜೊಡಿಸಿ ಹಾಗೂ ನೂತನ ಪುರಸಭಾ ಕಚೇರಿ ನಿರ್ಮಾಣಕ್ಕೆ ಸರ್ಕಾ ರದಿಂದ ೫ಕೋಟಿ ಹಣದ ಮಂಜೂರಾತಿ ಈಗಾ ಗಲೇ ಮನವಿ ಮಾಡಿದ್ದೇನೆ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ತಿಳಿಸಿದರು.,
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಮಂಗಳವಾರ ನಡೆದ ೨೦೨೫-೨೬ನೇ ಸಾಲಿನ ಬಜೆಟ್‌ಮಂಡನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪಟ್ಟಣದ ೨೩ವಾರ್ಡ್ಗಳ ಸಮಗ್ರ ಸಿಸಿ ರಸ್ತೆ ಸೇರಿದಂತೆ ಇತರೆ ಅಭಿವೃದ್ದಿ ಕೆಲಸಗಳಿಗಾಗಿ ಗಣಿಬಾದಿತ ಪ್ರದೇಶಾಭಿವೃದ್ದಿ ಅನುದಾನದಲ್ಲಿ ೩೫ಕೋಟಿ ಹಣವನ್ನು ಮೀಸಲಾ ಗಿಟ್ಟಿದ್ದು ಇದರೊಂದಿಗೆ ಈಗಿರುವಂತಹ ಪುರಸಭಾ ಕಚೇರಿ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿ ಕೊಂಡು ತೀನಂಶ್ರೀಭವನದ ಪಕ್ಕದಲ್ಲಿ ೫ಕೋಟಿ ವೆಚ್ಚದಲ್ಲಿ ನೂತನ ಕಚೇರಿಯನ್ನು ನಿರ್ಮಾಣ ಮಾಡಲು ಈಗಾಗಲೇ ಪೌರಾಡಳಿತ ಸಚಿವರಾದ ಬೈರತಿಸುರೇಶ್ ಇವರನ್ನು ಬೇಟಿ ಮಾಡಿ ಮನವಿ ಮಾಡಲಾಗಿದೆ ಎಂದ ಅವರು ಎಲ್ಲಾ ವಾರ್ಡ್ನ ಸದಸ್ಯರು ಒಗ್ಗಟ್ಟಿನಿಂದ ಸಮಗ್ರ ಶಾಶ್ವತ ಅಭಿವೃದ್ದಿಗೆ ಒತ್ತು ನೀಡಿ ಎಂದು ತಿಳಿಸಿದರು.
ಸಭೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್ ೨೦೨೫-೨೬ನೇ ಸಾಲಿನ ¨ಜೆಟ್‌ಮಂಡಿಸಿ ಪುರಸಭೆಗೆ ಸ್ವಯಂ ಘೋಷಿತ ಆಸ್ತಿತೆರಿಗೆ ಪದ್ದತಿಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ೨೨೫ಲಕ್ಷಗಳು, ನೀರು ಸರಬರಾಜು ಸಂಪರ್ಕ ವಸೂಲಾತಿಗಳಿಂದ ೪೮ಲಕ್ಷಗಳು, ಪುರಸಭಾ ವ್ಯಾಪ್ತಿಯ ಖಾಸಗಿ ಹಣಕಾಸು ಸಂಸ್ಥೆ ಗಳು, ಸಂಚಾರಿ ದೂರವಾಣಿ ಟವರ್‌ಗಳಿಂದ ೫ಲಕ್ಷಗಳು, ಪುರಸಭೆಗೆ ಸೇರಿದ ಅಂಗಡಿ ಮಳಿಗೆ ಮತ್ತು ಮಾರುಕಟ್ಟೆ ಮಳಿಗೆಗಳಿಂದ ೨೨ಲಕ್ಷಗಳು, ಪುರಸಭೆಯ ಪರಿವೀಕ್ಷಣಾ ಶುಲ್ಕ, ಉದ್ದಿಮೆ ಪರವಾನಗಿ, ಖಾತಾನಕಲು, ಖಾತಾಬದಲಾವಣೆ ಮತ್ತು ಇತರೆ ಫೀ.ಗಳಿಂದ೧೫.೫೦ಲಕ್ಷಗಳು, ರಾಜ್ಯ ಹಣಕಾಸು ಆಯೋಗದ ವೇತನ ಅನುದಾನ ವಿದ್ಯುತ್ ವೆಚ್ಚ, ಕುಡಿಯುವ ನೀರು ಅನುದಾನಗಳಿಗೆ ಸಂಬAಧಿಸಿದAತೆ ೯೦೫ಲಕ್ಷಗಳು, ೧೫ನೇ ಹಣಕಾಸು ಕೇಂದ್ರ ಹಣಕಾಸು ಯೋಜನೆಯಡಿಯಲ್ಲಿ ೨೫೦ಲಕ್ಷಗಳ ಆದಾಯವನ್ನು ನಿರೀಕ್ಷಿಸಲಾಗಿದ್ದು ಅದರಂತೆ ಪುರಸಭೆಯ ಸಿಬ್ಬಂದಿ ವೇತನಕ್ಕಾಗಿ ೩೩೫ಲಕ್ಷಗಳು, ಪುರಸಭಾ ವ್ಯಾಪ್ತಿಯ ಬೀದಿ ದೀಪಗಳ ಮತ್ತು ನೀರು ಸರಬರಾಜು ವ್ಯವಸ್ಥೆ ವಿದ್ಯುತ್ ವೆಚ್ಚ ಪಾವತಿಸಲು ೪೫೦ಲಕ್ಷಗಳು, ಪುರಸಭೆಯ ಆಡಳಿತ ವೆಚ್ಚಗಳಿಗೆ ೩೫೭ಲಕ್ಷಗಳು, ಘನತ್ಯಾಜ್ಯ ವಿಲೇವಾರಿ ನಿರ್ವಹಣೆಗಾಗಿ ೧೦೦ ಲಕ್ಷಗಳು, ಘನತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ದಿಗೆ ೫೦ಲಕ್ಷಗಳು, ಪುರಸಭೆಯ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಗಾಗಿ ೧೦೪ಲಕ್ಷಗಳು, ಮಹಿಳಾ ದಿನಾಚರಣೆ ಮತ್ತು ಗ್ರಂಥಪಾಲಕರ ವೇತನ ಮತ್ತು ಇತರೆ ಪ್ರೋತ್ಸಾಹಧನ ೮ಲಕ್ಷಗಳು, ಪುರಸಭೆ ವ್ಯಾಪ್ತಿಯಲ್ಲಿನ ಉದ್ಯಾನವನಗಳ ಅಭಿವೃದ್ದಿಗಾಗಿ ೮ಲಕ್ಷಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ, ಇತರೆ ಬಡಜನರ ಕಲ್ಯಾಣಕಾರ್ಯಕ್ರಮಗಳು, ಅಂಗವಿಲಕರ ಶ್ರೇಯೋಭಿವೃದ್ದಿಗಾಗಿ ಕಾರ್ಯಕ್ರಮಗಳು, ಶುದ್ದನೀರಿನ ವ್ಯವಸ್ಥೆ, ರಸ್ತೆ, ಚರಂಡಿ, ಅಭಿವೃದ್ದಿ ಕಾಮಗಾರಿಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ೩೮.೫೦ಲಕ್ಷಗಳನ್ನು ಖರ್ಚಿಗಾಗಿ ಕಾಯ್ದಿರಿಸಲಾಗಿದ್ದು ಇದರಂತೆ ಒಟ್ಟು ಕಳೆದ ವರ್ಷದ ಪ್ರಾರಂಭಿ ಶಿಲ್ಕು ೨೭ಲಕ್ಷದ ೯೦ಸಾವಿರ ಇದ್ದು ೨೦೨೫-೨೬ನೇ ಸಾಲಿಗೆ ಒಟ್ಟು ೨೬ಕೋಟಿ ೬೪ಲಕ್ಷದ ೭೭ಸಾವಿರ ಜಮಾ ಆಗುವ ನಿರೀಕ್ಷೆ ಇದ್ದು ಒಟ್ಟು ೨೬ಕೋಟಿ ೯೨ಲಕ್ಷದ ೬೭ಸಾವಿರ ಆಗಲಿದ್ದು ಇದರಲ್ಲಿ ೨೦೨೫-೨೬ನೇಸಾಲಿಗೆ ಒಟ್ಟು ೨೬ಕೋಟಿ ೧೫ಲಕ್ಷದ ೨೫ಸಾವಿರ ಖರ್ಚಿನ ನಿರೀಕ್ಷೆ ಇದ್ದು ಇನ್ನು ೭೭ಲಕ್ಷದ ೪೨ಸಾವಿರ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರೇಣು ಕಪ್ರಸಾದ್ (ಶ್ಯಾಮ್)ಮಾತನಾಡಿ, ಈ ಹಿಂದಿನ ವರ್ಷದ ೧೮ತಿಂಗಳುಗಳ ಖರ್ಚುವೆಚ್ಚದ ಬಗ್ಗೆ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ಹಾಗೂ ಅದರ ಮೇಲೆ ಚರ್ಚೆಗಳೇ ನಡೆದಿಲ್ಲ ಅದರೂ ಈವರ್ಷದ ಬಜೆಟ್‌ಮಂಡಿಸಿದ್ದಾರೆ ಹಾಗೂ ಇವತ್ತಿನ ಬಜೆಟ್‌ಮಂಡನೆಗೆ ಸದಸ್ಯರ ಸಭೆ ನಡೆಸಿ ಬಜೆಟ್‌ನ ಪೂರ್ವಚರ್ಚೆಯಾಗಬೇಕೆಂದು ೨೦೦೬ರ ಲೆಕ್ಕಪದ್ದತಿ ಮತ್ತು ಬಜೆಟ್ ನಿಯಮಾವಳಿಗಳಲ್ಲಿ ನಮೂದಾಗಿದ್ದರು ಯಾವುದೇ ನಿಯಮಗಳನ್ನು ಪುರಸಭಾ ಸದಸ್ಯರ ಹಕ್ಕುಗಳಿಗೆ ಕಿಮ್ಮತ್ತನ್ನು ನೀಡ ದೇ ಅಧಿಕಾರಿಗಳು ಅವರಿಗೆ ಬೇಕಾದಂತೆ ಬಜೆಟ್ ಸಿದ್ದಪಡಿಸಿದ್ದಾರೆ ಹಾಗೂ ಯಾವುದೇ ಲೆಕ್ಕಪರಿಶೋಧಕರಿಂದ ಆಡಿಟ್ ಆಗಿರುವ ಬಗ್ಗೆ ವರದಿ ಯನ್ನು ನೀಡಿಲ್ಲ ಇದು ನಮ್ಮ ಅಧಿಕಾರವನ್ನು ಮೊಟ ಕುಗೊಳಿಸುವ ಹುನ್ನಾರವೇ ಇಲ್ಲ ಅಧಿಕಾರಿಗಳ ಧರ್ಪವೇ ಎಂದು ಕಾಣುತ್ತಿಲ್ಲ ಇನ್ನಾದರು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮಾನ್ಯತೆ ನೀಡದಿದ್ದರೆ ನಾವು ಮುಂದಿನ ದಿನಗಳಲ್ಲಿ ಬೇರೆ ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ನಾಮಿನಿ ಸದಸ್ಯ ಮಹಮದ್‌ಹುಸೇನ್(ಗುಂಡಾ) ಮಾತನಾಡಿ ಬಜೆಟ್‌ನಲ್ಲಿ ಪಟ್ಟಣದ ಕಲ್ಯಾಣ ಮಂಟಪಗಳಿAದ ಬರುವಂತº ಅದಾಯ ಕಡಿಮೆ ನಮೂದಿಸಲಾಗಿದೆ ಅದನ್ನು ಮತ್ತೊಮ್ಮೆ ಪರಿಶಿಲಿಸಬೇಕು ಹಾಗೂ ಕಳೆದ ವರ್ಷದಲ್ಲಿ ಬೆಸ್ಕಾಂ ಇಲಾಕೆಗೆ ೨೬ಲಕ್ಷದ ೮೪ಸಾವಿರ ಹಣದ ಚೆಕ್‌ನ್ನು ವಿವಿಧ ಕೆಲಸಗಳಿಗೆ ನೀಡಲಾಗಿದೆ ಅದರೆ ಇದರ ಬಗ್ಗೆ ತಿಪಟೂರಿನ ಇಇಯವರಿಂದ ಅದರ ಸಾಮಾಗ್ರಿಗಳನ್ನು ಬಿಡುಗಡೆ ಮಾಡಿರುದು ತಿಳಿದಿದೆ ಅದರೆ ಇದುವರೆಗೆ ಇದರ ಯಾವುದೇ ಕೆಲಸಗಳು ಹಾಗೂ ಇದರ ಬಗ್ಗೆ ವರದಿಗಳು ಪುರಸಭೆಗೆ ಬಂದಿಲ್ಲ ಈ ಬಗ್ಗೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.
ಸದಸ್ಯೆ ಉಮಾಪರಮೇಶ್ ಮಾತನಾಡಿ ಪ್ರತಿವರ್ಷದ ಬಜೆಟ್‌ನಲ್ಲಿ ಉದ್ಯಾನವನದ ಅಭಿವೃದ್ದಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಲಾಗುತ್ತಿದೆ ಅದರೆ ಇದುವರೆ ಪಟ್ಟಣದ ಜನತೆ ಮಕ್ಕಳು ನೋಡುವಂತಹ ಒಂದು ಉದ್ಯಾನವನವು ಇಲ್ಲ ಇನ್ನಾದರು ಉದ್ಯಾ ನವನಗಳನ್ನು ಅಭಿವೃದ್ದಿ ಪಡಿಸಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡಿ ಎಂದರು.
ಸಭೆಯಲ್ಲಿ ಪುರಸಭಾದ್ಯಕ್ಷ ಸಿ.ಹೆಚ್.ದಯಾ ನಂದ್(ಕೆAಗಲ್), ಉಪಾದ್ಯಕ್ಷ ರಾಜಶೇಖರ್, ಮುಖ್ಯಾಧಿಕಾರಿ ಮಂಜಮ್ಮಸೇರಿದAತೆ ಪುರಸಭೆಯ ಎಲ್ಲಾ ಸದಸ್ಯರುಗಳು ಹಾಜರಿದ್ದರು.

(Visited 1 times, 1 visits today)