ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತೆಂಗು ಬೆಳೆಯಲ್ಲಿ ಭಾದಿಸುತ್ತಿರುವ ಅತಿಕ್ರಮಣಕಾರಿ ಬಿಳನೊಣಗಳ ನಿಯಂತ್ರಣಕ್ಕೆ ಶಾಸಕರಾದಂತಹ ಸಿ.ಬಿ.ಸುರೇಶ್ ಬಾಬು ರವರು ಹಾಗೂ ತೋಟಗಾರಿಕೆ, ಕೃಷಿ ಇಲಾಖೆಗಳ ಜೊತೆಗೂಡಿ ರೈತರಿಗೆ ಆಸರೆಯಾಗುವಂತಹ ಕ್ರಮ ಕೈಗೊಳ್ಳಲಾಯಿತು.
ಕಳೆದೆರಡು ವರ್ಷಗಳಿಂದ ರೈತರನ್ನು ನಿದ್ದೆಗೆಡಿಸಿರುವ ತಾಳೆ ಮುತ್ತಿಕೊಳ್ಳುವ ಬಿಳಿನೊಣಗಳು ತೆಂಗಿನ ತೋಟಗಳನ್ನು ಆಕ್ರಮಣ ಮಾಡಿವೆ. ಇವು ರೂಗೂಸ್ ಜಾತೆಗೆ ಸೇರಿದ್ದು, ಸುರುಳಿ ಬಿಳಿನೊಣಗಳನ್ನೆಲಾಗಿದೆ. ಇವು ಹೆಚ್ಚು ಪ್ರಬಲ, ಅಕ್ರಮಣಕಾರಿ, ಹೊಟ್ಟೆಬಾಕತನ ರಸ ಹೀರುವ ಕೀಟವಾಗಿದೆ.
ಮರಿಗಳು ಹಾಗೂ ಪ್ರೌಢ ಕೀಟಗಳು ಸತತವಾಗಿ ಗರಿಗಳ ಕೆಳಭಾಗದಲ್ಲಿ ಕುಳಿತು ರಸ ಹೀರುವಿಕೆಯಿಂದ ಗಿಡಗಳ ಗರಿಗಳು ಹಳದಿಯಾಗಿ ಒಣಗಿ ನಾಶವಾಗುತ್ತದೆ. ಮರಿ ಹಂತಗಳು ಸಿಹಿಯಾದ ಜೇನಿನ ತರಹದ ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಎಲೆಯ ಮೇಲ್ಬಾಗದ ಮೇಲೆ ಕಪ್ಪು ಬಣ್ಣದ ಶಿಲೀಂದ್ರ ಬೆಳೆದು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಎಲೆಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುತ್ತದೆ ಮತ್ತು ಅದರ ಪರಿಣಾಮ ತೆಂಗಿನ ಇಳುವರಿ ಮೇಲೆ ಉಂಟಾಗುತ್ತದೆ. ವಿಶಿಷ್ಟ ಕೇಂದ್ರೀಕೃತ ಮೇಣದ ಸುರುಳಿಯಾಕಾರದ ಲಕ್ಷಣಗಳನ್ನು ಎಲೆಗಳ ಮೇಲೆ ಮಾತ್ರವಲ್ಲದೆ ತೆಂಗಿನಕಾಯಿಯ ಕಾಂಡದ, ಹಣ್ಣಿನ, ತೆಂಗಿನ ಕಾಯಿಗಳಲ್ಲೂ ಸಹ ಗಮನಿಸಬಹುದು.
ತಾಲ್ಲೂಕು ಇಲಾಖಾಧಿಕಾರಿಗಳು ಹಾಗೂ ವಿಜ್ಞಾನಿಗಳು ಜೊತೆಗೂಡಿ ರೂಗೂಸ್ ಬಿಳಿ ನೊಣದ ಜೈವಿಕ ನಿಯಂತಣ ಅತ್ಯಂತ ಸಮಂಜಸ ಪರಿಹಾರವಾಗಿರುವ ಕಾರಣ ತಾಲ್ಲೂಕಿನ ಶಾಸಕರ ಮಾರ್ಗದರ್ಶನದಲ್ಲಿ ಹುಳಿಯಾರು ಕಂದಿಕೆರೆ ಗ್ರಾಮದಲ್ಲಿ ನೈಸರ್ಗಿಕ ಕೀಟಗಳಾದ ಐಸಿರಿಯ ಪ್ಯೂಮೋಸೋರೋಸಿಯಸ್ ಪ್ರಭೇಧದ ಶೀಲೀದ್ರ ಮತ್ತು ಎನ್ಯಾರ್ಷಿಯಾ ಡಿಸ್ಪರ್ಸಾ- ಪರಭಕ್ಷಕ ಜೀವಿಗಳ ಸಿಂಪರಣೆಯನ್ನು ಡೋನ್ ಹಾಗೂ ಪವರ್ ಸ್ಟೇಯರ್ ಮೂಲಕ ಕೈಗೊಂಡು ರೈತಾಪಿ ವರ್ಗದವರಲ್ಲಿ ಆಶಾದಾಯಕ ಭಾವನೆ ಮೂಡಿಸುವಲ್ಲಿ ಮೊದಲನೆಯ ಹೆಜ್ಜೆ ಇಟ್ಟಂತಾಗಿದೆ.
IಅAಖ-ಓಃAIಖ ವಿಜ್ಞಾನಿಗಳಾದ ಸೆಲ್ವರಾಜ್.ಕೆ, ಶೈಲೇಶ್.ಎ.ಎನ್. ಮಂಜುನಾಥ ರವರ ಉಪಸ್ಥಿತಿಯಲ್ಲಿ ಕೈಗೊಳ್ಳಲಾಯಿತು. ಸ್ಥಳದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಜಪ್ಪ, ಸಹಾಯಕ ಕೃಷಿ ನಿರ್ದೇಶಕರಾದ ಶಿವರಾಜ್ ಕುಮಾರ್.ಹೆಚ್.ಎಸ್. ಹಾಗೂ ಕೃಷಿ ಇಲಾಖಾ ಅಧಿಕಾರಿಗಳು ಹಾಜರಿದ್ದರು.
(Visited 1 times, 1 visits today)