ತುಮಕೂರು: ಜಿಲ್ಲಾ ಪಂಚಾಯತ್‌ನಲ್ಲಿ ಭ್ರಷ್ಟಾಚಾರ ಸಂಪೂರ್ಣ ಹಬ್ಬಿ, ಗುತ್ತಿಗೆದಾರರು ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವ ಸ್ಥಿತಿ ಉಂಟಾಗಿದೆ. ಪ್ರತಿ ವರ್ಷವೂ ನಿಯಮಾನೂಸಾರ ಮಾರ್ಚ ಕೊನೆಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುತ್ತಿರುವುದು ಸಹಜ ಪ್ರಕ್ರಿಯೆ, ಆದರೇ ಈ ಬಾರಿ ಗುತ್ತಿಗೆದಾರರು ಬೀದಿಗಿಲಿದು ಪ್ರತಿಭಟನೆ ಮಾಡುತ್ತಿರುವುದು ಶೋಚನಿಯ ಸಂಗತಿಯಾಗಿದೆ.
ಮಾರ್ಚ ಕೊನೆಯಲ್ಲಿ ಕಾವಗಾರಿಗಳನ್ನು ಕ್ರಮಬದ್ದವಾಗಿ ಪಾರದರ್ಶಕವಾಗಿ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಪ್ರತಿ ಬಾರಿಯು ತಮ್ಮ ಮನಸ್ಸಿಗೆ ಬಂದಹಾಗೆ ಮತ್ತು ತಮಗೆ ಮನಸೊಇಚ್ಛೆಯಂತೆ ತಾರ ತಮ್ಯ ಎಸಗುತ್ತಿರುವುದು ಗುತ್ತಿಗೆ ದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ದೂರು ಕೆಳಿಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ವ್ಯಾಪಕವಾಗಿ ದೂರುಗಳು ಕೇಳಿ ಬಂದಿದ್ದವು. ಈ ಬಗ್ಗೆ ಹಲವು ಬಾರಿ ವಿಧಾನಸಭೆಯಲ್ಲಿ, ಪತ್ರಿಕಾಗೋಷ್ಠಿಗಳಲ್ಲಿಗಳಲ್ಲಿಯೂ ಈ ತೀವ್ರ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆದಿದ್ದವು. ಆದರೆ ಇದೀಗ ಪೂರ್ಣಗೊಂದ ಕಾಮಗಾರಿಗಳಿಗೆ ಬಿಲ್ ಪಾವತಿಮಾಡುವಲ್ಲಿ ಅಧಿಕಾರಿಗಳ ಭ್ರಷ್ಟತನವನ್ನು ಖಂಡಿಸಿ ಗುತ್ತಿಗೆದಾರರೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುವುದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಕಾರ್ಯದ ಬಗ್ಗೆ ಜಿಲ್ಲೆಯ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇಲ್ಲಿಯವರೆಗೂ ಸಾಮಾನ್ಯವಾಗಿ ಕಾಮಾಗಾರಿಗಳಲ್ಲಿ ಲೋಪ, ಕಳಪೆ ಕಾಮಗಾರಿ ಮಾಡುತ್ತಿರುವುದಾಗಿ ದೂರುಗಳು ಕೇಳಿ ಬರುತ್ತಿದ್ದವೂ, ಆದರೇ ಈ ಬಾರಿ ಕಾಮಗಾರಿಗಳು ಪಾರದರ್ಶಕವಾಗಿದ್ದರು ಬಿಲ್ ಪಾವತಿ ಮಾಡುವುದರಲ್ಲಿ ಭ್ರಷ್ಟಚಾರವಾಗುತ್ತಿದೆ ಎಂಬ ದೂರುಗಳು ಹೇಚ್ಚಾಗಿ ಗುತ್ತಿಗರದಾರರು ಬೀದಿಯಲ್ಲಿ ತಮ್ಮ ಅಸಮಾಧಾನವನ್ನುವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಗ್ರಾಮೀಣ ಭಾಗದ ಜನವಸತಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷಿತ ಕುಡಿಯವ ನೀರನ್ನು ಒದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಮಹತ್ವವನ್ನು ನೀಡಿದೆ ಅನೇಕ ಯೋಜನೆ ರೂಪಿಸಿ ಗ್ರಾಮೀಣ ಪ್ರದೇಶಗಳಿಗೆ ಕೊಳವೆ ನೀರು ಸರಬರಾಜು ಯೋಜನೆ, ಕಿರು ನೀರು ಸರಬರಾಜು ಯೋಜನೆ, ಕೈ ಪಂಪು ಕೊಳವೆ ಬಾವಿ ಯೋಜನೆ, ಜೆಜೆಎಂ, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು ಅನುಷ್ಠಾನಗೊಳಿಸಿ ಕುಡಿಯುವ ನೀರು ಒದಗಿಸಲು ಚೆಕ್ ಡ್ಯಾಂ, ಓಒರ್ ಟ್ಯಾಂಕ್ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗುತ್ತಿಗೆದಾರರ ಮೂಲಕ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಂದ (ಎಲ್ ಓಸಿ) ನೀಡಿದ್ದರು, ಜೊತೆಗೆ ಸರ್ಕಾರದಿಂದ ಪೂರಕವಾದ ಅನುದಾನ ಬಿಡುಗಡೆ ಗೊಂಡರು ಗುತ್ತಿಗೆದಾರರಿಗೆ ಸಂಬAಧಪಟ್ಟ ಅನುದಾನವನ್ನ ಪಾವತಿ ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತ ತಮ್ಮ ಇಷ್ಟ ಬಂದವರಿಗೆ ಅನುದಾನ ಬಿಡುಗಡೆಗೊಳಿಸುತ್ತಿದ್ದಾರೆ ಎಂದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕುಣಿಗಲ್ ರಸ್ತೆಯ ಲೋಕೋಪಯೋಗಿ ಇಲಾಖೆಯ ಪಕ್ಕದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿ ಮುಂದೆ ಆರ್ಥಿಕ ವರ್ಷ ಮಾರ್ಚ್ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಸರ್ಕಾರದಿಂದ ಅನು ದಾನ ಬಿಡುಗಡೆ ಮಾಡಿದು,್ದ ಈ ಅನುದಾನವನ್ನು ಅಧಿಕಾರಿಗಳು ಮನಸ್ಸು ಇಚ್ಛೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನೂರಾರು ಗುತ್ತಿಗೆದಾರರು ಪ್ರತಿಭಟನೆ ಕೈಗೊಂಡು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದೆರಡು ದಿನಗಳ ಹಿಂದೆ ತುಮಕೂರು ಜಿ.ಪಂ. ಆವರಣದಲ್ಲಿ ಕೆಲ ಗುತ್ತಿಗೆದಾರರು ಪ್ರತಿಭಟನೆ ನಡೆಸಿದ ಬೆನ್ನೆಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಂದೆ ತಮ್ಮ ಅಳಲು ತೋಡಿಕೊಂಡರು.
ಗುತ್ತಿಗೆದಾರ ದೊಡ್ಡಗುಣಿ ರೇಣುಕ ಪ್ರಸಾದ್ ಮಾತನಾಡಿ, ಸರ್ಕಾರದಿಂದ ಅನುಮೋದನೆಗೊಂಡ ಯೋಜನೆಗಳು ಕ್ರಮಬದ್ದವಾಗಿ ಪಾರದರ್ಶಕವಾಗಿದ್ದರು ಸರ್ಕಾರದ ನಡಾ ವಳಿಯಂತೆ ಕಾಮಗಾರಿ ಕೈಗೊಂಡಿದ್ದರು ಇಲಾಖೆಯ ಕೆಲ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡುವಲ್ಲಿ ತಾರ ತಮ್ಯ ಎಸಗುತ್ತಿದ್ದು ಪ್ರತಿ ಬಾರಿಯೂ ಇವರ ಮುಂದೆ ಭಿಕ್ಷೆ ಬೇಡುವಂತಹ ಪರಿಸ್ಥಿತಿಯೇ ನಿರ್ಮಾಣವಾಗಿದೆ, ಸರ್ಕಾ ರದ ಟೆಂಡರ್ ಆದೇಶದಂತೆ ಗುತ್ತಿಗೆದಾರರು ಕಾಮಗಾರಿಯನ್ನು ಕ್ರಮಬದ್ಧವಾಗಿ ಪೂರ್ಣಗೊಳಿಸಿದ್ದರು ಅಧಿಕಾರಿಗಳು ಅನುದಾನದ ಬಿಡುಗಡೆಗೆ ಪಿತೂರಿ ನಡೆಸುತ್ತಿದ್ದಾರೆ.
ಗುತ್ತಿಗೆದಾರರು ಆರ್ಥಿಕವಾಗಿ ಸಂಕಷ್ಟಗಳನ್ನು ಅನುಭವಿಸುತ್ತಿದ್ದು ತಮ್ಮ ಕುಟುಂಬದ ಸದಸ್ಯರ ಒಡವೆ ಅಡವಿಟ್ಟು ಸಾಲ ಸೋಲ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರು. ಎಮ್ಮೆ ಚರ್ಮದ ಅಧಿಕಾರಿಗಳು ಎರಡು ಕಾಸಿನ ಆಸೆಗಾಗಿ ರಾಜಕಾರಣಿಗಳ ಒತ್ತಡ ಮತ್ತು ಅತಿ ಹೆಚ್ಚು ಕಮಿಷನ್ ಹಣ ನೀಡುವ ಗುತ್ತಿಗೆದಾರರ ಮಾತಿಗೆ ಬಲಿಯಾಗಿ ಕ್ರಮಬದ್ಧವಾಗಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಮೋಸ ಮತ್ತು ಅನ್ಯಾಯವನ್ನ ಮಾಡು ತ್ತಿದ್ದಾರೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ಅಧಿಕಾರಿಗಳು ಆರ್ಥಿಕ ವರ್ಷದ ಅಂತ್ಯದ ಸಮಯ ದಲ್ಲಿ ಕಚೇರಿಯಲ್ಲಿ ಕುಳಿತು ಬಿಲ್‌ಗಳನ್ನು ಪರಿಶೀಲನೆ ನಡೆಸದೆ ಹೋಟೆಲ್ ಮತ್ತು ಇತರೆ ಕಚೇರಿಗಳ ಬಳಿ ಕುಳಿತು ತಮ್ಮ ಕಚೇರಿಯ ಕಡತಗಳನ್ನು ತರಿಸಿ ಕೊಂಡು ಸಹಿ ಹಾಕುವುದು ಸೇರಿದಂತೆ ಸರ್ಕಾರದಿಂದ ಅನುಮೋದನೆಗೊಂಡು ಬಿಡುಗಡೆಗೊಂಡಿರುವ ಸುಮಾರು ೪೦ ಕೋಟಿ ರೂಗಳನ್ನ ಹೆಚ್ಚೆಚ್ಚು ಕಮಿಷನ್ ನೀಡುವ ಗುತ್ತಿಗೆದಾರರಿಗೆ ನೀಡುತ್ತಿರುವುದು ಖಂಡನೀಯವಾಗಿದ್ದು, ಕಚೇರಿ ಸಮಯದಲ್ಲಿ ಕದ್ದು ಓಡಾಡುತ್ತಿರುವುದು ಸುಳ್ಳು ಹೇಳಿಕೊಂಡು ತಿರುಗುತ್ತಿರುವುದು ಇವರ ಕೆಲಸವಾಗಿದೆ ಅಧಿಕಾರಿಗಳ ನಂಬರಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿರುವುದು ಕಂಡುಬರುತ್ತಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಎಲ್‌ಓಸಿ ವಿಚಾರವನ್ನು ಮುಂದಿಟ್ಟುಕೊAಡು ಗುತ್ತಿಗೆದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬಿಡುಗಡೆಗೊಂಡ ಶೇಕಡವಾರು ಅನುದಾನದ ಮಾಹಿತಿಯನ್ನು ನೀಡದೆ ಅಧಿಕಾರಿಗಳು ಸುಖಸುಮ್ಮನೆ ಗುತ್ತಿಗೆದಾರರನ್ನು ಅಲೆಯುವಂತೆ ಮಾಡಿ, ಸಾವಿನ ಮನೆಯ ಕದ ತಟ್ಟುವಂತೆ ಪ್ರೆರೆಪಣೆ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಗುತ್ತಿಗೆದಾರರು ಆತ್ಮಹತ್ಯೆಯ ದಾರಿಗಳನ್ನ ಯೋಚನೆ ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಅಧಿಕಾರಿಗಳು ಕ್ರಮಬದ್ಧವಾಗಿ, ಪಾರದರ್ಶಕವಾಗಿ ಪೂರ್ಣಗೊಂಡ ಕಾಮಗಾರಿಗಳ ಅನುದಾನವನ್ನು ಗುತ್ತಿಗೆದಾರರಿಗೆ ಬಿಡುಗಡೆ ಗೊಳಿಸಬೇಕು ಇಲ್ಲವಾದರೆ ಅಧಿಕಾರಿಗಳು ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಯೊಬ್ಬರು ಕದ್ದು ಮುಚ್ಚಿ ಕಂಪ್ಯೂಟರ್ ಕಡತದಲ್ಲಿ ಗುತ್ತಿಗೆದಾರರ ಹೆಸರನ್ನ ಸೇರಿಸಲು ಮುಂದಾಗುತ್ತಿರುವಾಗ ಇತರೆ ಗುತ್ತಿಗೆದಾರರು ಕಂಪ್ಯೂಟರ್ ಕೊಠಡಿಯ ಬಾಗಿಲನ್ನು ಬಂದು ಮಾಡಿಸಿ ಕಾಮಗಾರಿಗಳನ್ನು ಕ್ರಮಬದ್ಧವಾಗಿ ಪೂರ್ಣಗೊಂಡಿರುವ ಗುತ್ತಿಗೆದಾರರಿಗೆ ಹಣವನ್ನು ಮೊದಲು ಬಿಡುಗಡೆ ಗೊಳಿಸಬೇಕು, ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬ ನಾಣ್ಣುಡಿಯಂತೆ ಹೆಚ್ಚಿನ ಹಣದಾಸೆಗೆ ಅಧಿಕಾರಿಗಳು ಬಲಿಯಾಗಬಾರದು ನಿಮ್ಮಂತಹ ಅವರಿಂದಲೇ ಭ್ರಷ್ಟಾಚಾರದ ಕೂಗು ಹೆಚ್ಚು ಹೆಚ್ಚು ಕೇಳುತ್ತಿದೆ ಹಾಗೆ ಕೂಡಲೇ ಸಂಬAಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ಚರ್ಚಿಸಿ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ಥಳದಲ್ಲಿ ಗುತ್ತಿಗೆದಾರರಾದ ಸತೀಶ್. ಬಸವರಾಜ್.ರಕ್ಷಿತ್. ಜುಂಜೇಗೌಡ. ರವಿಕುಮಾರ್. ಇನ್ನು ಅನೇಕ ಗುತ್ತಿಗೆದಾರರು ಹಾಜರಿದ್ದರು.
(Visited 1 times, 1 visits today)