ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ). ತುಮಕೂರು ತಾಲೂಕು ಇವರ ಆರ್ಥಿಕ ಸಹಕಾರದೊಂದಿಗೆ ಕಣಕುಪ್ಪೆ ಗ್ರಾಮ ಪಂಚಾಯಿತಿ ಹಾಗೂ ಬನ್ನಿಕುಪ್ಪೆ ಕೆರೆ ಅಭಿವೃದ್ಧಿ ಸಮಿತಿ ಇವರ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಳಿಸಲಾದ ಬನ್ನಿ ಕುಪ್ಪೆ ಗ್ರಾಮದ ಕೆರೆಯ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು ಈ ಕಾರ್ಯಕ್ರಮವನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಸುರೇಶ್ ಗೌಡ ರವರು ನಾಮಫಲಕವನ್ನು ಅನಾ ವರಣಗೊಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಧರ್ಮದರ್ಶಿಗಳಾದ ಪಾಪ ಣ್ಣ ಮತ್ತು ಶಾಸಕರಾದ ಬಿ.ಸುರೇಶ್ ಗೌಡರು ಉದ್ಘಾ ಟಿಸಿದರು ಪ್ರಾಸ್ತಾವಿಕವಾಗಿ ಮಾತನಾಡಿದ ಮಾನ್ಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ನಮ್ಮೂರು ನಮ್ಮ ಕೆರೆ ಯೋಜನೆಯ ಪ್ರಮುಖ ಉದ್ದೇಶ ಕೆರೆಯ ಅಭಿವೃದ್ಧಿ ಸಮಿತಿಯವರ ಜವಾಬ್ದಾರಿಗಳು ಹಾಗೂ ಗ್ರಾಮಾಭಿವೃದ್ಧಿ ಯೋಜನೆಯಿಂದ ಲಭ್ಯವಿರುವ ಸೇವೆಗಳು ಮತ್ತು ಸಾಮಾಜಿಕ ಕಾರ್ಯಗಳ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಬಿ.ಸುರೇಶಗೌಡರವರು ಕೆರೆಗಳ ಸಂರ ಕ್ಷಣೆ ಮತ್ತು ನಿರ್ವಹಣೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮನೋಭಾವನೆಯನ್ನು ಮೂಡಿಸಿದರು ಮತ್ತು ಯೋಜನೆಯ ಇತರ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು ನಂತರದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಿಲೀಪ್ ಗೌಡ ಸಾಮಾಜಿಕ ಹೋರಾ ಟಗಾರರು ಯೋಜನೆಯ ವಿವಿಧ ಕಾರ್ಯಕ್ರಮ ಗಳ ಕಾರ್ಯ ವೈಖರಿ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆಯ ಉದ್ದೇಶಗಳು ಮತ್ತು ಮಹತ್ವವನ್ನು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಿ.ನಿ. ಪುರುಷೋತ್ತಮ್ ರವರು ಕೆರೆ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಡಾ. ರಂಗೇಗೌಡ್ರು,ಕಣಕುಪ್ಪೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ರೇಣುಕಾ, ಕಣಕುಪ್ಪೆ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀಮತಿ ರಂಗಮ್ಮ,ಸದಸ್ಯರಾದ ಶ್ರೀಮತಿ ಮಮತಾ, ಶ್ರೀಮತಿ ಚಿಕ್ಕಮ್ಮ, ಹಾಗೂ ಶ್ರೀ ಶಿವಕುಮಾರಸ್ವಾಮಿ ಧರ್ಮದರ್ಶಿಗಳು ಮತ್ತು ತುಮಕೂರು ತಾಲ್ಲೋಕಿನ ಯೋಜನಾಧಿಕಾರಿಗಳಾದ ಶ್ರೀ ಪ್ರಭಾಕರ್ ನಾಯಕ್, ಕೆರೆ ಅಭಿಯಂತರರಾದ ಭರತ್, ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಿಕ್ಕ ರಂಗಯ್ಯ, ಕಾರ್ಯದರ್ಶಿಗಳಾದ ಕುಮಾರ್ ಮತ್ತು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುಶೀಲಮ್ಮ ಹಾಗೂ ಕೃಷಿ ಮತ್ತು ವಲಯ ಮೇಲ್ವಿಚಾರಕರಾದ ಅನುಕುಮಾರ್, ಸೇವಾ ಪ್ರತಿನಿಧಿಗಳು ಮತ್ತು ಬನ್ನಿಕುಪ್ಪೆಯ ಗ್ರಾಮಸ್ಥರು ಕೆರೆಯ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
(Visited 1 times, 1 visits today)