ತುಮಕೂರು: ಮನುಷ್ಯ ಸೌಂದರ್ಯೋಪಾಸಕ, ಅವನು ವಾಸಿಸುವ ಮನೆ, ಉಡುವ ಬಟ್ಟೆ, ಊಟದ ತಟ್ಟೆಯೂ ಸೌಂದರ್ಯವಾಗಿರಬೇಕೆAದು ಬಯ ಸುತ್ತಾನೆ. ಆದರೆ ಇಂದು ಅಂತರ್ಮುಖಿ ಮತ್ತು ಬಹಿರ್ಮುಖಿ ಸೌಂದರ್ಯದ ನೆಲೆ ಯಾಗಿರುವ ರಂಗಭೂಮಿಯ ನಿರ್ಲಕ್ಷö್ಯ ಸುಭಿಕ್ಷ ಸಮಾಜಕ್ಕೆ ಆತಂಕಕಾರಿಯಾದುದು. ಆಳುವ ವರ್ಗಗಳ ಜಾಣ ಕಿವುಡುತನ ತೊಲಗಿ ರಂಗಭೂಮಿಗೆ ಮೊದಲ ಆದ್ಯತೆ ದಕ್ಕುವಂತಾಗಲಿ ಎಂದು ದೇಸಿ ರಂಗ ನಿರ್ದೇಶಕ ಮೆಳೇಹಳ್ಳಿ ದೇವರಾಜ್ ಅಭಿಪ್ರಾಯಪಟ್ಟರು.
ಅವರು ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಗುರುವಾರ ಸಂಜೆ ಡಮರುಗ ರಂಗತAಡದಿAದ ನಡೆದ ವಿಶ್ವರಂಗಭೂಮಿ ದಿನ ಆಚರಣೆ ಕಾರ್ಯಕ್ರಮದಲ್ಲಿ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ನಂತರ ರಂಗಸAದೇಶ ವಾಚನ, ಕೋಲಾಟ, ಜಾನಪದ ನೃತ್ಯ, `ನೀಲಾಂಬಿಕೆ’ ನಾಟಕ ಪ್ರಯೋ ಗಗೊಂಡಿತು. ನೀಲಾಂಬಿಕೆಯಾಗಿ ಲಯ, ಗಂಗಾAಬಿಕೆಯಾಗಿ ಚಿನ್ಮಯ, ಬಿಜ್ಜಳನಾಗಿ ಶಶಿಕುಮಾರ್ ಗೌಡಿಹಳ್ಳಿ, ಬಸವಣ್ಣನಾಗಿ ಪಾತ ಲಿಂಗಯ್ಯ, ಪುರೋಹಿತನಾಗಿ ನಂದಿತ ದಿನೇಶ್ ಭಟ್, ಹಡಪದ ಅಪ್ಪಣ್ಣನಾಗಿ ಅಕ್ಷಯ್ ಮನೋಜ್ಞವಾಗಿ ಅಭಿನಯಿಸಿದರು.
(Visited 1 times, 1 visits today)