ಶಿರಾ: ತಿಗಳ ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಶಿಕ್ಷಣ ಪಡೆದಾಗ ಮಾತ್ರ, ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಶಿರಾ ನಗರದಲ್ಲಿ ತಿಗಳ ಸಮುದಾಯದ ಅಭಿವೃದ್ಧಿಗೆ ಕಲ್ಲು ಕೋಟೆ ಸರ್ವೆ ನಂಬರ್ ನಲ್ಲಿ ೨೦.ಗುಂಟೆ ಜಮೀನು ನೀಡಿದ್ದು, ಕಂದಾಯ ಇಲಾಖೆ ಜಾಗ ಗುರ್ತಿಸಿ ನೀಡಿದಾಗ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಗಳ ಸಮಾಜದ ಮುಖಂಡ ಆಣೆಕಾರ್ ವೈ. ಸಿ. ಶಿವರಾಜ್ ಹೇಳಿದರು.
ಶಿರಾ ತಾಲೂಕು ಆಡಳಿತ ವತಿಯಿಂದ ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ೩. ನೇ ವರ್ಷದ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೈ.ಎನ್.ಮಂಜುನಾಥ್ ಮಾತನಾಡಿ ಯಲಿ ಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಿಗಳ ಸಮಾಜದ ಕುಟುಂಬಗಳು ಹೆಚ್ಚಾಗಿದ್ದು , ಪ್ರತಿಯೊಬ್ಬರಿಗೂ ಸರ್ಕಾರಿ ನಿವೇಶನವನ್ನು ನೀಡಬೇಕು, ಸಂಘಟನಾತ್ಮಕವಾಗಿ ಎಲ್ಲರೂ ಒಗ್ಗೂಡಿ ಮುನ್ನಡೆದಾಗ ಮಾತ್ರ ತಿಗಳ ಸಮು ದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರಕಲು ಸಾಧ್ಯ ಎಂದರು.
ಯಜಮಾನ್ ಟಿ.ರಂಗಪ್ಪ ಮಾತನಾಡಿ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತೋತ್ಸವ ಆಚರಣೆ ಯನ್ನು ಮತ್ತಷ್ಟು ವೈಭವಯುತವಾಗಿ ನಡೆಸಲು ತಾಲೂಕು ಆಡಳಿತ ಕ್ರಮ ಕೈಗೊ ಳ್ಳಬೇಕು, ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದರೆ ತಿಗಳ ಸಮುದಾಯ ಕೂಡ ಸಹಕರಿಸುತ್ತದೆ ಎಂದರು.
ಗ್ರೇಡ್ ೨.ತಹಸೀಲ್ದಾರ್ ನಾಗರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ನಾಗರಾಜ್, ಪೂಜಾರ್ ಕರಿಯಪ್ಪ, ಯಲಿ ಯೂರು ಗ್ರಾಮ ಪಂಚಾಯಿತಿ ಸದಸ್ಯ ವೈ.ಟಿ. ನವೀನ್, ಮುಖಂಡರಾದ ವೈ.ಟಿ.ಬಾಬು, ವೈ. ಎಲ್. ಶ್ರೀನಿವಾಸ್, ವೈ .ಎಚ್. ತಿಮ್ಮಪ್ಪ, ವೈ. ಎಸ್. ಬಸವರಾಜು, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕನಕಪ್ಪ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳ ತಿಂಗಳ ಸಮುದಾಯದ ಮುಖಂಡರು, ವಿವಿಧ ಇಲಾ ಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
(Visited 1 times, 1 visits today)