ತುಮಕೂರು: ರಂಗಭೂಮಿಗೆ ಸರಕಾರದ ವತಿಯಿಂದ ಅನುದಾನದ ಕೊರತೆ, ಪ್ರೋತ್ಸಾಹದ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ರಂಗಭೂ ಮಿಯಲ್ಲಿ ತೊಡಗಿಕೊಂಡಿರುವ ನಾವುಗಳೇ ಇದರ ಉಳಿವಿಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡ ಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ಹರಿಕಥಾ ವಿದ್ವಾನ್ ಕಲಾಶ್ರೀ ಡಾ.ಲಕ್ಷö್ಮಣದಾಸ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗಸೊಗಡು ಕಲಾ ಟ್ರಸ್ಟ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಕಲಾವಿದರ ಸಹಕಾರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ-೨೦೨೫ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಮುಂದಿನ ಯುವ ಜನಾಂಗಕ್ಕೆ ರಂಗಭೂಮಿಯನ್ನು ತಲುಪಿಸುವ ನಿಟ್ಟಿನಲ್ಲಿ ನಮಗೆ ಎದುರಾಗಿರುವ ಸಮಸ್ಯೆಗೆ ಪರಿ ಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ರAಗಭೂಮಿಗೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ.ಆದರೆ ಇಂದು ಪೌರಾಣಿಕ ನಾಟ ಕಗಳಿಗೆ ಒಂದಷ್ಟು ಪ್ರೇಕ್ಷಕರು ಸೇರುವುದನ್ನು ಬಿಟ್ಟರೆ, ಸಾಮಾಜಿಕ, ಪ್ರಯೋಗಿಕ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಇದೆ.ಹಾಗಾಗಿ ಕಲಾವಿದರು ಸಹ ನಾಟಕದ ವಸ್ತು ವಿಷಯ ಆಯ್ಕೆಯಲ್ಲಿಯೂ ಭಿನ್ನತೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ.ಕಲಾವಿದರು, ತಂತ್ರಜ್ಞರು,ಹಿನ್ನೆಲೆ ಸಂಗೀತ ದವರು,ಮೇಕಪ್ ಮ್ಯಾನ್,ವಸ್ತç ವಿನ್ಯಾಸಗಾರರು ಎಲ್ಲರೂ ಸೇರಿ ಒಂದು ಚಿಂತನೆ ನಡೆಸಿ,ಅಗತ್ಯ ಮಾರ್ಪಾಡು ಮಾಡಿಕೊಳ್ಳ ಬೇಕಾಗಿದೆ.ಕಮ್ಮಟ, ಕಾರ್ಯಾಗಾರ, ವಿಚಾರಗೋಷ್ಠಿಗಳನ್ನು ಆಯೋಜಿಸುವ ತು ರ್ತು ಅಗತ್ಯವಿದೆ. ಆಗ ಮಾತ್ರ ಯುವಕರು ರಂಗ ಭೂಮಿಯನ್ನು ಮನದಟ್ಟು ಮಾಡಿಕೊಳ್ಳಲು ಸಾಧ್ಯ ಎಂದು ಡಾ.ಲಕ್ಷö್ಮಣದಾಸ್ ನುಡಿದರು.
ಮಂಜುನಾಥ ಕಲಾ ಸಂಘದ ಅಧ್ಯಕ್ಷ ಯೋಗಾ ನಂದಕುಮಾರ್ ಮಾತನಾಡಿ, ರಂಗಭೂಮಿಯನ್ನು ಸದಾ ಜೀವಂತವಾಗಿ ಡುವ ಜವಾಬ್ದಾರಿ ನಮ್ಮೆಲ್ಲ ರದಾಗಿದೆ.ಜನರಿಗೆ ಪೌರಾಣಿಕ ನಾಟಕಗಳ ಜೊತೆ ಗೆ, ಐತಿಹಾಸಿಕ, ಸಾಮಾಜಿಕ ನಾಟಕಗಳನ್ನು ಉಣಬಡಿಸುವ ಕೆಲಸ ಆಗಬೇಕಾಗಿದೆ.ಸಮಾಜ ಪರಿವರ್ತನೆಯ ನಾಟಕಗಳಿಗೆ ಹೆಚ್ಚು ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಕಮ್ಮಟ, ಕಾರ್ಯಾ ಗಾರಗಳನ್ನು ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಕಲಾ ಪ್ರದರ್ಶನದ ವೇದಿಕೆಯಾದ ರಂಗಭೂಮಿಗಾಗಿ ಹಲವಾರು ಜನರು ದುಡಿದಿದ್ದಾರೆ,ಅವರೆಲ್ಲನ್ನು ಸ್ಮರಿಸುವ ದಿನ ಇದು.ಡಾ.ಗುಬ್ಬಿವೀರಣ್ಣ, ನಟಭಯಂಕರ್ ಗಂಗಾ ಧರ ರಾಯರು,ಸೀಬಿ ಮಲ್ಲಪ್ಪನವರು ಸೇರಿದಂತೆ ಅನೇಕರು ರಂಗಭೂಮಿಗೆ ತನ್ನದೆ ಕೊಡುಗೆ ನೀಡಿದರು. ಜಗತ್ತಿನ ಅನೇಕ ಕ್ರಾಂತಿಗಳ ಹಿಂದೆ ರಂಗಭೂಮಿಯ ಕೊಡುಗೆ ಇದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾ ರಕರಾದ ಸುರೇಶಕುಮಾರ್ ಮಾತನಾಡಿದರು. ಕರ್ನಾಟಕ ಜನಪದ,ಯಕ್ಷಗಾನ, ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ ಮಾತನಾಡಿದರು. ಇದೇ ವೇಳೆ ಹಿರಿಯ ಕಲಾವಿದರಾದ ಡಾ.ಲಕ್ಷö್ಮಣದಾಸ್ ಮತ್ತು ಪೌರಾಣಿಕ ನಾಟಕಗಳ ನಿರ್ದೇಶಕ ಪ್ರವೀಣಕುಮಾರ್ ಅವರುಗಳಿಗೆ ೨೦೨೫ನೇ ಸಾಲಿನ ರಂಗ ಗೌರವ ನೀಡಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ರಂಗಸೊಗಡು ಕಲಾ ಟ್ರಸ್ಟ್ನ ಸಿದ್ದರಾಜು ಸ್ವಾಂದೇ ನಹಳ್ಳಿ ಉಪಸ್ಥಿತರಿದ್ದರು.
(Visited 1 times, 1 visits today)