ಚಿಕ್ಕನಾಯಕನಹಳ್ಳಿ: ಹಳ್ಳಿಗೊಂದು ವಚನದೀಪ ಕಾರ್ಯಕ್ರಮದಡಿ ಇಂದು ಪಟ್ಟಣದ ಶ್ರೀಗುರುಸಿದ್ದರಾಮೇಶ್ವರ ದೇಗುಲದ ಶ್ರಿಕರಿಸಿದ್ದೇಶ್ವರ ಮಠದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಂದು ಸಂಜೆ ೭-೩೦ಕ್ಕೆ ಡಾ. ಶ್ರೀ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಅಂಗವಾಗಿ ಶರಣಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯಿಂದ ನಡೆಯುವ ವಚನ ದೀಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಶರಣ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಪ್ರೊ. ಹೊನ್ನೆಬಾಗಿ ಬಸವರಾಜು ವಹಿಸುವರು. ರೋಟರಿ ಕ್ಲಬ್ ಅಧ್ಯಕ್ಷರಾದ ಜಿ. ಲಿಂಗದೇವರು ಉದ್ಘಾಟಿಸುವರು. ತಾಲ್ಲೂಕು ಕಸಾಪದ ಪ್ರಧಾನ ಕಾರ್ಯದರ್ಶಿ ಡಾ.ಸಿ. ರವಿಕುಮಾರ್ ರವರು ಕಾಯಕಯೋಗಿ ಶ್ರೀ ಸಿದ್ದರಾಮರ ಕುರಿತು ವಿಶೇಷ ಉಪನ್ಯಾಸ ನೀಡುವರು. ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಉಪಾಧ್ಯಕ್ಷ ಎಂ.ವಿ. ರಾಜಕುಮಾರ್, ಜಿಲ್ಲಾ ವೀರಶೈವ ಮಹಾಸಭಾದ ಉಪಾಧ್ಯಕ್ಷರಾದ ರವಿಶಂಕರ್, ಪ್ರಗತಿಪರ ಉದ್ಯಮಿ ಡಿಬಿ. ಆದರ್ಶ, ಶ್ರೀಮತಿ ರಾಧಾ ಟಿ.ಡಾ. ವಿಜಯರಾಘವೇಂದ್ರ, ಶಿಕ್ಷಕ ಚಂದ್ರಮೌಳಿ ಮುಂತಾದವರು ಭಾಗವಹಿಸುವರು. ಕಾರ್ಯಕ್ರಮದ ಅಂಗವಾಗಿ ಸಂಜೆ ೪ರಿಂದ ೬ ರವರೆಗೆ ಉಚಿತ ಆರೋಗ್ಯ ತಪಾಸಣೆಯನ್ನು ಶ್ರೀ ಸಾಯಿಗಂಗಾ ಆಸ್ಪತ್ರೆಯವತಿಯಿಂದ ನಡೆಸಲಾಗುವುದು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪನವರನ್ನು ಸನ್ಮಾನಿಸಲಾಗುವುದು.
(Visited 1 times, 1 visits today)