ತುಮಕೂರು:ಮೇಲ್ನೋಟಕ್ಕೆ ಒಂದು ಸಮಾಜವನ್ನು ನೋಡಿದಾಗ ಹೆಣ್ಣು, ಗಂಡಿನ ನಡುವೆ ಎಲ್ಲವೂ ಸರಿಯಿದೆ ಎಂಬ ಭಾವನೆ ಮೂಡುವುದು ಸಹಜ.ಆದರೆ ವಾಸ್ತವದಲ್ಲಿ ಇದು ಬೇರೆಯದ್ದೇ ಆಗಿದೆ.ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ, ಹೆಣ್ಣು ಮತ್ತು ಗಂಡಿನ ನಡುವಿನ ತಾರತಮ್ಯದ ನೀತಿಯನ್ನು ಹೋಗಲಾಡಿಸಲು ೨೮೫ ವರ್ಷಗಳು ಬೇಕು ಎನ್ನತ್ತದೆ.ಈ ವರದಿಯನ್ನು ನೋಡಿದರೆ ಅಳಬೇಕೋ, ನಗಬೇಕೋ ತಿಳಿಯದಾಗಿದೆ ಎಂದು ತುಮಕೂರು ವಿವಿ ಕುಲಸಚಿವ ನಾಹಿದಾ ಜಮ್ಹ್ ಜಮ್ಹ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ವೇದಿಕೆಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಮನೆಯಿಂದ ಹೊರ ಹೋದ ಹೆಣ್ಣು ಮಗಳು ಸುರಕ್ಷಿತವಾಗಿ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇಲ್ಲ.ಕೌಟುಂಬಿಕ ದೌರ್ಜನ್ಯ ಮಿತಿಮೀರಿದೆ.ಸಾಕಷ್ಟು ಅಡೆತಡೆಗಳನ್ನು ದಾಳಿ ಆಕೆ ಸಾಧನೆ ಮಾಡಬೇಕಾಗಿದೆ.ಒಮ್ಮೊಮ್ಮೆ ಇಷ್ಟೆಲ್ಲಾ ವೈರುದ್ಯಗಳ ನಡುವೆ ನಮಗೆ ವಿಶ್ವ ಮಹಿಳಾ ದಿನಾಚರಣೆ ಅಗತ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ವಿಶ್ವ ಮಹಿಳಾ ದಿನವೆಂಬುದು ಕೇವಲ ಸಾಧನೆ ಮಾಡಿದ ಮಹಿಳೆಯರಿಗೆ ಸಿಮೀತವಾಗಬಾರದು. ಇಡೀ ಜಗತ್ತಿನ ಎಲ್ಲಾ ಮಹಿಳೆಯರಿಗೆ ಸಂಬAಧಿಸಿದ್ದಾಗಬೇಕು.ನಮ್ಮಲ್ಲಿ ಒಂದು ಹಬ್ಬ,ಹರಿದಿನ ಬಂದರೆ ಅದು ಇಡೀ ಮಹಿಳಾ ಕುಲವನ್ನೇ ಅವರಿಸಿಕೊಂಡಿರುತ್ತದೆ.ಎರಡು ದಿನದಲ್ಲಿ ಬರುವ ಯುಗಾದಿಯ ಯಶಸ್ಸು ಮಹಿಳಾ ಸಂಕುಲದ ಮೇಎ ನಿಂತಿದೆ.ಗAಡು ಮಕ್ಕಳು ಮನೆಗೆ ಬೇಕಾದನ್ನು ಮಾರ್ಕೇಟ್‌ನಿಂದ ತಂದುಕೊಟ್ಟರೆ ಮುಗಿಯಿತು.ಆದರೆ ಹೆಣ್ಣು ಹಾಗಲ್ಲ.ಎಲ್ಲರಿಗಿಂತ ಮೊದಲೇ ಎದ್ದು,ಗುಡಿಸಿ, ಸಾರಿಸಿ, ರಂಗೋಲಿ ಇಟ್ಟು, ಮನೆಯ ಅಲಂಕಾರ ಮಾಡಿ,ಅಡುಗೆ ಮಾಡಿ, ಪೂಜೆ ಮಾಡಿ, ಗಂಡ, ಮಕ್ಕಳಿಗೆ ಬಡಿಸಿ,ತಾನು ಊಟ ಮಾಡುವ ವೇಳೆಗೆ ಇಡೀ ದಿನವೇ ಮುಗಿದು ಹೋಗಿರುತ್ತದೆ.ಈ ಹಿಂದಿನ ದಿನಗಳಿಗೆ ಹೊಲಿಕೆ ಮಾಡಿದರೆ ಗಂಡು ಮಕ್ಕಳ ಸಹಕಾರ ಹೆಚ್ಚಾಗಿದೆ.ಮಗಳನ್ನು ಅವಳ ಗಂಡ ಚನ್ನಾಗಿ ನೋಡಿಕೊಂಡರೆ ಚಿನ್ನದಂತಹ ಅಳಿಯ.ಅದೇ ಮಗ ಸೊಸೆಯನ್ನು ಚನ್ನಾಗಿ ನೋಡಿಕೊಂಡರೆ ಹೆಂಡತಿ ಗುಲಾಮ ಎನ್ನುವ ಪರಿಸ್ಥಿತಿ ಇದೆ.ಇದು ಬದಲಾಗಬೇಕು.ಒಳ್ಳೆಯ ನೋಟ, ಕೆಟ್ಟನೋಟ ಕುರಿತು ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಹೇಳಿಕೊಡುಬೇಕಿದೆ ಎಂದು ನಾಹಿದ ಜಮ್ಹ್, ಜಮ್ಹ್ ನುಡಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ.ಹುಸ್ನಾ ಸುಲ್ತಾನ್ ಪ್ರಾಸ್ತಾವಿಕವಾಗಿ ಮಾತನಾಡಿ,ವಿಶ್ವ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ ಲಿಂಗ ತಾರತಮ್ಯ ನಿವಾರಣೆ.ಸಮಾಜ ಬದಲಾವಣೆಗೆ ಹೇಗೆ ಮಹಿಳೆ ಕಾರಣವಾಗುತ್ತಾಳೆ ಎಂಬುದು ಮುಖ್ಯ ವಿಷಯವಾಗಿದೆ.ಸಮಾನತೆ ಎಂಬುದು ಶಿಕ್ಷಣ,ಉದ್ಯೋಗ ಎಲ್ಲದರಲ್ಲಿಯೂ ಇರಬೇಕಾಗುತ್ತದೆ.ಶಿಕ್ಷಣ ಮಹಿಳೆಯನ್ನು ಸಂಕೋಲೆಗಳಿAದ ಬಿಡಿಸಿ, ಆಕೆಯನ್ನು ಸಶಕ್ತಳನ್ನಾಗಿ ಮಾಡುತ್ತದೆ.ವಿದ್ಯಾವಂತ ಮಹಿಳೆಯಿಂದ ಸಮಾಜಕ್ಕೆ, ದೇಶಕ್ಕೆ ಒಳ್ಳಯದಾಗುತ್ತದೆ.ದೇಶದ ಜಿಡಿಪಿಗೂ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ.ವಸಂತ,ಮಹಿಳೆಯರು ಇಂದಿನ ಅಧುನಿಕ ಮತ್ತು ಪೈಪೋಟಿ ಯುಗದಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕಿದೆ.ಆಗ ಮಾತ್ರ ಮಹಿಳೆಯರು ಸಬಲರು ಎಂದು ಜಗತ್ತಿಗೆ ಸಾರಬಹುದು ಎಂದರು.
ಸರಕಾರಿ ಅಭಿಯೋಜಕರಾದ ಕವಿತಾ.ವಿ.ಎ ಅವರು ವಿಶೇಷ ಉಪನ್ಯಾಸ ನೀಡಿದರು.ಉಪನ್ಯಾಸಕರುಗಳಾದ ಮಹೇಶ್.ಹೆಚ್.ಆರ್.,ಡಾ.ತಿಪ್ಪೇಸ್ವಾಮಿ, ಐಕ್ಯೂಎಸ್ಸಿ ಸಂಚಾಲರಾದ ಡಾ.ಅನುಸೂಯ, ಡಾ.ಯೋಗೇಶ್,ಡಾ.ಕೃಷ್ಣಾನಾಯಕ್, ಕರ್ಣಂವಾಣಿ, ಉಷಾ ಕಮಲ,ಡಾ.ಫತಿಮಾ ಜೋಹರಾ ಜಬೀನ್ ಮತ್ತಿತರರು ಉಪಸ್ಥಿತರಿದ್ದರು.