ತುಮಕೂರು: ವಿಶೇಷ ಚೇತನರು ತಮ್ಮ ದೈಹಿಕ ನ್ಯೂನ್ಯತೆ ಮೆಟ್ಟಿನಿಂತು ತಮ್ಮಲ್ಲಿರುವ ಆತ್ಮಶಕ್ತಿ ಗುರುತಿಸಿಕೊಂಡು ಸಮರ್ಥವಾಗಿ ಬದುಕು ಕಟ್ಟಿಕೊಳ್ಳುವ ಬಗ್ಗೆ ಚಿಂತನೆ ಮಾಡಬೇಕು. ದೇವರು ನ್ಯೂನ್ಯತೆ ಕೊಟ್ಟವರಿಗೆ ಅಗಾಧ ಪ್ರಮಾಣದ ಆತ್ಮಶಕ್ತಿ ಕೊಟ್ಟಿರುತ್ತಾನೆ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ನ ೧೬ನೇ ವಾರ್ಷಿ ಕೋತ್ಸವದ ಅಂಗವಾಗಿ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಚೇತನರಿಗೆ ಫುಡ್‌ಕಿಟ್ ವಿತರಣೆ ಮಾಡಿದರು. ಇದೇ ವೇಳೆ ವಿಕಲಚೇತನರಿಗೆ ಉದ್ಯೋಗ ಆಧಾರಿತ ತರಬೇತಿ ನೀಡುವ ಪ್ರೇರಣಾ ತರಬೇತಿ ಕೇಂದ್ರವನ್ನು ಸ್ವಾಮೀಜಿ ಉದ್ಘಾಟಿಸಿದರು.
ನಂತರ ಮಾತನಾಡಿದ ಸ್ವಾಮೀಜಿ, ಅಂಗವಿಕಲರಿಗಿAಥಾ ಎಲ್ಲಾ ಅಂಗಗಳು ಸರಿಯಾಗಿದ್ದೂ ಮನೋವಿಕಲರಾಗಿ ವರ್ತಿಸುವವರನ್ನು ನಿಯಂತ್ರಿಸುವುದು ಕಷ್ಟ. ವಿಕಲಚೇತನರು ಹತಾಶರಾಗಬಾರದು, ಅಂಗವೈಕಲ್ಯ ಶಾಪವಲ್ಲ, ಅದ ನ್ನು ಸವಾಲಾಗಿ ಸ್ವೀಕಾರ ಮಾಡಿ ಬೆಳೆಯಬೇಕು. ನಿಮ್ಮಲ್ಲಿರುವ ಶಕ್ತಿಸಾಮ ರ್ಥ್ಯಗಳನ್ನು ಬಳಸಿಕೊಂಡು ಸಾಮಾನ್ಯರಲ್ಲಿ ಸ್ವಾವಲಂಬಿಯಾಗಿ ಬಾಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಯುಗಾದಿ ಹಾಗೂ ರಂಜಾನ್ ಹಬ್ಬಗಳು ಈ ಬಾರಿ ಹಿಂದೆಮುAದೆ ಬಂದಿವೆ. ಎಲ್ಲರೂ ಸಾಮರಸ್ಯದಿಂದ ಬಾಳಬೇಕು ಎಂಬದು ಇದರ ಸಂಕೇತ. ಹಬ್ಬದ ಸಂದರ್ಭದಲ್ಲಿ ಬಡವರಿಗೆ, ಅಶಕ್ತರಿಗೆ ಸಹಾಯ ಮಾಡಿ ಅವರೂ ಸಂತೋಷದಿAದ ಹಬ್ಬ ಆಚರಣೆ ಮಾಡಬೇಕು ಎಂದು ಬಯಸುವುದು ಉತ್ತಮ ಆಶಯ. ಇಂತಹ ಕಾರ್ಯಗಳು ಹೆಚ್ಚಾಗಿ ನಡೆದು ಎಲ್ಲರೂ ಶಾಂತಿ ಸಹಬಾಳ್ವೆಯಿಂದ ಬಾಳಬೇಕು ಎಂದು ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಮಸೀದಿಯ ಮುತವಲ್ಲಿ ಅಸಾದುಲ್ಲಾ ಖಾನ್, ಸಾಹಿತಿ ಡಾ.ಶೈಲಾ ನಾಗರಾಜ್, ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿ. ಮುರುಗೇಶ್, ಉಪಾಧ್ಯಕ್ಷೆ ಯಶೋಧ, ಕಾರ್ಯದರ್ಶಿ ಎಸ್.ಬಾಬು, ನಿರ್ದೇಶಕರಾದ ಶಬ್ಬೀರ್ ಪಾಷಾ, ರೋಜಾ ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)