ತುರುವೇಕೆರೆ: ಜಲ ಜೀವನ್ ಮಿಷನ್ ಆಡಿಯಲ್ಲಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಮನೆಮನೆ ಗಂಗಾ ಯೋಜನೆ ಕಾಮಗಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಭೂಮಿ ಪೂಜೆ ನೆರವೇರಿಸಿದರು.
ತಾಲೂಕಿನ ಕಸಬಾದ ಮುನಿಯೂರು ಗ್ರಾ.ಪಂ. ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದಲ್ಲಿ ಗ್ರಾಮಾಭಿವೃದ್ದಿ ಹಾಗೂ ಪಂಚಾಯತ್‌ರಾಜ್ ವಿಶೇಷ ಯೋಜನೆಯಡಿಯಲ್ಲಿ ಅಂದಾಜು ವೆಚ್ಚ ೩೭ಲಕ್ಷ ಹಾಗೂ ಮಾಯಸಂದ್ರ ಹೋಬಳಿಯ ದೇವನಾಯ್ಕನಹಳ್ಳಿ ಗ್ರಾಮದಲ್ಲಿ ೩೪ ಲಕ್ಷ ವ್ಯಚ್ಚ ದಲ್ಲಿನ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ಮಾಡಿ ಕಾಮಾಗಾರಿಗೆ ಚಾಲನೆ ನೀಡಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಮನೆಯ ಬಳಿಗೆ ಶುದ್ದ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಗ್ರಾಮೀಣ ಭಾಗದ ಜನರು ಇದರ ಸದೂಪಯೋಗ ಪಡಿಸಿಕೊಳ್ಳಬೇಕು. ಈಗಾಗಲೇ ತಾಲ್ಲೂಕಿನ ೨೩೦ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿಲಾಗಿದೆ. ಉಳಿದ ಕಾಮಗಾರಿ ಅದೋಷ್ಟು ಬೇಗ ಕಾಮಗಾರಿ ಮುಗಿಸಬೇಕೆಂಬುದು ಸರ್ಕಾರದ ಚಿಂತನೆಯಾಗಿದೆ. ಆ ನಿಟ್ಟಿನಲ್ಲಿ ಕಳಪೆಯಾಗದಂತೆ ಜನತೆ ಎಚ್ಚರ ವಹಿಸಬೇಕೆಂದರಲ್ಲದೆ ಗುತ್ತಿಗೆದಾರರು ಸಹ ಗುಣಮಟ್ಟ ಕಾಪಾಡುವಂತೆ ಎಚ್ಚರಿಸಿದರು.
ಈ ಸಂದರ್ಬದಲ್ಲಿ ಪುರ ಗ್ರಾ.ಪಂ. ಮಾಜಿ ಸದಸ್ಯ ಪಿ.ಟಿ.ಗಂಗಾಧರ್, ಮುತ್ತುಗದಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅಪ್ರೋಸ್‌ಉನ್ನೀಸಾ, ದೇವನಾಯ್ಕನಹಳ್ಳಿ ಗೋಪಾಲ್, ಪರಮಶಿವಯ್ಯ, ದಿಲೀಪ್, ರಾಜೇಶ್, ಮಾದಾಪಟ್ಟಣ ಗ್ರಾಮದ ಮುಖಂಡರಾದ ಚಂದ್ರಕುಮಾರ್, ಸುದೇಶ್‌ಕುಮಾರ್, ಟಿ.ಶಂಕರಪ್ಪ, ತೀರ್ಥಕುಮಾರ್, ಎಂ.ಟಿ.ಮೋಹನ್ ಕುಮಾರ್, ಉಮೇಶ್, ದಯಾನಂದ್, ಒಬ್ಬೇ ನಾಗಸಂದ್ರ ಸೋಮಣ್ಣ, ರವಿಕುಮಾರ್, ಪ್ರಸನ್ನ, ದಶರ ಥ್‌ಮೂಡಿಕ್ ಉಪಸ್ಥಿತರಿದ್ದರು.
(Visited 1 times, 1 visits today)