ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ರೈತರ ಪಾಲಿನ ಏಕೈಕ ಜೀವಜಲದ ಮೂಲವಾದ ಹೇಮಾವತಿ ನಾಲೆಯ ಬಹುತೇಕಕಡೆ ಹೂಳುತುಂಬಿ ಮುಂಬರುವ ದಿನದಲ್ಲಿ ನೀರೇಹರಿಯದ ಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ರೈತರ ಪಾಲಿಗೆ ಏಕೈಕ ಭರವಸೆಯಾಗಿದ್ದ ಹೇಮಾವತಿ ನಾಲೆಯಿಂದ ಈ ಭಾಗದ ೨೬ಕೆರೆಗಳಿಗೆ ನೀರುಣಿಸುವ ಯೋಜನೆ ಅನೇಕ ಹೋರಾಟದ ತಿರುವುಗಳನ್ನು ಪಡೆದು ಕಳೆದ ಮೂರುವರ್ಷದ ಹಿಂದೆ ಒಂದುಭಾಗದ ನಾಲೆಯಕಾಮಗಾರಿ ಮುಗಿದು ತಾಲ್ಲೂಕಿನ ಸಾಸಲು, ಶೆಟ್ಟಿಕೆರೆ, ಹೆಸರಳ್ಳಿ, ಅಂಕಸAದ್ರದ ಅಣೆ, ತಿಮ್ಲಾಪುರ, ಹುಳಿಯಾರು, ಬೋರನಕಣಿವೆ ಜಲಾಷಯದವರೆಗೂ ನೀರು ಹರಿದು ತಾಲ್ಲೂಕಿನ ಜನತೆಗೆ ಸಂತಸವನ್ನುAಟು ಮಾಡಿತ್ತು. ಪಾತಾಳ ಕಂಡಿದ್ದ ಅಂತರ್ಜಲ ಮೇಲಕ್ಕೆರಿತ್ತು. ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿದ್ದ ಈ ತಾಲ್ಲೂಕಿನಲ್ಲಿ ಹೇಮಾವತಿ ಯೋಜನೆಯ ಇತರೆ ಭಾಗದ ಕಾಮಗಾರಿ ಮುಗಿದು ನೀರು ಹರಿದರೆ ಮುಕ್ಕಾಲು ತಾಲ್ಲೂಕಿನ ನೀರಿನ ಬವಣೆ ನೀಗಿಲಿದೆ, ಅಂತರ್ಜಲ ಉತ್ತಮಗೊಂಡು ಕೊಳವೆಬಾವಿಯ ನೀರಿನ ಆಶ್ರಯದಲ್ಲಿಯೇ ಬೆಳೆ ಉಳಿಸಿಕೊಳ್ಳಲು ಜೀವನ ಸವೆಸುತ್ತಿದ್ದ ರೈತರಿಗೆ ಮುಂದಿನ ದಿನ ನೆಮ್ಮದಿಯ ದಿನವಾಗಲಿದೆ ಎಂಬ ಅವರ ನಾನಾ ಕನಸಿಗ ಕೊಡಲಿ ಪೆಟ್ಯು ಬಿದ್ದಿದೆ. ತಾಲ್ಲೂಕು ಆಡಳಿತದ ದಿವ್ಯ ನಿರ್ಲ್ಯಕ್ಷದ ಪರಿಣಾಮ ಮೂರು ವರ್ಷದ ಹಿಂದೆ ನೀರುಹರಿದ ಕಾಲವೆಯಲ್ಲಿ ಮಣ್ಣು ಕುಸಿದು ನೀರು ಹರಿಯಲು ಅಡಚಣೆಯಾಗಿದೆ. ಹತ್ತಾರು ಸೇತುವೆಗಳ ಕೆಳಭಾಗದಲ್ಲಿ ಮಣ್ಣು ಹಾಗೂ ಹೂಳು ತುಂಬಿದ ಕಾರಣ ಹತ್ತಾರು ಸೇತುವೆಗಳಲ್ಲಿ ೮ ಅಡಿ ವ್ಯಾಪ್ತಿಯ ವ್ಯಾಸದಲ್ಲಿ ಮಣ್ಣು ತುಂಬಿ ಕೇವಲ ಅರ್ಧ ಅಡಿಯಷ್ಟು ಮಾತ್ರ ಜಾಗ ಕಾಣಲಿದೆ. ಇದು ಈಗಿನ ವಾಸ್ತವತೆಯಾಗಿದೆ. ಕಳೆದವರ್ಷ ಹೇಮಾವತಿ ಜಲಾಶಯ ತುಂಬಿ ತುಳುಕಿ ಸಾಕಷ್ಟು ನೀರನ್ನು ಎಲ್ಲಾ ಭಾಗಕ್ಕೆ ಯತೇಚ್ಚವಾಗಿ ಹರಿದರೂ ಈ ಭಾಗದಲ್ಲಿ ಹರಿಯಬೇಕಿದ್ದ ನೀರು ಕಾಲುಭಾಗದಷ್ಟು ಸರಾಗವಾಗಿ ಹರಿಯದೇ ಸಾಸಲು,ಶೆಟ್ಟಿಕೆರೆ ಕೆರೆಗಳು ಮಾತ್ರ ಕಷ್ಟಪಟ್ಟು ತುಂಬಿತು. ಆದರೆ ಮುಂದಿನ ದಿನಗಳಲ್ಲಿ ಈಗಿನ ಸ್ಥಿತಿಯಲ್ಲಿ ಈ ಭಾಗದ ನಾಲೆಯಲ್ಲಿ ಎಷ್ಟೆ ಪ್ರಮಾಣದಲ್ಲಿ ನೀರು ಬಿಟ್ಟರೂ ಮಣ್ಣು ತುಂಬಿದ ನಾಲೆಯಿಂದ ನೀರು ಹರಿಯವುದೇ ಇಲ್ಲ. ಕ್ಷೇತ್ರದ ಶಾಸಕರು ದೂರದೃಷ್ಠಿಯಿಂದ ಈ ನಾಲೆಯ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿದರೆ ವಾಸ್ತವಾಂಶದ ಅರಿವಾಗಲಿದ್ದುಮ ತಕ್ಷಣ ಸಂಬAಧಿಸಿದ ಇಲಾಖೆಯಿಂದ ಸಮರೋಪಾದಿಯಲ್ಲಿ ಮಣ್ಣು ಎತ್ತುವ ಕೆಲಸಮಾಡಿಸಿದರೆ ಮುಂಬರುವ ದಿನಗಳಲ್ಲಿ ಈ ಭಾಗಕ್ಕೆ ಹರಿಯಬೇಕಾದ ನೀರು ಈ ನಾಲೆಯಿಂದ ಹತ್ತಾರು ಕೆರೆ ಕಟ್ಟೆಗಳನ್ನು ತುಂಬಿ ತಾಲ್ಲೂಕಿನ ಏಕೈಕ ಜಲಾಷಯವೆನಿಸಿದ ಬೋರನಕಣಿವೆಯವರೆಗೂ ಸಾಗಲಿದೆ ಎಂಬುದು ನೀರಾವರಿ ಹೋರಾಟಗಾರರ ಹಾಗೂ ಈ ಭಾಗದ ರೈತರ ಕಳಕಳಿಯಾಗಿದೆ.
ಪ್ರಗತಿಪರ ರೈತ ಯರೇಕಟ್ಟೆ ರಂಗಸ್ವಾಮಿ ಮಾತನಾಡಿ ಹೇಮಾವತಿ ನೀರು ಈ ಭಾಗಕ್ಕೆ ಹರಿದಾಗ ಸಾವಿರೆ ಅಡಿ ಕಂಡಿದ್ದ ಅಂತರ್ಜಲ ಉತ್ತಮಗೊಂದು ತೆರೆದಬಾವಿಗಳಲ್ಲಿ ನೀರು ಬಂದಿದೆ. ಆದರೆ ಈಗಿನ ನಾಲೆಯ ಸ್ಥಿತಿಯಿಂದ ಈ ಭಾಗಕ್ಕೆ ಬರುವವರ್ಷ ನೀರು ಹರಿಯದಿದ್ದರೆ ಸಾವಿರಾರು ರೈತರು ಮಕ್ಕಳಂತೆ ಬೆಳೆಸಿದ ಲಕ್ಷಾಂತರ ತೆಂಗು, ಅಡಿಕೆ ಮರಗಳು ಒಣಗುವ ಅಪಾಯವಿದೆ. ಮಳೆ ಆರಂಭಕ್ಕೂ ಮುನ್ನ ಶಾಸಕರು ಸಂಬAಧಿಸಿದ ಇಲಾಖೆಯ ಮೂಲಕ ತಕ್ಷಣ ನಾಲೆಯಲ್ಲಿನ ಹೂಳು ಎತ್ತುವಳಿ ಮಾಡಿಸಬೇಕಿದೆ ಈಬಗ್ಗೆ ಹೇಮಾವತಿ ನಾಲೆಯ ಹೋರಾಟಗಾರರ ಸಂಘಟನೆಯಿAದ ಈ ಸಮಸ್ಯೆಯ ನಿವಾರಣೆಗಾಗಿ ಶಾಸಕರನ್ನು ಸಂಪರ್ಕಿಸಿದ್ದೇವೆ ಎಂದರು.