ತುಮಕೂರು: ರಂಜಾನ್ ಹಬ್ಬದ ಪ್ರಯುಕ್ತ ನಗರದ ಸದಾಶಿವ ನಗರದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಲಾಹಿ ಸಿಕಂದರ್ ಅವರು ತಮ್ಮ ಸಿಕಂದರ್ ಫೌಂಡೇಶನ್‌ನಿAದ ಶುಕ್ರವಾರ ಸಾವಿರಾರು ಬಡ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದರು.
ಫುಡ್ ಕಿಟ್ ವಿತರಣೆ ಮಾಡಿ ಮಾತನಾಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಅವರು, ದೈವನು ಕುರಾನ್‌ನಲ್ಲಿ ಹೇಳಿರುವಂತೆ ಯಾರಲ್ಲಿ ವಿದ್ಯೆ ಇರುವುದೊ ಅವರು ಇಲ್ಲದವರಿಗೆ ವಿದ್ಯಾ ದಾನ ಮಾಡಬೇಕು, ಸಂಪತ್ರು ಇದ್ದವರು ಅದರಲ್ಲಿ ಸ್ವಲ್ಪ ಭಾಗ ಬಡವರಿಗೆ ದಾನ ಮಾಡಬೇಕು. ಅಧಿಕಾರಲ್ಲಿ ಇರುವವರ ಅಮಾಯಕರಿಗೆ ನ್ಯಾಯ ಒದಗಿಸಬೇಕು. ಇದೇ ರೀತಿ ರಂಜಾನ್ ಹಬ್ಬದಲ್ಲಿ ಬಡವರೂ ಸಂತೋಷದಿAದ ಹಬ್ಬ ಆಚರಣೆ ಮಾಡಬೇಕು ಎಂದು ಸಿಕಂದರ್ ಫೌಂಡೇಶನ್‌ನಿAದ ಆಹಾರಧಾನ್ಯ ವಿತರಿಸಿ ಸಹಾಯ ಮಾಡಿದ್ದಾರೆ ಎಂದರು.
ಪವಿತ್ರ ರಂಜಾನ್‌ನಲ್ಲಿ ಉಪವಾಸ ಮಾಡಿ, ಹಸಿವಿನ ಅನುಭವ ಪಡೆಯಬೇಕು. ಯಾರು ಹಸಿವಿ ನಿಂದ ಬಳಲುವವರೋ ಅವರಿಗೆ ಅನ್ನ ನೀಡಬೇಕು ಎಂಬುದು ರಂಜಾನ್ ಆಶಯ. ಮುಸಲ್ಮಾನ್ ಎಂದರೆ ಶರಣಾಗುವವನು ಎಂದ ರ್ಥ. ಇಸ್ಲಾಂ ಎಂದರೆ ಶಾಂತಿ, ದೇವರ ಆಜ್ಞೆಗೆ ಶರಣಾಗುವವನೇ ನಿಜವಾದ ಮುಸಲ್ಮಾನ್ ಎಂದು ಹೇಳಿದರು. ಇಲಾಹಿ ಸಿಕಂದರ್ ಅವರು, ಬಡವರೂ ರಂಜಾನ್ ಹಬ್ಬವನ್ನು ಸಂತೋಷದಿAದ ಆಚರಣೆ ಮಾಡಬೇಕು ಎಂದು ಸಾವಿರಾರು ಜನರಿಗೆ ಇಂದು ಫುಡ್ ಕಿಟ್ ವಿತರಣೆ ಮಾಡಿದ್ದಾಗಿ ಹೇಳಿದರು. ಮೌಲಾನಾ ಜಿಯಾ ಉರ್ ರಹಮಾನ್, ಸೈಯದ್ ಫಯಾಜ್, ಸಿಕಂದರ್ ಪಾಷಾ ಸಾದಿಕ್ ಭಾಗವಹಿಸಿದ್ದರು.
(Visited 1 times, 1 visits today)