ತುಮಕೂರು: ವೈಜ್ಞಾನಿಕ ಅನ್ವೇಷಣೆಗಳು ತಕ್ಷಣ ಯಶಸ್ಸನ್ನು ನೀಡುವುದಿಲ್ಲ. ವೈಫಲ್ಯ ಮತ್ತು ಪ್ರತಿಕೂಲತೆಗಳು ಪ್ರಯಾಣದ ಒಂದು ಭಾಗವಾಗಿರುತ್ತವೆ. ನಿಜವಾದ ಜೈವಿಕಾ ಣುಶಾಸ್ತçಜ್ಞನು ಸಹನಶೀಲತೆ, ಧೈರ್ಯ, ಮತ್ತು ನಿರಂತರ ಪರಿಶ್ರಮದಿಂದ ಯಶಸ್ಸಿನತ್ತ ಮುನ್ನಡೆಯಬೇಕು ಎಂದು ಹಿರಿಯ ವಿಜ್ಞಾನಿ ಡಾ. ಶಿವಾಜಿ ಜಾಧವ್ ತಿಳಿಸಿದರು.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸೂಕ್ಷö್ಮ ಜೀವಶಾಸ್ತç ವಿಭಾಗದಲ್ಲಿ ‘೨೧ನೇ ಶತಮಾನದ ಜೈವಿಕಾಣುಶಾಸ್ತç: ಹೊಸ ಆವಿಷ್ಕಾರಗಳು ಮತ್ತು ಅನ್ವಯಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಂಕೆಗಳಿಗಿAತ ಜ್ಞಾನ ಮಹತ್ವದ್ದು. ಅಂಕೆಗಳು ಪ್ರಾರಂಭಿಕ ಅವಕಾಶಗಳನ್ನು ನೀಡಬಹುದು. ಆದರೆ ದೀರ್ಘಕಾಲೀನ ಯಶಸ್ಸನ್ನು ನಿರ್ಧರಿಸುವುದು ಆಳವಾದ ಜ್ಞಾನ ಮತ್ತು ತಜ್ಞತೆ. ಜೈವಿಕಾಣುಶಾಸ್ತçದಲ್ಲಿ ಸೂಕ್ಷö್ಮಜೀವಿಗಳು, ರೋಗ ಗಳು, ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಆಳವಾದ ತಿಳುವಳಿಕೆ ಅನಿವಾರ್ಯ ಎಂದರು.
ನಿರಂತರ ಅಧ್ಯಯನ ಮತ್ತು ಕುತೂಹಲ ಅತ್ಯಗತ್ಯ. ಜೈವಿಕಾಣುಶಾಸ್ತçದ ಕ್ಷೇತ್ರ ನಿರಂತರ ಬೆಳವಣಿಗೆಯನ್ನು ಕಾಣುತ್ತಿದೆ. ಹೊಸ ಸಂಶೋ ಧನೆಗಳು ಮತ್ತು ಆವಿಷ್ಕಾರಗಳು ನಮ್ಮ ಜೀವನದ ಅರಿವನ್ನು ವಿಸ್ತರಿಸುತ್ತವೆ. ನಾವು ಹೆಚ್ಚು ತಿಳಿಯಲು, ಅಧ್ಯಯನ ಮಾಡಲು, ಕಾರ್ಯಾ ಗಾರಗಳಲ್ಲಿ ಪಾಲ್ಗೊಳ್ಳಲು, ಮತ್ತು ವೈಜ್ಞಾನಿಕ ಚರ್ಚೆಗಳಲ್ಲಿ ತೊಡಗಲು ಸದಾ ಸಿದ್ಧರಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಯೋಗಿಕ ಅನುಭವವು ಜೈವಿಕಾಣುಶಾ ಸ್ತçದಲ್ಲಿ ಅತ್ಯಗತ್ಯವಾಗಿದೆ. ತಾತ್ವ್ವಿಕ ಜ್ಞಾನ ಮಾತ್ರ ಸಾಕಾಗದು. ಪ್ರಯೋಗಾಲಯಗಳು, ಸಂಶೋಧನಾ ಸಂಸ್ಥೆಗಳು, ಮತ್ತು ಕೈಗಾರಿಕಾ ಅನ್ವಯಗಳಲ್ಲಿ ಅನುಭವ ಪಡೆಯುವುದು ಬಹಳ ಮುಖ್ಯ ಎಂದರು.
ಜೈವಿಕಾಣುಶಾಸ್ತçದಲ್ಲಿ ಆರ್ಥಿಕ ಬೆಳವಣಿಗೆ ಯೂ ಸಾಧ್ಯ. ವೃತ್ತಿ ಸಾಧನೆಯೊಂದಿಗೆ ಆ ರ್ಥಿಕ ಅಭಿವೃದ್ಧಿಯು ಸಹ ಸಾಧ್ಯ. ಔಷಧಿ ಉದ್ಯಮ, ಆರೋಗ್ಯ ಸೇವೆ, ಜೈವ ತಂತ್ರಜ್ಞಾನ ಕಂಪನಿಗಳು, ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಆಕರ್ಷಕ ವೇತನದೊಂದಿಗೆ ಉತ್ತಮ ಉದ್ಯೋ ಗಾವಕಾಶಗಳಿವೆ. ಯಶಸ್ಸಿನ ಹಿಂದೆ ಓಡಬೇಡಿ, ಶ್ರೇಷ್ಠತೆಯ ಹಿಂದೆ ಹೋಗಿ, ಯಶಸ್ಸು ನಿಮ್ಮ ಹಿಂದೆ ಬರುತ್ತದೆ ಎಂದರು.
ಪ್ರಾಧ್ಯಾಪಕರಾದ ಡಾ. ಎಸ್. ಶ್ರೀನಿವಾಸ, ಡಾ. ಶಾಲಿನಿ ಬಿ.ಆರ್., ಡಾ. ರಶ್ಮಿ ಹೊಸಮನಿ, ಡಾ. ಲಲಿತ, ಡಾ. ಶಬೀನಾ ಅಂಜುಮ್, ಉಪನ್ಯಾ ಸಕರು ಉಪಸ್ಥಿತರಿದ್ದರು.