ಕೊರಟಗೆರೆ: ಫೈನಾನ್ಸ್ನಲ್ಲಿ ಸಾಲ ಪಡೆದು ಜೀವನಕ್ಕಾಗಿ ನಿರ್ಮಿಸಿಕೊಂಡಿದ್ದ ಪೆಟ್ಟಿಗೆ ಅಂಗಡಿಗೆ ಕಿಡಿಗೇ ಡಿಗಳು ಬೆಂಕಿ ಇಟ್ಟ ಕಾರಣ ೬೦ಸಾವಿರಕ್ಕೂ ತಿನಸಿ ಪದಾರ್ಥಗಳು ಸುಟ್ಟು ಭಸ್ಮವಾಗಿರುವ ಯುಗಾದಿ ಹಬ್ಬದ ರಾತ್ರಿ ಘಟನೆ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬ ಳಿ ಗೌರಗಾನಹಳ್ಳಿ ಕ್ರಾಸ್ ಬಳಿ ಕಳೆದ ೧.೫ ವರ್ಷಗಳಿಂದ ಗೌರಗನಹಳ್ಳಿ ಗ್ರಾಮದ ರಂಗನಾಥಯ್ಯ ಕುಟುಂಬ ಪೆಟ್ಟಿಗೆ ಅಂಗಡಿ ನಿರ್ಮಿಸಿಕೊಳ್ಳಲಾಗಿತ್ತು. ಜೀವನೋಪಾಯಕ್ಕೆ ಇದ್ದ ಪೆಟ್ಟಿಗೆ ಅಂಗಡಿ ಕಳೆದುಕೊಂಡು ಬಡ ಕುಟುಂಬ ಬೀದಿಪಾಲಗಿರುವ ಘಟನೆ ತಡರಾತ್ರಿ ನಡೆದಿದೆ.
ಅಂಗಡಿಯಲ್ಲಿದ್ದ ೬೦ಸಾವಿರ ಬೆಲೆ ಬಾಳುವ ತಿನಸಿ ಪದಾರ್ಥಗಳು ಸುಟ್ಟು ಕರಕಲಾಗಿದ್ದು, ಅಂಗಡಿಗೆ ಬಿದ್ದ ಬೆಂಕಿಯಿAದ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ರವರ ಗಮನಕ್ಕೆ ತಂದು ನೆರವು ನೀಡುವುದಾಗಿ ಹೂಲೀಕುಂಟೆ ಗ್ರಾ.ಪಂ ಸದಸ್ಯ ಕೇಶವಮೂರ್ತಿ ಭರವಸೆ ನೀಡಿದ್ದಾರೆ. ಸಾರ್ವಜನಿಕರಿಂದ ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಈ ವೇಳೆ ಪೆಟ್ಟಿಗೆ ಅಂಗಡಿ ಮಾಲೀಕ ರಂಗನಾ ಥಯ್ಯ ಮಾತನಾಡಿ, ಕಳೆದ ೧.೫ವರ್ಷಗಳ ಹಿಂದೆ ಹಬ್ಬಕ್ಕೆಂದು ಫೈನಾನ್ಸ್ನಲ್ಲಿ ೬೦ಸಾವಿರ ಸಾಲ ಪಡೆದು ಪಟ್ಟಿಗೆ ಅಂಗಡಿ ಹಾಕಿಕೊಳ್ಳಲಾಗಿತ್ತು. ಜೀವನೋಪಾಯಕ್ಕೆ ಇದ್ದ ಆಧಾರವು ಸಹ ಭಾನುವಾರ ರಾತ್ರಿ ೧:೩೦ರ ಸುಮಾರಿಗೆ ಸುಟ್ಟು ಬೂದಿಯಾಗಿದೆ. ಇದರಿಂದ ನಮ್ಮ ಕುಟುಂಬದ ಪರಿಸ್ಥಿತಿಯು ಸಹ ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂಬAಧಪಟ್ಟ ಇಲಾಖೆ ಅಧಿಕಾರಿಗಳ ವರ್ಗ ಪರಿಹಾರದೊಂದಿಗೆ ನೆರವು ನೀಡಬೇಕೆಂದು ನಮ್ಮ ಕುಟುಂಬ ಮನವಿ ಮಾಡಿಕೊಳ್ಳುತ್ತಿದೆ ಎಂದರು.
(Visited 1 times, 1 visits today)