ತುಮಕೂರು: ಪ್ರತಿಯೊಬ್ಬ ನಾಗರಿಕನೂ ತೆರಿಗೆ ಕಾನೂನಿನ ಎಲ್ಲ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅನುಸರಿಸಬೇಕು ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ವಕೀಲರಾದ ಕೆ. ಆರ್. ಪ್ರದೀಪ್ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ತೆರಿಗೆ ನ್ಯಾಯಶಾಸ್ತç ಮತ್ತು ನೇರ ತೆರಿಗೆ ಪದ್ಧತಿಗಳು’ ಕುರಿತಯ ವಿಶೇಷ ಉಪನ್ಯಾಸ ನೀಡಿದರು.
ಪಾವತಿಸುವ ಸಾಮರ್ಥ್ಯ ಮತ್ತು ಪಾವತಿಸಲು ಇಚ್ಛೆ ಉತ್ತಮ ತೆರಿಗೆ ಕಾನೂನನ್ನು ಹೊಂದಲು ಎರಡು ತತ್ವಗಳಾಗಿವೆ ಎಂದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿರುವ ಪ್ರತೀಕ್ಷಣವನ್ನೂ ಕಲಿಕೆಗಾಗಿ ಬಳಸಿಕೊಳ್ಳಬೇಕು. ಕಲಿಕೆಗೆ ಯಾವುದೇ ಸಮಯದ ಮಿತಿ ಇರಬಾರದು. ಹೆಚ್ಚಿನದನ್ನು ತಮ್ಮದಾಗಿಸಿಕೊಳ್ಳುವ ಕುತೂಹಲ ಸದಾ ಜಾಗೃತವಾಗಿರಬೇಕು ಎಂದರು. ಕುಲಸಚಿವೆ ನಾಹಿದಾ ಜûಮ್ ಜûಮ್, ಮೌಲ್ಯಮಾಪನ ಕುಲಸಚಿವ ಪ್ರೊ. ಕೆ. ಪ್ರಸನ್ನ ಕುಮಾರ್, ವಾಣಿಜ್ಯಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಶೇಖರ್, ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಡಾ.ಎ. ಮೋಹನ್ ರಾಮ್, ಪ್ರೊ. ಪಿ. ಪರಮಶಿವಯ್ಯ, ಡಾ. ಬಿ. ಕೆ. ಸುರೇಶ್ ಉಪಸ್ಥಿತರಿದ್ದರು.
(Visited 1 times, 1 visits today)