ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರರೂ. ಅವ್ಯವಹಾರಗಳ ಸರಮಾಲೆಯೇ ನಡೆದಿದೆ ಎಂದು ತುಮಕೂರು ಹಾಲು ಒಕ್ಕೂಟ ಹಾಗೂ ಸಹಕಾರ ಸಂಘದ ನಿರ್ದೇಶಕ ಬಿ.ಎನ್. ಶಿವಪ್ರಕಾಶ್ ದಾಖಲೆಗಳೊಂದಿಗೆ ಆರೋಪಿಸಿದರು.
ಪಟ್ಟಣದ ನಂದಿನಿ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ ಕಸಬ ಹೋಬಳಿ ವ್ಯಾಪ್ತಿಗೆ ಒಳಪಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೧೯೭೭ಕ್ಕೂ ಮುನ್ನ ಹೊನ್ನೇಬಾಗಿ ಹಾಗೂ ಮೇಲನಹಳ್ಳಿಗಳಲ್ಲಿ ಕಾರ್ಯಾನಿರ್ವಹಿಸಿತ್ತು. ಶೈಶಾವಸ್ತೆಯಲ್ಲಿದ್ದ ಸಂಘವನ್ನು ಬೆಳೆಸುವ ಉದ್ದೇಶದಿಂದ ೧೯೭೭ ರಲ್ಲಿ ಪಟ್ಟಣದಲ್ಲಿ ನೆಲೆಗೊಳಿಸಲಾಯಿತು. ಇದರಿಂದ ಹೆಚ್ಚು ಶೇರುದಾರಾಗಿ, ವಹಿವಾಟು ಬೆಳೆಯಿತು. ಅಂದಿನ ಕಾರ್ಯದರ್ಶಿಯಾಗಿದ್ದ ಜಗಿದೀಶ್ ಒಡೆಯರ್‌ರವರ ಬದ್ದತೆಯಲ್ಲಿ ಸ್ವಂತಕಟ್ಟಡಹೊAದುವ ಮೂಲಕ ಪ್ರತಿದಿನ ಲಕ್ಷಾಂತರರೂ. ವಹಿವಾಟು ನಡೆಸುವ ಸಂಘವಾಗಿ ಪರಿವರ್ತನೆಯಾಗಿತ್ತು. ಪ್ರಸ್ತುತ ೪೪೫೯ ಮಂದಿ ಶೇರುದಾರರಿರುವ ಸಂಘದಲ್ಲಿ ಕಳೆದ ಹತ್ತುವರ್ಷದಿಂದ ಹೊಸದಾಗಿ ಬಂದ ಆಡಳಿತ ಮಂಡಳಿಯವರ ಸ್ವೇಚ್ಚಾಚಾರದ ನಡಿಗೆಯಿಂದ ಕಳೆದ ೫ವರ್ಷದಲ್ಲಿ ಹಲವಾರು ಹಗರಣಗಳು ನಡೆದು ಲಕ್ಷಾಂತರೂ ಅವ್ಯವಹಾರವಾಗಿದೆ ಎಂದು ದಾಖಲೆಗಳನ್ನು ಪ್ರದರ್ಶಿಸಿ ಆರೋಪಿಸಿದರು. ಸಂಘದಲ್ಲಿ ಪ್ರಭಾರ ಸಿಇಓ ಆಗಿದ್ದ ಕೆ.ಸಿ. ಯೋಗೀಶ್ ತನ್ನ ಹೆಸರಿನಲ್ಲಿ ೨ ಉಳಿತಾಯ ಖಾತೆ ಮಾಡಿಕೊಂಡು ಗ್ರಾಹಕರ ಹಾಗೂ ಸಂಘದ ಸುಮಾರು ೬೦ರಿಂದ ೭೦ಲಕ್ಷರೂ.ಗಳನ್ನು ಹೊಂದಾಣಿಕೆ ನೆಪದಲ್ಲಿ ತನ್ನಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು, ಇದನ್ನು ಪ್ರಶ್ನಿಸಿದಾಗ ಕೇವಲ ೧೨,೬೩,೭೦೦ರೂ.ಗಳನ್ನು ಸಂಘಕ್ಕೆ ಜಮಾ ಮಾಡದೆ ಅವರ ಹೆಸರಿನ ಅಮಾನತ್ತು ಖಾತೆಯಲ್ಲಿರಿಸಿದ್ದಾರೆ. ಸಂಘದ ಗುಮಾಸ್ತ ಸಿದ್ದರಾಜು ಹೆಸರಿನಲ್ಲಿ ಸಿಇಓರವರು ಅವರಿಗೆ ವಂಚಿಸಿ ರೂ.೬ಲಕ್ಷ ವೇತನಸಾಲ ಖರ್ಚಾಕಿದ್ದಾರೆ. ಎಂ.ಸಿದ್ದರಾಜುರವರು ನ್ಯಾಯಕ್ಕಾಗಿ ಅಧ್ಕಕ್ಷರಿಗೆ ಮನವಿ ಕೊಟ್ಟರೂ ಖ್ಯಾರೆಎಂದಿಲ್ಲ. ಆಡಳಿತ ಮಂಡಳಿ ಗಮನಕ್ಕೆ ತಾರದೆ ಲಕ್ಷಾಂತರರೂ. ಸಾಲ ನೀಡಿದ್ದಾರೆ, ನಿಯಮಗಳನ್ನು ಗಾಳಿಗೆತೂರಿ ಪಿಗ್ಮಿ ಆರಂಭಿಸಿದ ದಿನದಿಂದಲೇ ವ್ಯಕ್ತಿಗಳಿಗೆ ಲಕ್ಷಗಟ್ಟಲೆ ಸಾಲ ನೀಡಿದ್ದಾರೆ, ಗ್ರಾಹಕರಿಗೆ ಒಡವೆಸಾಲ ನೀಡಿದ್ದು, ಅವರಿಂದ ವಿಮಾಮೊತ್ತವನ್ನು ಪಡೆದಿದ್ದರೂ. ವಿಮೆ ಪಾವತಿಸಿಲ್ಲ. ಗ್ರಾಹಕರ ಚಿನ್ನ ಕಳುವಾದರೆ ಏನುಗತಿ ಎಂದು ಪ್ರಶ್ನಿಸಿದರು. ನಿರ್ದೇಶಕ ಎಂ.ಬಿ. ದಿನೇಶ್ ಮಾತನಾಡಿ ಹಲವಾರು ರೈತರಿಗೆ ಕೆಸಿಸಿ ಸಾಲ ಮಂಜೂರಾಗಿದ್ದು, ಅವರಿಗೆ ಸಾಲ ನೀಡಿಲ್ಲ, ಆದರೆ ಸಾಲ ನೀಡದಿದ್ದರೂ ಹಲವು ರೈತರಿಗೆ ಸಾಲ ಮರುಪಾವತಿಯ ನೋಟಿಸ್ ನೀಡಲಾಗಿದೆ. ಸಂಘದಿAದ ಹಾಗೂ ಠೇವಣಿಹಣದಿಂದ ೧೫ ಕೋಟಿರೂ. ಸಾಲ ನೀಡಿದ್ದು, ೮ಕೋಟಿರೂ. ಅಧಿಕ ಸಾಲ ಈವರೆಗೆ ಸುಸ್ತಿಯಾಗಿದೆ. ರೈತರಿಗೆ ಸರಿಯಾದ ಮಾಹಿತಿ ನೀಡದೆ ಜಿಲ್ಲಾ ಬ್ಯಾಂಕಿನಿAದ ೫ಕೋಟಿಗೂ ಅಧಿಕ ಕೆಸಿಸಿ ಸಾಲ ನೀಡಿದ್ದು, ರೂ.೩೦ಲಕ್ಷಕ್ಕೂ ಹೆಚ್ಚು ಸುಸ್ತಿಯಾಗಿದ್ದು ರೈತರು ವಿನಾಕಾರಣ ಶೇ.೧೦ ರಂತೆ ಬಡ್ಡಿಕಟ್ಟುವಂತೆ ಮಾಡಿದ್ದಾರೆ. ಹಾಗೂ ನೂರಾರು ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಸಂಘದ ನಿಯಮವನ್ನು ಉಲ್ಲಂಘಸಿ ಚಿತ್ರದುರ್ಗ ಜಿಲ್ಲೆಯ ಒಬ್ಬರಿಗೆ ೭ಲಕ್ಷರೂ. ಸಾಲ ನೀಡಿದ್ದರೆ, ಷೇರುದಾರರಲ್ಲದ ಸಂಘದ ವ್ಯಾಪ್ತಿಯೊಳಗಿಲ್ಲದ ಮಹಿಳೆಗೆ ರೂ.೧೦ಲಕ್ಷ ಸಾಲ ಮಂಜೂರು ಮಾಡಿದ್ದಾರೆ. ಆಕೆಯು ಇದುವರೆಗೂ ಅಸಲು ಹಾಗೂ ಬಡ್ಡಿಯನ್ನೇ ತೀರಿಸಿಲ್ಲವೆಂದು ಆರೋಪಿಸಿದರು. ಈ ಎಲ್ಲಾ ಹಗರಣಗಳನ್ನು ದಾಖಲೆ ನೀಡಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಲಾಗಿ, ಅಲ್ಲಿಂದ ತಾಲ್ಲೂಕು ಅಧಿಕಾರಿಗೆ ವರ್ಗಾಯಿಸಿ ಕೈತೊಳೆದುಕೊಂಡಿದ್ದಾರೆ. ಲೋಕಾಯುಕ್ತರಿಗೆ ದೂರು ನೀಡಿದ್ದು, ಅವರಿಗೆ ನೀಡಬೇಕಾದ ಅವ್ಯವಹಾರಗಳ ದಾಖಲೆಗಳನ್ನು ಸಂಘದಿAದ ಪಡೆಯಲು ಲಿಖಿತವಾಗಿ ಮಾಹಿತಿ ಕೇಳಿದಾಗ ಮಾಹಿತಿ ನೀಡದೆ, ತಮ್ಮ ಅರ್ಜಿಯನ್ನು ಆಡಳಿತ ಮಂಡಳಿ ಸಭೆಗೆ ತಂದು, ಅಲ್ಲಿನ ತೀರ್ಮಾನದಂತೆ ಮಾಹಿತಿ ನೀಡಲಾಗುವುದೆಂದು ಸಿಇಓ ಹಿಂಬರಹ ನೀಡುವ ಮೂಲಕ ತಮ್ಮ ಹೆಗಲನ್ನು ತಾವೇ ಸವರಿಕೊಂಡಿದ್ದಾರೆ ಎಂದರು. ಪ್ರಸ್ತತ ಅಧ್ಯಕ್ಷರ ಚಿತಾವಣೆಯಿಂದ ಈ ಅವ್ಯಹಾರ ನಡೆದಿದೆ ಎಂದರು. ಇಲ್ಲಿ ಬಗೆದಷ್ಟೂ ಅವ್ಯವಾಹರಗಳು ಬೆಳಕಿಗೆ ಬರುತ್ತಲೇ ಇದ್ದು ಇವೆಲ್ಲವನ್ನು ಸರಿಪಡಿಸಲು ಹೊಸ ಪ್ರಾಮಾಣಿಕ ಅಡಳಿತ ಮಂಡಳಿ ಅಧಿಕಾರಕ್ಕೆ ಬರಬೇಕಿದೆ. ಏ.೬ ರಂದು ಆಡಳಿತ ಮಂಡಳಿ ಚುನಾವಣೆ ನಡೆಯಲಿದ್ದು, ಮಾಜಿ ಪುರಸಭಾಧ್ಯಕ್ಷ ಸಿ.ಎಂ.ರAಗಸ್ವಾಮಿಯವರ ಮುಂದಾಳತ್ವದಲ್ಲಿ ಹೊಸ ತಂಡದೊAದಿಗೆ ನಾವು ಚುನಾವಣೆಯನ್ನು ಎದುರಿಸಲಿದ್ದು, ಸಂಘದ ಉಳಿವಿಗೆ ಹಾಗೂ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಿ ಮತದಾರರ ಮುಂದೆ ಹೋಗುತ್ತಿದ್ದೇವೆ. ಪ್ರತಿಯೊಬ್ಬರಿಗೂ ಈ ಅವ್ಯವಹಾರದ ಮಾಹಿತಿಯನ್ನು ನೀಡಿ ಮತಕೇಳುತ್ತಿದ್ದೇವೆ. ನಮ್ಮ ತಂಡ ಪಕ್ಷಾತೀತ, ಜಾತ್ಯಾತೀತ ಹಾಗೂ ಪ್ರಾಂತ್ಯಾತೀತವಾಗಿರುವ ತಂಡವಾಗಿದೆ ಎಂದರು. ಈ ಸಂದರ್ಭದಲ್ಲಿ ಜಿ. ಶ್ರೀನಿವಾಸ್, ಸಿ.ಎನ್. ಶಾಂತಕುಮಾರ್, ಸಿ.ಜಿ. ಸೋಮಶೇಖರ್, ಕೆ.ಎಸ್.ನಿರಂಜನ್, ಶ್ರೀಧರ್, ಡಿ.ಎನ್. ಭರತ್‌ಪೂಜಾರ್, ಸಿ.ಎಸ್. ಸುಗಂದರಾಜು, ಮುಂತಾದವರಿದ್ದರು.
ಚಿತ್ರ:೩೦ಸಿಎನ್‌ಎಚ್೧ಇಪಿ. ಶೀರ್ಷಿಕೆ: ಚಿಕ್ಕನಾಯಕನಹಳ್ಳಿ ಪಟ್ಟಣದ ನಂದಿನಿ ಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೆಶಕರು ಪತ್ರಿಕಾ ಗೋಷ್ಠಿ ನಡೆಸಿದರು.
(Visited 1 times, 1 visits today)