ತುಮಕೂರು: ಮಹಮದ್ ಫೈಗಂಬರ್ ಅವರು ಕ್ರಿ.ಶ.ಆರನೇ ಶತಮಾನದಲ್ಲಿ ಸಾರಿದ ಶಾಂತಿ, ಪ್ರೀತಿಯ ಸಂದೇಶ,ಇAದಿಗೂ ಪ್ರಸ್ತುತವಾಗಿದ್ದು,ಅದನ್ನು ಇಡೀ ವಿಶ್ವದ ಎಲ್ಲಾ ಮುಸ್ಲಿಂ ಭಾಂಧವರು ಪಾಲಿಸುತ್ತಾರೆ, ಪಾಲಿಸೋಣ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಪಾದಿಸಿದ್ದಾರೆ.
ನಗರದ ಕುಣಿಗಲ್ ರಸ್ತೆಯ ಗಾಂಧಿನಗರದ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಪವಿತ್ರ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಮನುಷ್ಯರ ಎಲ್ಲ ಕಷ್ಟಗಳು ದೂರವಾಗಿ, ಎಲ್ಲೆಡೆಯೂ ಶಾಂತಿ ನೆಲೆಸುವಂತಾಗಲಿ ಎಂದರು.
ಈ ಬಾರಿ ಯುಗಾದಿ ಮತ್ತು ರಂಜಾನ್ ಹಬ್ಬ ಒಟ್ಟಿಗೆ ಬಂದಿರುವುದು ಒಂದು ಶುಭ ಸಂಕೇತ. ನಾಡಿನ ಎಲ್ಲಾ ಸಮಸ್ತ ಜನರು ಸಹ ಸ್ನೇಹ, ಪ್ರೀತಿ, ಸಹೋದರತ್ವದಿಂದ ಬಾಳಲಿ ಎಂಬAತೆ ದೇವರೇ ನಮನ್ನು ಹರಸಿ, ಹಾರೈಸಿದೆ.ಅದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಮುನ್ನೆಡೆದರೆ ನಾಡಿನಲ್ಲಿ ಎಲ್ಲವೂ ಸುಭೀಕ್ಷವಾಗಿರುತ್ತದೆ ಎಂದು ಸಚಿವರು,ನಾವೆಲ್ಲರೂ ಅಣ್ಣ, ತಮ್ಮಂದಿರAತೆ ಬಾಳಿದರೆ ಅದಕ್ಕಿಂತ ದೊಡ್ಡ ಅಶಯ ಮತ್ತೊಂದಿಲ್ಲ ಎಂದು ಡಾ.ಜಿ.ಪರಮೇಶ್ವರ್ ನುಡಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ,ರಂಜಾನ ಮಾಸ ಮುಸ್ಲಿಂರಿಗೆ ಪವಿತ್ರವಾದ ತಿಂಗಳು. ಎಲ್ಲರನ್ನು ಪರಸ್ವರ ಪ್ರೀತಿ,ಸಹೋದರತ್ವದಿಂದ ನಡುವ ಹಬ್ಬವಾಗಿದೆ.ನಮ್ಮ ನಡುವಿನ ದ್ವೇಷ,ಅಸೂಯೆ, ಅಹಂಕಾರಗಳನ್ನು ಮರೆತು ನಾವೆಲ್ಲರೂ ಪರಸ್ವರ ಅಣ್ಣ, ತಮ್ಮಂದಿರAತೆ ಬದುಕಲು ಇಲ್ಲಿ ಅವಕಾಶವಿದೆ.ಜಗದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ, ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದೇವೆ.ರಂಜಾನ್ ಮಾಸದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ,ಜಿಲ್ಲಾ ಪೊಲೀಸ್ ಇಲಾಖೆಯವರು ಸಹಕಾರ ನೀಡಿದ್ದಾರೆ. ಹಾಗಾಗಿ ನಾಡಿನ ಎಲ್ಲ ಜನರಿಗೂ ರಂಜಾನ್ ಶುಭಾಷಯ ಕೋರುವುದಾಗಿ ತಿಳಿಸಿದರು.
ಇದೇ ಇದ್ ಶುಭಾಷಯ ಕೋರಲು ಆಗಮಿಸಿದ ಗಣ್ಯರಿಗೆ ಶಾಲು ಹೊದಿಸಿ, ಹೂ ಗುಚ್ಚ ನೀಡಿ ಇಕ್ಬಾಲ್ ಅಹಮದ್ ಮತ್ತು ಇತರೆ ಗಣ್ಯರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾಪಂಚಾಯಿತಿ ಸಿಇಓ ಜಿ.ಪ್ರಭು, ಎಸ್.ಪಿ ಅಶೋಕ್ ಕೆ.ವೆಂಕಟ್, ಹಾಗೂ ನಗರಪಾಲಿಕೆ ಆಯುಕ್ತರಾದ ಆಶ್ವೀಜ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ಎಸ್.ಷಪಿ ಅಹಮದ್, ಅಸ್ಲಾಂ ಪಾಷ,ನಯಾಜ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮುರುಳೀಧರ ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(Visited 1 times, 1 visits today)