ತುಮಕೂರು: ಆಸ್ಪತ್ರೆಗಳಲ್ಲಿ ರೋಗಿಗಳ ಆರೋಗ್ಯ ಸೇವೆಯು ಸೇವಾಮನೋಭಾವವುಳ್ಳ ಕೆಲಸ. ಸೇವೆಯನ್ನು ಆತ್ಮಸಂತೃಪ್ತಿಯಿAದ ನಿಭಾಯಿಸಬೇಕು. ದಾದಿ ಯರು ರೋಗಿಯನ್ನು ತಾಯಿ ಮನಸ್ಸಿನಿಂದ ನೋಡಿ ಸೇವೆಯನ್ನು ನೀಡಬೇಕು ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಕನ್ನಿಕಾ ಪರಮೇಶ್ವರಿ ಅವರು ಕರೆ ನೀಡಿದರು.
ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ನರ್ಸಿಂಗ್ ಕಾಲೇಜು ಮತ್ತು ನೆಲಮಂ ಗಲದ ಸಮೀಪದ ಟಿ-ಬೇಗೂರಿನಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್‌ಆಫ್ ನರ್ಸಿಂಗ್ ಸೈನ್ಸ್ಆಂಡ್‌ರಿಸರ್ಚ್ ಸೆಂಟರ್ ಸಹಯೋಗದಲ್ಲಿ ಮಂಗಳವಾರ ಶಿಕ್ಷಣ ಭೀಷ್ಮ ಡಾ.ಎಚ್.ಎಂ. ಗಂಗಾಧರಯ್ಯ ಸಭಾಂಗಣದಲ್ಲಿ ನಡೆದ ಮೊದಲನೆ ವರ್ಷದ ಬಿ.ಎಸ್ಸಿ ಮತ್ತು ಜಿಎನ್‌ಎಮ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಹಾಗೂ ಪದವಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಗಳಾಗಿ ಕೆಲಸ ಮಾಡುವ ಗುಣಗಳನ್ನು ದಾದಿಯರು ಬೆಳೆಸಿಕೊಳ್ಳಬೇಕು. ರೋಗಿ ಸಕಾರಾತ್ಮಕ ಪ್ರತಿಕ್ರಿ ಯೆ ಅರಿತು ಅವಶ್ಯಕತೆ ತಕ್ಕ ಹಾಗೇ ಕೆಲಸ ಮಾಡಿ. ಆಸ್ಪತ್ರೆ ನಮ್ಮ ಮನೆ ಎಂದು ಭಾವಿಸಿ ರೋಗಿಯನ್ನು ತಮ್ಮ ಸಂಬAಧಿಕರೆAದು ಕಾಣಿ ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕನ್ನಿಕಾ ಪರಮೇಶ್ವರಿ ಕಿವಿ ಮಾತು ಹೇಳಿದರು.
ಶೈಕ್ಷಣಿಕವಾಗಿ ಕಲಿಯುವುದು ಬೇರೆ. ಸೇವೆ ಮನೋಭಾವವೇ ಬೇರೆ ಇದನ್ನು ಅರಿತು ವೃತ್ತಿ ಗೌರವ-ಘನೆತೆಯನ್ನು ಕಾಪಾಡಿ. ಸೇವೆ ಆತ್ಮ ತೃಪ್ತಿ ತರಬೇಕು. ಆರೋಗ್ಯ ಕ್ಷೇತ್ರದಲ್ಲಿ ಬಹುಮುಖ್ಯ ಪಾತ್ರಗಳಲ್ಲಿ ಕಂಡು ಬರುವವರು ನರ್ಸ್ಗಳು ವ್ಯಕ್ತಿತ್ವವನ್ನು ವೃತ್ತಿ ಗುರ್ತಿಸುತ್ತದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಬ್ಯಾಪ್ಟಿಸ್ಟ್ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲರಾದ ಡಾ.ಲೀನಾ ಸ್ವಾಮಿ ಮಾತನಾಡಿ, ದಾದಿಯರ ಪಾತ್ರ ಬಹು ಮುಖ್ಯ.ಕೆಲಸ ತಾಳ್ಮೆ ಸಹನೆ ಹಾಗೂ ತಾಯಿ ಹೃದಯದಿಂದ ಕೆಲಸ ಮಾಡುವಂತಿರಬೇಕು. ಯಾವುದೇ ಹಮ್ಮು-ಬಿಮ್ಮ ಇಲ್ಲದೇ ಚಿಕಿತ್ಸೆ ನೀಡಬೇಕು ಎಂದರು.
ಸಾಹೇ ಉಪಕುಲಪತಿಗಳು ಡಾ.ಕೆ.ಬಿ. ಲಿಂಗೇಗೌಡ, ಕುಲಸಚಿವರಾದ ಡಾ.ಅಶೋಕ್ ಮೆಹ್ತಾ ,ಕುಲಾಧಿಪತಿಗಳ ಸಲಹೆಗಾರರರಾದ ಡಾ.ವಿವೇಕ್ ವೀರಯ್ಯ, ಕಾಲೇಜಿನ ವೈದ್ಯಕೀ ಯ ಅಧೀಕ್ಷಕರಾದ ಡಾ. ವೆಂಕಟೇಶ್, ಶ್ರೀ ಸಿದ್ಧಾರ್ಥ ನರ್ಸಿಂಗ್ ಕಾಲೇಜು ಜಿ. ಸುಜಾತ, ಟಿ-ಬೇಗೂರು ಕಾಲೇಜಿನ ಎನ್. ವಿ. ಚಂದ್ರಶೇಖರ್, ಉಭಯ ಕಾಲೇಜುಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(Visited 1 times, 1 visits today)