ತುಮಕೂರು: ರಾಜ್ಯಾದ್ಯಂತ ವಿಪ್ರ ಸಮುದಾಯ ಅನುಭವಿಸು ತ್ತಿರುವ ಹಲವು ರೀತಿಯ ಸಂಕಷ್ಟಗಳ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದರ ಜೊತೆಗೆ ಅವರ ಧ್ವನಿಯಾಗಿ ಕಾರ್ಯನಿರ್ವಹಿಸುವೆನೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ರಘು ನಾಥ್ ಭರವಸೆ ನೀಡಿದರು.
ಅವರು ತುಮಕೂರಿನ ವಿಪ್ರಭವನದಲ್ಲಿ ಏರ್ಪ ಟ್ಟಿದ್ದ ಸಮಾಲೋಚನಾ ಸಭೆಯಲ್ಲಿ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಆರ್ಥಿಕವಾಗಿ ದುರ್ಬಲರಾದ ವಿಪ್ರರಿಗೆ, ಮಹಿಳೆಯರಿಗೆ, ಯುವಕರಿಗೆ ಎಲ್ಲ ರೀತಿಯ ಸಹಾಯಹಸ್ತ ನೀಡುವುದು, ರಾಜ್ಯಾದ್ಯಂತ ಪ್ರವಾಸ ಮಾಡಿ, ವಿಪ್ರ ಸಮುದಾಯದ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದು, ಅದಕ್ಕನುಗುಣವಾಗಿ ಕಲ್ಯಾಣ ಯೋಜನೆಗಳನ್ನು ರೂಪಿಸುವುದು, ಬ್ರಾಹ್ಮಣ ಮಹಾಸಭೆಗೆ ಶಾಶ್ವತ ಆದಾಯ ಬರುವಂತೆ ಕ್ರಿಯಾ ಯೋಜನೆಯನ್ನು ರೂಪಿಸಿ, ಕಾರ್ಯಗತಗೊಳಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೌಲಭ್ಯಗಳು ಬ್ರಾಹ್ಮಣರಿಗೂ ಸಿಗುವಂತೆ ಪ್ರಾಮಾಣಿಕ ಪ್ರಯತ್ನ, ಮಹಿಳೆಯರು ಮತ್ತು ಯುವಕರಿಗೆ ಬ್ರಾಹ್ಮಣ ಮಹಾಸಭೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ, ಸಮುದಾಯದ ಹಿರಿಯ ರ ವಿಶ್ವಾಸದೊಂದಿಗೆ ಎಲ್ಲರೊಂದಿಗೆ ಸಮಾಲೋ ಚಿಸಿ ಕಾರ್ಯೋನ್ಮುಖನಾಗುತ್ತೇನೆ – ಹೀಗೆ ಅನೇಕ ಆಲೋಚನೆ-ಯೋಜನೆಗಳನ್ನು ರೂಪಿ ಸಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರಲು ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಬಹುಮತದಿಂದ ಚುನಾಯಿಸುವಂತೆ ವಿಪ್ರ ಸಮುದಾಯದಲ್ಲಿ ರಘುನಾಥ್ ಮನವಿ ಮಾಡಿದರು.
ಈಗಾಗಲೇ ವಿಶ್ವ ವಿಪ್ರತ್ರಯೀ ಪರಿಷತ್ ಮೂಲಕ ಬ್ರಾಹ್ಮಣ ಉಪ ಪಂಗಡಗಳ ಸಹಯೋ ಗದೊಂದಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ನಿರಂತರವಾಗಿ ಕಾರ್ಯೋನ್ಮುಖವಾಗಿದ್ದೇನೆ. ಕರೋನಾ ಸಂದರ್ಭದಲ್ಲಿ ನೂರಾರು ಜನರ ಸಂಕಷ್ಟದಲ್ಲಿ ಅವರ ಜೊತೆಗಿದ್ದು, ಅವರಿಗೆ ಅಗತ್ಯ ನೆರವು ದೊರಕುವಂತೆ ಶ್ರಮಿಸಿದ್ದೇನೆ. ಅಶಕ್ತ ವಿಪ್ರರಿಗೆ ಔಷಧ ಹಾಗೂ ಚಿಕಿತ್ಸೆಗೆ ಸಹಾಯಹಸ್ತ, ಅಂಚೆ ವಿಮಾ ಯೋಜನೆ ಸೌಲಭ್ಯ ಕಲ್ಪಿಸಿರುವುದು, ಸಮಾನ ಮನಸ್ಕರೊಂದಿಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ ೧೦ ಸಾವಿರ ರೂ.ಗಳಂತೆ ವಿದ್ಯಾರ್ಥಿವೇತನ ನೀಡಿರುವುದು, ಪುರೋಹಿತರ ಪರಿಷತ್‌ಗೆ ಧನ ಸಹಾಯ ಸೇರಿದಂತೆ ಅಶಕ್ತ ಬ್ರಾಹ್ಮಣ ಕುಟುಂಬಗಳಿಗೆ ಹಲವಾರು ರೀತಿಯಲ್ಲಿ ವೈಯಕ್ತಿಕವಾಗಿ ಸಹಾಯ ಮಾಡಿದ್ದೇನೆ ಎಂದು ರಘುನಾಥ್ ಹೇಳಿದರು.
ಸಮಾರಂಭದಲ್ಲಿ ಬೆಂಗಳೂರಿನ ವಿಪ್ರ ಮುಖಂಡರಾದ ಉಮೇಶ್‌ಶಾಸ್ತಿç, ಸುದರ್ಶನ್, ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಸುರೇಶ್‌ಹೊಳ್ಳ, ನಿರ್ದೇಶಕರುಗಳಾದ ಡಿ.ಎಸ್.ಹರೀಶ್, ಚಂದ್ರ ಶೇಖರ್, ನರೇಶ್‌ಮೂರ್ತಿ, ಕೆ.ಹಿರಿಯಣ್ಣ, ಶ್ರೀನಿವಾಸಮೂರ್ತಿ, ಶ್ರೀಧರ ಜೋಯಿಸ್ ಸೇರಿದಂತೆ ಜಿಲ್ಲೆಯ ವಿವಿಧ ಬ್ರಾಹ್ಮಣ ಉಪಪಂಗಡಗಳ ಪ್ರಮುಖರು, ನೂರಾರು ಸಂಖ್ಯೆಯಲ್ಲಿ ವಿಪ್ರ ಸಮುದಾಯದವರು ಪಾಲ್ಗೊಂಡಿದ್ದರು.
(Visited 1 times, 1 visits today)