ತುರುವೇಕೆರೆ: ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ದವಾಗಿ ಎನ್.ಡಿ.ಎ ಮೈತ್ರಿಕೂಟದಿಂದ ಏ.೨೧ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪ್ರತಿಭಟನೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಎನ್.ಡಿ.ಎ.ಮೈತ್ರಿಕೂಟದ ಮುಖಂಡರ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ದ ಎನ್.ಡಿ.ಎ ಮೈತ್ರಿಯಿಂದ ಹೋರಾಟ ಜಿಲ್ಲಿಯಲ್ಲಿಯೇ ನಮ್ಮ ತಾಲೂಕಿನಿಂದ ಮೊದಲು ಪ್ರಾರಂಬವಾಗುತ್ತಿದ್ದು ನಂತರ ಎಲ್ಲ ತಾಲೂಕಿನಲ್ಲಿ ನೆಡೆಯಲಿದೆ. ಎಲ್ಲಿನ ಗಾಡಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಸ್ವಾಮಿ ಆಗಮಿಸುವ ನಿರೀಕ್ಷೆ ಇದೆ. ಉಳಿದಂತೆ ಬಿಜೆಪಿಯಿಂದ ಮಾಜಿ ಶಾಸಕ ಮಸಾಲಜಯರಾಮ್, ಎಂ.ಡಿ.ಲಕ್ಷಿö್ಮÃನಾರಾಯಣ್ ಸೇರಿದಂತೆ ಹಲವು ಮುಖಂಡರು ಆಗಮಿಸಲಿದ್ದು ಅಪಾರ ಪ್ರಮಾಣದಲ್ಲಿ ಎನ್.ಡಿ.ಎ. ಕಾರ್ಯಕರ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಬಡವರ ವಿರೋದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಘಲೇ ಎಲ್ಲ ವಸ್ತುಗಳ ಮೇಲು ಟ್ಯಾಕ್ ಹಾಕಿದ್ದು ಸಗಣಿ ಮೇಲೂ ಟ್ಯಾಕ್ ಹಾಕೊದನ್ನು ಬಿಟ್ಟಿದ್ದಾರೆ ಅಷ್ಟೆ ಎಂದು ವ್ಯಂಗ್ಯವಾಡಿ ನಮ್ಮ ತೆರಿಗೆ ಹಣದಲ್ಲಿ ಕಾಂಗ್ರೇಸ್ ಗ್ಯಾರಂಟಿ ಅಧ್ಯಕ್ಷರಿಗೆ ಸಂಬಳ ನೀಡುತ್ತಿದ್ದಾರೆ. ಈ ಬೆಲೆ ಏರಿಕೆಯಿಂದ ರಾಜ್ಯಕ್ಕೆ ೨೫ ಸಾವಿರ ಕೋಟಿ ಹಣ ಬರುತ್ತಿದೆ ಆದರೆ ಅಭಿವೃದ್ದಿಗೆ ಹಣ ನೀಡುತ್ತಿಲ್ಲ. ಈಗಾಘಲೇ ದೆಹಲಿ ಚುನಾವಣೆಯಲ್ಲಿ ಜನರು ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ ದೆಹಲಿಯ ೬೭ ಸೀಟ್‌ನಲ್ಲಿ ಠೇವಣಿ ಸಿಕ್ಕಿಲ್ಲ. ಎಷ್ಟೇ ಗ್ಯಾರಂಟಿಗಳನ್ನು ನೀಡಿದರೂ ಮುಂದಿನ ಚುನಾವಣೆಯಲ್ಲಿ ಕೇವಲ ೪೦ ಸೀಟ್‌ಗೆ ಇಳಿಯಲಿದೆ ಎಂದು ಎಚ್ಚರಿಸಿದರು. ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ ಮುಖಂಡರಾದ ರಮೇಶ್‌ಗೌಡ, ಶಂಕರೇಗೌಡ, ಸಂಪಿಗೆ ಶ್ರೀನಿವಾಸ್, ಮಾಚೇನಹಳ್ಳಿರಾಮಣ್ಣ, ಯಡಿಗೆಹಳ್ಳಿವಿಶ್ವನಾಥ್, ವೆಂಕಟಾಪುರಯೋಗೀಶ್, ಸೋಮಶೇಖರ್, ಅನಿತಾ, ಬಸವರಾಜು, ವಕೀಲ ಧನಪಾಲ್, ದುಂಡಸುರೇಶ್, ಜಗದೀಶ್, ಲಕ್ಷö್ಮಣಗೌಡ, ಸಿದ್ದಗಂಗಣ್ಣ, ರಂಗನಾಥ್, ಕೃಷ್ಣಮೂರ್ತಿ, ದೇವರಾಜು, ಪ್ರಕಾಶ್, ಪ್ರಸಾದ್, ರಂಗಸ್ವಾಮಿ ಸೇರಿದಂತೆ ಮುಖಂಡರು ಇದ್ದರು.
(Visited 1 times, 1 visits today)