ತಿಪಟೂರು: ಗ್ರಾಮೀಣ ಭಾಗದ ಮಧ್ಯಮ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಿರಲಿ, ಮತ್ತು ಲಕ್ಷಾಂತರ ಹಣ ಪ್ರವೇಶ ಶುಲ್ಕವಾಗಿ ಕಟ್ಟಲು ಕಷ್ಟವಾಗುತ್ತಿರುವುದನ್ನು ಗಮನಿಸಿ ತಿಪಟೂರಿನ ಹತ್ತಿರದ ಕೋಟೆನಾಯಕನಹಳ್ಳಿ ಬಳಿ ವಿದ್ಯಾರ್ಥಿಗಳಿಗೆ ಗುರುಕುಲ ಪದ್ದತಿಯಂತೆ ಆ ಚಾರ, ವಿಚಾರ, ಸಂಸ್ಕೃತಿ, ಮತ್ತು ಗುಣಮಟ್ಟದ ಬೋಧನೆಯೊಂದಿಗೆ ಎಸ್ ಆರ್ ಎಸ್ ಕ್ರೋಮ್ ಪಿಯು ಕಾಲೇಜು ತೆರೆದೆವು ತೆರೆದ ಮೂರು ವರ್ಷಗಳಲ್ಲಿ ಅತ್ಯುತ್ತಮ ಫಲಿತಾಂಶ ಬಂದಿರುವುದು ತೃಪ್ತಿಕರವಾಗಿದೆ ಈ ವಿಚಾರವಾಗಿ ಪ್ರಾಂಶುಪಾಲರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ರುದ್ರಮುನಿ ಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ತಮ್ಮ ಸಂಸ್ಥೆಯ ಎಸ್ ಆರ್ ಎಸ್ ಕಾಲೇಜು ಆವರಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿ ಕೆ, ಲಕ್ಷ್ಮಿ ರಾಜ್ಯಕ್ಕೆ ೧ರ‍್ಯಾಂಕ್ ಪಡೆದು ಕಾಲೇಜಿನ ಕೀರ್ತಿಪತಾಕೆ ಎತ್ತರಕ್ಕೆ ಹಾರಿಸಿದ್ದಾರೆ, ಗ್ರಾಮೀಣ ಭಾಗದ ಮಧ್ಯಮ ವರ್ಗದ ವಿದ್ಯಾರ್ಥಿನಿ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಪ್ರಕಾಶ್ ಮಾತನಾಡಿ ನಮ್ಮ ಕಾಲೇಜು ಕಳೆದ ವರ್ಷ ೮೭% ಫಲಿತಾಂಶ ಪಡೆದು ಈ ಬಾರಿ ೯೦% ಫಲಿತಾಂಶ ಪಡೆದಿದೆ ಜಿಲ್ಲೆಯಲ್ಲಿ ಅತ್ಯುತ್ತಮ ಕಾಲೇಜ್ ಆಗಿ ಜನಪ್ರಿಯವಾಗಿದೆ ನಮ್ಮಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ಎನ್ ಇಇ ಟಿ, ಮತ್ತು ಜೆಇಇ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ನೀಡುವುದರ ಮುಖಾಂತರ ಪ್ರತಿಷ್ಠಿತ ಇಂಜಿನಿಯರಿAಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ನಮ್ಮ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಉಪ ಪ್ರಾಂಶುಪಾಲ ಸ್ವಾಮಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ೫ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕಾಲೇಜಿನಲ್ಲಿ ಬೋಧಕರು ಮತ್ತು ಸಿಬ್ಬಂದಿ ವರ್ಗ ಯಾವುದೇ ಹಣ ಆಮಿಷಗಳಿಗೆ ಒಳಗಾಗದೆ ಶಿಕ್ಷಣಕ್ಕೆ ಆದ್ಯತೆ ನೀಡಿದೆವು, ಪರಿಣಾ ಮವಾಗಿ ಕಳೆದ ವರ್ಷ ೯೭% ಫಲಿತಾಂಶ ಸಿಕ್ಕಿದ್ದು, ಈ ವರ್ಷ ದ್ವಿತೀಯ ಪಿಯುಸಿಯಲ್ಲಿ೯೦% ಫಲಿತಾಂಶ ಸಿಕ್ಕಿದೆ ನಮ್ಮ ಕಾಲೇಜಿನಲ್ಲಿ ೬೧ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ವಿದ್ಯಾರ್ಥಿನಿ, ಲಕ್ಷ್ಮಿ ಸಿ ಕೆ ೬೦೦ ಅಂಕಗಳಿಗೆ ೫೯೦ ಅಂಕ ಪಡೆದು ರಾಜ್ಯಕ್ಕೆ ಹತ್ತನೇ ರ‍್ಯಾಂಕ್ ಗಳಿಸಿದ್ದಾರೆ, ತುಮಕೂರಿಗೆ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ ಎಂದು ಹೇಳಿ ದರು.
(Visited 1 times, 1 visits today)