ಕೊರಟಗೆರೆ: ಪೊಲೀಸ್‌ಠಾಣೆ ಮೊ.ಸಂಖ್ಯೆ: ೫೬/೨೦೨೧. ಎಸ್.ಸಿ ಸಂಖ್ಯೆ ೫೦೨೩/೨೦೨೧ರ ಪ್ರಕರಣದಲ್ಲಿ ದಿನಾಂಕ:-೧೦-೦೩-೨೦೨೧ರAದು ಬೆಳಗ್ಗೆ ೭:೦೦ ಗಂಟೆ ಸಮಯದಲ್ಲಿ ಸಿ.ಎನ್ ದುರ್ಗ ಹೋಬಳಿ, ಥರಟಿಗ್ರಾಮದಲ್ಲಿ ಹನುಮಯ್ಯರವರ ಮಗಳು ಯಶೋಧರವರು ತನ್ನ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆರೋಪಿಯಾದ ದೇವರಾಜು ಬಿನ್ ಗೋವಿಂದಪ್ಪ, ೪೯ ವರ್ಷ, ಥರಟಿಗ್ರಾಮ ಈತನು,ತನ್ನ ಹೆಂಡತಿ ಯಶೋಧರವರ ಮೇಲೆ ಸಂಸಾರದ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡಿ ಹಾಗೂ ತುಮಕೂರು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವ ವಿಚಾರದಲ್ಲಿ ಅನುಮಾನ ಪಟ್ಟು ಆರೋಪಿಯು ಯಶೋದಮ್ಮರವ ರನ್ನು ಏನಾದರೂ ಮಾಡಿ ಕೊಲೆ ಮಾಡಿ ನಂತರ ಬೇರೆ ಮದುವೆಯಾಗಬೇಕೆಂಬ ಉದ್ದೇಶವಿಟ್ಟುಕೊಂಡು ಕೊಲೆ ಮಾಡುವಉದ್ದೇಶದಿಂದ ಆರೋಪಿಯು ಯಶೋದರವರ ಬಲತಲೆಗೆ ಮೂರು-ನಾಲ್ಕು ಬಾರಿ ಮಚ್ಚಿನಿಂದ ಬಲವಾಗಿ ಹೊಡೆದಾಗ ಬಲತಲೆಗೆ, ಬಲಕಿವಿಗೆ ಮತ್ತು ಬಲಭಾಗದ ಹಿಂಭಾಗದ ಕುತ್ತಿಗೆಗೆ ಏಟು ಬಿದ್ದುತೀವ್ರ ಸ್ವರೂಪದ ರಕ್ತ ಗಾಯವಾಗಿತುಮಕೂರು ಜಿಲ್ಲಾ ಆಸ್ಪತ್ರೆ, ಬೆಂಗಳೂರು ನಗರದಲ್ಲಿರುವ ವಿಕ್ಟೋರಿಯಾ ಆಸ್ಪತೆ, ನಿಮ್ಹಾನ್ಸ್ಆಸ್ಪತ್ರೆ, ಪೀಪಲ್‌ಟ್ರೀಆಸ್ಪತ್ರೆ, ಕಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾಆಸ್ಪತ್ರೆಯಿಂದ ಬೆಂಗಳೂರು ವಿಕ್ಟೋರಿಯಾಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:೧೪-೦೪-೨೦೨೧ ರಂದುರಾತ್ರಿ ೮:೪೦ ಗಂಟೆ ಸಮಯದಲ್ಲಿಕೊನ್ನ ಯ್ಯರಹಟ್ಟಿಟಿ. ಬೇಗೂರು ವಾಸಿ ಹನುಮಯ್ಯರವರÀ ಮಗಳಾದ ಯಶೋದರವರು ಮೃತಪಟ್ಟ ಬಗ್ಗೆ ಅಂದಿನ ಸಿ.ಪಿ.ಐ ಸಿದ್ದರಾಮೇಶ್ವರ. ಎಸ್. ರವರುತನಿಖೆಕೈಗೊಂಡುದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ ಮಾನ್ಯ೪ನೇ ಅಧಿಕಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಯಾದವಕರಕೇರರವರು ದಿನಾಂಕ: ೦೯-೦೪-೨೦೨೫ ರಂದುಆರೋಪಿ ದೇವರಾಜನಿಗೆ uಟಿಜeಜಿiಟಿeಜ ಭಾರತೀಯದಂಡ ಸಂಹಿತೆಯ ಕಲಂ ೩೦೨ ಅಡಿಯಲ್ಲಿಜೀವಾವಧಿ ಶಿಕ್ಷೆ ಮತ್ತು ರೂ. ೧ ಲಕ್ಷದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ದಂಡದ ಪೂರ ಹಣವನ್ನು ಮೃತಳ ಮಕ್ಕಳಾದ ಅಕ್ಷತಾ ಮತ್ತು ಲಿಖಿತ್ ಇವರುಗಳಿಗೆ ಪರಿಹಾರವಾಗಿ ನೀಡಲು ಆ ದೇಶಿಸಿರುತ್ತಾರೆ.ಪ್ರಕರಣದಲ್ಲಿಅಭಿಯೋಜನೆ ಪರವಾಗಿಬಿ.ಎಂ.ನಿರAಜನಮೂರ್ತಿ, ಸರ್ಕಾರಿ ಅಭಿಯೋಜಕರುವಾದ ಮಂಡಿಸಿದ್ದರು.
(Visited 1 times, 1 visits today)