ಕೊರಟಗೆರೆ: ಪೊಲೀಸ್ ಠಾಣೆ ಮೊ.ಸಂಖ್ಯೆ:೧೩/೨೦೨೨. ಎಸ್.ಸಿ ಸಂಖ್ಯೆ ೫೦೪೩/೨೦೨೨ ದಿನಾಂಕ: ೨೦-೦೧-೨೦೨೨ರಂದು ಬೆಳಗ್ಗೆ ಸುಮಾರು ೧೧-೩೦ ಗಂಟೆ ಸಮಯದಲ್ಲಿ ದೂರೂದಾರ ಉಮಾಶಂಕರ್ ಮತ್ತು ಆತನ ತಂದೆ ಕುಮಾರಸ್ವಾಮಿ, ಹಾಗೂ ತಮ್ಮ ನವೀನ್ ಕೆ ಮೂರು ಜನ ಕೊರಟಗೆರೆ ಟೌನ್ ಕರ್ನಾಟಕ ಬ್ಯಾಂಕ್ ಎಟಿಎಂ ಎದರುಗಡೆ ಇರುವ ಅವರ ಬಾಬು ಖಾಲಿ ಜಾಗದಲ್ಲಿ ಶೆಡ್ ನಿರ್ಮಾಣ ಮಾಡಲು ಗೇಟ್ ನಿಲ್ಲಿಸುತ್ತಿದ್ದಾಗ, ಸದರಿ ಜಾಗದ ಪಕ್ಕದಲ್ಲಿರುವ ಕೊರಟಗೆರೆ ಹನುಮಂತಪುರ ವಾಸಿಗಳಾದ ವೆಂಕಟೇಶ್ ಕೆ.ಟಿ (ತಿರುಪತಿ) ಮತ್ತು ಅವರ ಮಕ್ಕಳಾದ ರೋಹಿತ್, ಕಿಶೋರ್ ಮೂರು ಜನರು ಬಂದು ಈ ಜಾಗ ನಮಗೆ ಸೇರಿದ್ದು ನೀವು ಯಾಕೆ ಇಲ್ಲಿ ಶೆಡ್ ನಿರ್ಮಾಣ ಮಾಡಿ ಗೇಟ್ ನಿಲ್ಲಿಸುತ್ತಿದ್ದೀರಾ ಎಂದು ಕೇಳಿದಾಗ ಈ ಜಾಗ ನಮ್ಮ ತಂದೆಗೆ ಸೇರಿದ ಜಾಗ ಎಂದು ಹೇಳುತ್ತಿರುವಾಗ ವೆಂಕಟೇಶ್ ಕೆ.ಟಿ ರವರು ದೂರುದಾರರನ್ನು ಕುರಿತು ಏನೋ ಬೋಳಿ ಮಕ್ಕಳ, ಸೂಳೆ ಮಕ್ಕಳ ನಿಮಗೆ ಎಷ್ಟು ಸಾರಿ ಹೇಳಿದರೂ ಸಹ ಪದೇ ಪದೇ ಶೆಡ್ ನಿರ್ಮಾಣ ಮಾಡಲು ಬಂದು ಗೇಟ್ ನಿಲ್ಲಿಸುತ್ತಿದ್ದೀರಾ ಎಂದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಮಗ ರೋಹಿತ್ ರವರಿಗೆ ಈ ನನ್ನ ಮಕ್ಕಳಿಗೆ ಒಂದು ಗತಿ ಕಾಣಿಸುತ್ತೇನೆ, ಏನೇ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದಾಗ ಆರೋಪಿ ರೋಹಿತ್ ರವರು ನೀವು ಬದುಕಿದ್ದರೆ ತಾನೆ ಇಲ್ಲಿಗೆ ಬರುವುದು, ನಿಮ್ಮನ್ನು ಸಾಯಿಸಿಬಿಡುತ್ತೇನೆ ಎಂದು ಹೇಳಿ ಕೊಲೆ ಮಾಡುವ ಉದ್ದೇಶದಿಂದ ಅಲ್ಲಿಯೇ ಬಿದ್ದಿದ್ದ ಒಂದು ಸೈಜು ಕಲ್ಲನ್ನು ಎತ್ತಿಕೊಂಡು ಗಾಯಾಳು ನವೀನ್ ರವರ ತಲೆಯ ಮೇಲೆ ಹಾಕಿದಾಗ ನನ್ನ ನವೀನ್ ರವರ ತಲೆಗೆ ರಕ್ತಗಾಯವಾಗಿದ್ದು ಅಷ್ಟರಲ್ಲಿ ದೂರುದಾರ ಮತ್ತು ಆತನ ತಂದೆ ಗಲಾಟೆ ಬಿಡಿಸಲು ಹೋದಾಗ ಕಿಶೋರ್ ರವರು ತನ್ನ ಕೈಗಳಿಂದ ದೂರುದಾರರನ ಮೈಕೈಗೆ ಗುದ್ದಿ ನೋವುಂಟು ಮಾಡಿ, ನಂತರ ವೆಂಕಟೇಶ್ ರವರು ಕುಮಾರಸ್ವಾಮಿ ರವರನ್ನು ಕೈಗಳಿಂದ ನೂಕಿ ನೆಲದ ಮೇಲೆ ಬಿಳಿಸಿ ಕಾಲುಗಳಿಂದ ಒದ್ದು ಗಲಾಟೆ ಮಾಡುತ್ತಿದ್ದಾಗ ಶೆಡ್ ನಿರ್ಮಾಣ ಮಾಡಲು ಬಂದಿದ್ದ ತುಮಕೂರು ವಾಸಿ ರಾಘವೇಂದ್ರ ಮತ್ತು ತಬ್ರೇಜ್ ಮತ್ತು ಹನುಮಂತರಾಜು ರವರುಗಳು ಗಲಾಟೆ ಬಿಡಿಸಿ ಸಮದಾನ ಪಡಿಸಿದ್ದು, ಅಷ್ಟರಲ್ಲಿ ರೋಹಿತ್ ರವರು ನವೀನನಿಗೆ ಹೊಡೆದಿದ್ದ ಸೈಜ್ ಕಲ್ಲನ್ನು ಸ್ಥಳದಲ್ಲಿಯೇ ಹಾಕಿ ವೆಂಕಟೇಶ್ ರೋಹಿತ್ ಮತ್ತು ಕಿಶೋರ್ ಮೂರು ಜನರು ಈ ದಿನ ನೀವು ಗೆದ್ದುಕೊಂಡಿದ್ದೀರಾ ಇವತ್ತಲ್ಲಾ ನಾಳೆ ನಿಮಗೆ ಒಂದು ಗತಿ ಕಾಣಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿ ಹೊರಟು ಹೋದ ಪ್ರಕರಣದಲ್ಲಿ ಅಂದಿನ ಪಿಎಸ್‌ಐ ರವರು ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ ಮಾನ್ಯ ೪ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಯಾದವ ಕರಕೇರ ರವರು ದಿನಾಂಕ: ೦೮-೦೪-೨೦೨೫ ರಂದು ಆರೋಪಿ-೧ ರವರಿಗೆ ಭಾರತೀಯ ದಂಡ ಸಂಹಿತೆಯ ಕಲಂ ೩೨೪ ಅಡಿಯಲ್ಲಿ ೧ ವರ್ಷ ಶಿಕ್ಷೆ, ಮತ್ತು ೧ ಸಾವಿರ ರೂಪಾಯಿ ದಂಡ, ಆರೋಪಿ-೨ ಮತ್ತು ೩ ರವರಿಗೆ ಭಾರತೀಯ ದಂಡ ಸಂಹಿತೆಯ ಕಲಂ ೩೨೩ ಅಡಿಯಲ್ಲಿ ತಲಾ ೧ ಸಾವಿರ ದಂಡ ವಿಧಿಸಿ, ದಂಡದ ಹಣದಲ್ಲಿ ರೂ. ೨ ಸಾವಿರ ಗಾಯಾಳುವಿಗೆ ಪರಿಹಾರವಾಗಿ ನೀಡಲು ತೀರ್ಪು ನೀಡಿರುತ್ತಾರೆ. ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಬಿ.ಎಂ. ನಿರಂಜನಮೂರ್ತಿ, ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.
(Visited 1 times, 1 visits today)