ಕೊರಟಗೆರೆ: ೨೦೨೨ರ ಜನವರಿ ೨೦ರಂದು ಪಟ್ಟಣದಲ್ಲಿ ನಡೆದ ಹಲ್ಲೆ ಮತ್ತು ಬೆದರಿಕೆಯ ಪ್ರಕರಣದಲ್ಲಿ ಮಧುಗಿರಿ ೪ನೇ ಜಿಲ್ಲಾ ಸತ್ರ ನ್ಯಾಯಾಲಯವು ತೀರ್ಪು ನೀಡಿದ್ದು, ಮೊದಲನೇ ಆರೋಪಿ ಕೆ.ಟಿ. ವೆಂಕಟೇಶ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ೧,೦೦೦ ಸಾವಿರ ದಂಡ ವಿಧಿಸಿ, ಇತರ ಇಬ್ಬರು ಆರೋಪಿಗಳಾದ ಅವರ ಪುತ್ರರಾದ ರೋಹಿತ್ ಮತ್ತು ಕಿಶೋರ್ ಅವರಿಗೆ ತಲಾ ೧೦೦೦ ಸಾವಿರ ದಂಡ ವಿಧಿಸಿದೆ.
ಪಟಣದ ಹನುಮಂತಪುರದ ನಿವಾಸಿಗಳಾದ ವೆಂಕಟೇಶ್ ಕೆ.ಟಿ., ರೋಹಿತ್ ಮತ್ತು ಕಿಶೋರ್ ಎಂಬವರು, ಕರ್ನಾಟಕ ಎಟಿಎಂ ಎದುರಿನ ಖಾಲಿ ಜಾಗದಲ್ಲಿ ಷೆಡ್ ನಿರ್ಮಿಸುತ್ತಿದ್ದ ಉಮಾಶಂಕರ್, ಅವರ ತಂದೆ ಕುಮಾರಸ್ವಾಮಿ ಹಾಗೂ ನವೀನ್ ಎಂಬುವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದರು. ಆರೋಪಿಗಳು ಆ ಜಾಗವು ತಮಗೆ ಸೇರಿದ್ದೆಂದು ತಿಳಿಸಿ ಶೆಡ್ ನಿರ್ಮಾಣಕ್ಕೆ ತಡೆ ನೀಡಲು ಯತ್ನಿಸಿದ್ದರು.
ಈ ಪ್ರಕರಣದಲ್ಲಿ ಅಭಿ ಯೋಜನೆಯ ಪರವಾಗಿ ವಕೀಲರಾದ ಬಿ.ಎಂ. ನಿರಂಜನಮೂರ್ತಿ ಅವರು ವಾದ ಮಂಡಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಧೀಶರು ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಿದ್ದು, ನ್ಯಾಯದ ಪಾಲನೆಗೆ ಮಹತ್ವದ ಉದಾಹರಣೆ ರೂಪವಾಗಿದೆ.
ಸ್ಥಳೀಯ ಜನರಲ್ಲಿ ಈ ತೀರ್ಪು ಕುರಿತು ವಿಶಿಷ್ಟ ಚರ್ಚೆ ನಡೆಯುತ್ತಿದ್ದು, ಈ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತಿಲ್ಲದ ವರ್ತನೆ ಹಾಗೂ ಗೊಂದಲ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮವು ಹೇಗೆ ಕೈಗೊಳ್ಳಲಾಗುತ್ತಿದೆ ಎಂಬುದರ ಅರಿವು ಹೆಚ್ಚಾಗಿದೆ.
(Visited 1 times, 1 visits today)