ಹುಳಿಯಾರು: ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವವು ಭಾರಿ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿAದ ಬುಧವಾರ ನೆರವೇರಿತು.
ರಥೋತ್ಸವದ ಅಂಗವಾಗಿ ಮುಂಜಾನೆಯಿAದಲೇ ಸ್ವಾಮಿಯ ವರ ಧಾರ್ಮಿಕ ಕೈಂಕರ್ಯಗಳು ನಡೆಯಿತು. ನಂತರ ಗೌಡಗೆರೆ ಯ ದುರ್ಗಮ್ಮದೇವರು ಹಾಗೂ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿಕೊAಡು ಸಕಲ ವಾದ್ಯಮೇ ಳದೊಂದಿಗೆ ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಬಂದ ನಂತರ ಕೆಂಚರಾಯಸ್ವಾಮಿ, ದೂತರಾಯಸ್ವಾಮಿ ಹಾಗೂ ನಗಾರಿ ಹೊತ್ತ ಬಸವನೊಂದಿಗೆ ರಥದ ಬಳಿ ಕರೆತರಲಾಯಿತು.
ಜೈಕಾರದೊಂದಿಗೆ ಶುಭಲಗ್ನದಲ್ಲಿ ಆಂಜನೇಯ ಸ್ವಾಮಿಯ ವರನ್ನು ಬ್ರಹ್ಮರಥದ ಮೇಲೆ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥದ ಮುಂದೆ ನೆಟ್ಟಿದ್ದ ಕದಳಿ ಮರವನ್ನು ತುಂಡರಿಸಿದ ನಂತರ ಫಲಪುಷ್ಪಾದಿಗಳಿಂದ, ರಂಗಿನ ಬಾವುಟ, ತಳಿರು ತೋರಣಗಳಿಂದ ಸಕಲ ಬಿರುದಾವಳಿಗಳಿಂದ ಅಲಂಕೃತಗೊAಡ ರಥವನ್ನು ಮಂಗಳವಾದ್ಯ ವೇದ, ಮಂತ್ರ ಘೋಷಗಳ ನಡುವೆ, ಜೈ ಹನುಮಾನ್ ಉದ್ಘೋಷದೊಂದಿಗೆ ಭಕ್ತರು ಎಳೆದು ಪುನೀತರಾದರು.
ಭಕ್ತರು ಅನತಿ ದೂರದಿಂದಲೇ ಬಾಳೆ ಹಣ್ಣನ್ನು ರಥದ ಕಲಶಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಮಹಿಳೆಯರು ರಥದ ಮೇಲಿದ್ದ ಸ್ವಾಮಿಗೆ ಹಣ್ಣುಕಾಯಿ ಮಾಡಿಸುವಲ್ಲಿ ಮುಂದಾಗಿದ್ದರು. ಮೂವತ್ತು ಅಡಿಗೂ ಎತ್ತರದ ಈ ಮಹಾರಥೋತ್ಸವವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
(Visited 1 times, 1 visits today)