ಕೇಂದ್ರ ಸರಕಾರವು ಅಡುಗೆ ಅನಿಲದ ಬೆಲೆಯನ್ನು ತೀವ್ರವಾಗಿ ಹೆಚ್ಚಳಗೊಳಿಸಿ ಜನತೆಯ ಮೇಲೆ ಬೆಲೆಯೇರಿಕೆಯ ಬರೆ ಎಳೆಯಲಾಗಿದೆ. ರೂ.೫೦ ಪ್ರತಿ ಸಿಲಿಂಡರಿಗೆ ಹೆಚ್ಚಳಗೊಳಿಸಲಾಗಿದೆ. ಇದನ್ನು ಸಿಪಿಐಎಂ ಪಕ್ಷ ತುಮಕೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಈ ಬೆಲೆಯೇರಿಕೆಯು ಸಾಮಾನ್ಯ ಮತ್ತು ರಿಯಾಯಿತಿದಾರರಿಗೂ ಇಬ್ಬರಿಗೂ ಅನ್ವಯಿಸಲಾಗಿದೆ. ಇದು ಜನರ ಮೇಲೆ ರೂ.೭೦೦೦ ಕೋಟಿ ಹೊರೆ ಹೊರೆಸಿದೆ. ಪೆಟ್ರೋಲ್ ಮತ್ತು ಡಿಜೆಲ್ ಎರಡರ ಮೇಲೂ ರೂ.೩೨೦೦೦ ಕೋಟಿಯಷ್ಟು ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದೆ.
ಹಣದುಬ್ಬರದಿಂದ ಈಗಾಗಲೇ ಜನರ ಜೀವನವು ಕಷ್ಟದಲ್ಲಿದೆ. ಈ ಬೆಲೆಯೇರಿಕೆಯಿಂದ ಜನತೆಯ ಬದುಕು ಮತ್ತಷ್ಟು ಕಷ್ಟಕ್ಕೆ ಈಡಾಗಲಿದೆ. ತೈಲ ಮತ್ತು ಅನಿಲದ ಅಂತರರಾಷ್ಟಿçÃಯ ಬೆಲೆ ಕುಸಿತದ ಲಾಭವನ್ನು ಜನರಿಗೆ ಮಾಡುವ ಬದಲು ಸರಕಾರವು ಆ ಲಾಭವನ್ನು ತಾನು ಪಡೆದು ಜನರಿಗೆ ಇನ್ನಷ್ಟು ಹೆಚ್ಚುವರಿ ಬೆಲೆಯೇರಿಕೆಯ ಹೊರೆಯನ್ನು ಹಾಕುತ್ತಿದೆ. ವಿಶೇಷ ಅಬಕಾರಿ ಸುಂಕದ ಹೆಸರಿನಲ್ಲಿ ಒಕ್ಕೂಟದ ತತ್ವಗಳನ್ನು ಗಾಳಿಗೆ ತೂರಿ ತನ್ನ ಲಾಭವನ್ನು ಹೆಚ್ಚು ಮಾಡಿಕೊಳ್ಳುವ ಕೇಂದ್ರ ಸರಕಾರದು ಧೋರಣೆಯು ಜನವಿರೋಧಿಯಾಗಿದೆ.
ರಾಜ್ಯ ಸರಕಾರವೂ ಹಾಲಿನ ಬೆಲೆಯನ್ನು ಏರಿಕೆ ಮಾಡಿದೆ. ಹಾಲು, ನೀರು, ತ್ಯಾಜ್ಯ ವಿಲೇವಾರಿ ಮತ್ತಿತರ ನಾಗರೀಕ ಸೌಲಭ್ಯಗಳ ತೆರಿಗೆಯನ್ನು ಹೆಚ್ಚಳ ಮಾಡಿದೆ. ಈಗಾಗಲೆ ಮೆಟ್ರೊ ದರ ಹೆಚ್ಚಳ ಮಾಡಿದೆ. ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ನವ ಉದಾರವಾದಿ ನೀತಿಗಳನ್ನು ವೇಗವಾಗಿ ಜಾರಿ ಮಾಡುತ್ತಿವೆ. ಇದು ಜನತೆಯನ್ನು ಆರ್ಥಿಕವಾಗಿ ಸುಲಿಗೆ ಮಾಡುವ ಜನವಿರೋಧಿ ಕ್ರಮವಾಗಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಪರಸ್ಪರ ಬೆಲೆಯೇರಿಕೆಯ ಬಗ್ಗೆ ಕೆಸರೆರಚಾಟದಲ್ಲಿ ತಲ್ಲೀನವಾಗಿವೆ. ಮತ್ತು ಜನತೆಯ ಹಿತವನ್ನು ಮೂಲೆಗುಂಪು ಮಾಡುತ್ತಿವೆ. ಸಿಪಿಐಎಂ ಪಕ್ಷವು ಎರಡೂ ಪಕ್ಷಗಳ ಈ ಜನವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಬೆಲೆ ಏರಿಕೆಗಳನ್ನು ಕೂಡಲೇ ಹಿಂಪಡೆಯಬೇಕೆAದು ಆಗ್ರಹಿಸುತ್ತದೆ.
(Visited 1 times, 1 visits today)