ತುಮಕೂರು: ಯಕ್ಷದೀವಿಗೆ ಸಂಸ್ಥೆಯು ಏಪ್ರಿಲ್ ೧೨ ಹಾಗೂ ೧೩ರಂದು ನಗರದ ಶ್ರೀಕೃಷ್ಣಮಂದಿರದಲ್ಲಿ ಎರಡು ದಿನಗಳ ಯಕ್ಷಗಾನ ಬಣ್ಣಗಾರಿಕೆ ಕಮ್ಮಟವನ್ನು ಹಮ್ಮಿಕೊಂಡಿದೆ.
ಕಮ್ಮಟವನ್ನು ಏಪ್ರಿಲ್ ೧೨ರಂದು ಬೆಳಗ್ಗೆ ೯-೩೦ಕ್ಕೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ. ಚಂದ್ರಶೇಖರ ದಾಮ್ಲೆ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಮಿತ್ರವೃಂದದ ಅಧ್ಯಕ್ಷ ಅಮರನಾಥ ಶೆಟ್ಟಿ ಕೆಂಜೂರು ಮನೆ, ಕಾರ್ಯದರ್ಶಿ ವೆಂಕಟೇಶ ಎಂ.ಎಸ್. ಕಾರಂತ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯಕ್ಷದೀವಿಗೆಯ ಅಧ್ಯಕ್ಷೆ ಆರತಿ ಪಟ್ರಮೆ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಿಂದ ಕಲಾಸಕ್ತರು ಆಗಮಿಸಿ ಯಕ್ಷಗಾನದ ಮುಖವರ್ಣಿಕೆ ಮಾಡುವ ವಿಧಾನವನ್ನು ಅಭ್ಯಾಸ ಮಾಡಲಿದ್ದಾರೆ. ಯಕ್ಷಗಾನ ಕಲಾವಿದರಾದ ನಿಡುವಜೆ ಗೋಪಾಲಕೃಷ್ಣ ಭಟ್ ಹಾಗೂ ಪಾರ್ಥಸಾರಧಿ ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಯಕ್ಷಗಾನ, ನಾಟಕ, ಭರತನಾಟ್ಯ ಇತ್ಯಾದಿ ಕಲೆಗಳಿಗೆ ಸಂಬAಧಪಟ್ಟವರು ಈ ಕಮ್ಮಟದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬಹುದು. ಆಸಕ್ತರು ಮೊಬೈಲ್ ಸಂಖ್ಯೆ ೭೦೧೯೩೯೪೯೮೮ ಅಥವಾ ೯೩೮೦೭೫೦೯೭೨ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.
ಕಮ್ಮಟದ ಅಂಗವಾಗಿ ಯಕ್ಷದೀವಿಗೆಯ ವಿದ್ಯಾರ್ಥಿಗಳು ಸಂಜೆ ೫-೩೦ರಿಂದ ‘ಏಕಲವ್ಯ’ ಎಂಬ ತಾಳಮದ್ದಳೆಯನ್ನು ಪ್ರದರ್ಶಿಸಲಿದ್ದಾರೆ. ಸಂವೃತ ಶರ್ಮಾ, ಇಂಚರಾ, ತೇಜು ವಿಘ್ನೇಶ್, ಫಾಲ್ಗುಣಿ ಶ್ರೀಧರ್, ಅದಿತಿ ಕೃಷ್ಣ, ಹೇಮ್ ಆಶಿಶ್, ಅದ್ವೆöÊತ್, ಮಹಿಮಾ ಭಟ್, ನಿಶಾಂತ್ ಓಂಕಾರ್, ಸಾತ್ವಿಕ್, ಆರ್ಯ, ತೀರ್ಥಜನ್ಯಾ ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಏಪ್ರಿಲ್ ೧೩ರಂದು ಎಂ.ಜಿ. ರಸ್ತೆಯ ಬಾಲಭವನದಲ್ಲಿ ಸಂಜೆ ೬-೦೦ರಿಂದ ‘ಗಯಚರಿತ್ರೆ ಅ ಥವಾ ಕೃಷ್ಣಾರ್ಜುನಕಾಳಗ’ ಎಂಬ ಯಕ್ಷಗಾನ ಬಯಲಾ ಟವನ್ನು ಅಭಿನಯಿಸಲಿದ್ದಾರೆ. ಹಿಮ್ಮೇಳ ದಲ್ಲಿ ಪ್ರಸಿದ್ಧ ಕಲಾವಿದರಾದ ಕಾವ್ಯಶ್ರೀ ನಾಯಕ್ ಆಜೇರು, ಅವಿನಾಶ್ ಬೈಪಾಡಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ ಭಾಗವಹಿಸಲಿದ್ದಾರೆ. ಆರತಿ ಪಟ್ರಮೆ (ಕೃಷ್ಣ), ಸಿಬಂತಿ ಪದ್ಮನಾಭ (ಅರ್ಜುನ), ತೀ ರ್ಥಜನ್ಯಾ (ಸುಭದ್ರೆ), ಫಾಲ್ಗುಣಿ (ಅಭಿಮನ್ಯು), ಸಂವೃತ (ದಾರುಕ), ಮಹಿಮಾ (ಬಲರಾಮ), ತೇಜು ವಿಘ್ನೇಶ್ (ಭೀಮ), ನಿಶಾಂತ್ (ಈಶ್ವರ), ಇಂಚರಾ (ಪಾರ್ವತಿ) ಭಾಗವಹಿಸಲಿದ್ದಾರೆ.
(Visited 1 times, 1 visits today)