ತುಮಕೂರು: ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಯನ್ನು ನಗರದ ಸ್ಲಂ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ ಇದೇ ಮೇ ತಿಂಗಳಲ್ಲಿ ವಿಭಾಗ ಮಟ್ಟದ ಸ್ಲಂ ಜನರ ಹಬ್ಬ ಮತ್ತು ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ತುಮಕೂರು , ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ನಗರಗಳು ಒಟ್ಟುಗೂಡಿ ತುಮಕೂರಿನಲ್ಲಿ ಸ್ಲಂ ಜನರ ಸಾಂಸ್ಕೃತಿಕ ಕಲಾ ಪ್ರಕಾರಗಳೊಂದಿಗೆ ಮೇ ನಲ್ಲಿ ಸ್ಲಂಹಬ್ಬ ಘೋಷಣೆ. ಸಮಾವೇಶಕ್ಕೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹಸಚಿವರಾದ ಡಾ.ಜಿ.ಪರಮೇಶ್ವರ್ ರವರು ಮತ್ತು ಸಹಾಕಾರ ಸಚಿವರಾದ ಕೆ.ಎನ್ ರಾಜಣ್ಣರವರಿಗೆ ಆಹ್ವಾನಿಸಲು ಸ್ಲಂ ಜನಾಂದೋಲನದಿAದ ತೀರ್ಮಾನಿಸಲಾಗಿದೆ.
ಇದರ ಜೊತೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಬೆಲೆ ಏರಿಕೆ ಮಾಡಿ ಬಡವರು ಬದುಕಲು ಕಷ್ಟಸಾಧ್ಯವಾಗುವಂತೆ ಮಾಡುತ್ತಿ ರುವ ಮತ್ತು ಬಡಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದು ಖಂಡನೀಯವಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಗ್ಯಾಸ್ ಪೆಟ್ರೋಲ್. ಡಿಸೇಲ್ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಜಾಸ್ತಿ ಮಾಡಲಾಗಿದೆ. ಇನ್ನು ರಾಜ್ಯ ಸರ್ಕಾರ ಕುಡಿಯುವ ಹಾಲಿನ ದರ, ವಿದ್ಯುತ್ ದರ, ಇತರೆ ದಿನಬಳಕೆ ವಸ್ತುಗಳ ಮೇಲೆ ಬೆಲೆಗಳ ಭಾರ ಹೊರಿಸುತ್ತಿರುವುದು ಬಡಜನ ವಿರೋಧಿ ನಡೆಯಾಗಿದೆ. ಬೆಲೆ ಬೆಲೆ ಏರಿಕೆ ಖಂಡಿಸಿ ಏಪ್ರಿಲ್ ೧೬ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಈ ಹೋರಾಟದಲ್ಲಿ ಬಡವರಿಗೆ ಹೊಸ ಪಡಿತರ ಚೀಟಿಗಳನ್ನು ಕೊಡಬೇಕು. ವಿದ್ಯಾಭ್ಯಾಸ ಮಾಡುತ್ತಿ ರುವ ಬಡಮಕ್ಕಳಿಗೆ ಆದಾಯ ಪ್ರಮಾಣ ಪತ್ರದಲ್ಲಿ ಹೆಚ್ಚು ಆದಾಯ ನಮೂದಿಸಿ ಮತ್ತೆ ರಿಜೆಕ್ಟ್ ಮಾಡುವುದು ಮಕ್ಕಳಿಗೆ ತೊಂದರೆಯಾಗುತ್ತಿದ್ದು ಸರಿಪಡಿಸಬೇಕು. ನಗರದ ಇಸ್ಮಾಯಿಲ್ ನಗರ ಹಂದಿಜೋಗಿ ಸ್ಲಂ ನಿವಾಸಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಸಂಬAಧಪಟ್ಟ ಅಧಿಕಾರಿ ವಿಳಂಭ ಮಾಡುತ್ತಿದ್ದಾರೆ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳಲ್ಲಿ ಗೊಂದಲ ಸೃಷ್ಠಿಯಾಗಿದ್ದು ಹಂದಿ ಜೋಗಿ ಕುಟುಂಬಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಪುನರ್ವಸತಿಗೊಳಿಸಲು ತೊಂದರೆ ಉಂಟಾಗುತ್ತಿದೆ ಮಾನ್ಯ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಕುಲಶಾಶ್ತ್ರಿಯ ಅಧ್ಯಯನಕ್ಕೆ ಒಳಪ ಡಿಸಿ ಜಾತಿ ಪ್ರಮಾಣಪತ್ರ ನೀಡಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಾಗುತ್ತಿದ್ದು ನಗರದ ಎಲ್ಲಾ ಸ್ಲಂ ನಿವಾಸಿಗಳು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಈ ಸಂದಭದಲ್ಲಿ ಸ್ಲಂ ಸಮಿತಿ ಕಾರ್ಯದರ್ಶಿ ಅರುಣ್, ಪದಾಧಿಕಾರಿಗಳಾದ ಶಂಕ್ರಯ್ಯ, ಜಾಬೀರ್ ಖಾನ್, ತಿರುಮಲಯ್ಯ, ಶಾರದಮ್ಮ, ಕೃಷ್ಣಮೂತಿ ಸಾವಿತ್ರಿ ಬಾಯೊಪುಲೆ ಮಹಿಳಾ ಸಂಘಟನೆಯ ಅನುಪಮ, ಪದಾಧಿಕಾರಿಗಳಾದ ಗಂಗಾ, ಮಂಗ ಳಮ್ಮ, ಇಸ್ಮಾಯಿಲ್ ನಗರ ಹಂದಿಜೋಗಿ ಶಾಖೆ ಯ ಚಿಕ್ಕಗಂಗಮ್ಮ, ಮಾರಿಯಮ್ಮ ಯುವಕರ ಸಂಘದ ಕಣ್ಣನ್, ಮಾಧವನ್, ಕೃಷ್ಣ, ರಾಹುಲ್, ಮಾರಿ, ಹಾಗೂ ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ, ಮಂಜುನಾಥ್,ಸುನೀಲ್, ಭಾಗ್ಯ, ನರಸಿಂಹ ಮುಂತಾದವರು ಪಾಲ್ಗೊಂಡಿದ್ದರು.
(Visited 1 times, 1 visits today)