ತುಮಕೂರು: ಬಯಲು ಸೀಮೆ ಕಂಪನಿ ವತಿಯಿಂದ ಏ.೧೫ ರಿಂದ ಮೇ.೬ರವರೆಗೆ ಉಚಿತ ಅಭಿನಯ ಕಾರ್ಯಗಾರವನ್ನು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದೊಂದಿಗೆ ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನ ಹಿಂಭಾಗದಲ್ಲಿರುವ ಜನ ಚಳುವಳಿ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಾಗಾರದ ನಿರ್ದೇಶಕ ನಟರಾಜ್ ಹೊನ್ನವಳ್ಳಿ ತಿಳಿಸಿದ್ದಾರೆ.
ಕಾರ್ಯಾಗಾರದಲ್ಲಿ ದೇಹ, ಮನಸ್ಸು, ಮತ್ತು ಧ್ವನಿಯ ಸಿದ್ಧತೆ, ಅಭಿನಯ ತಯಾರಿಗಾಗಿ ರಂಗಾಟಗಳು, ಆಶು ವಿಸ್ತರಣಾ ತರಗತಿಗಳು, ಸಿನೆಮಾ ನೋಡುವುದು, ರಂಗ ಸಂಪನ್ಮೂಲ ವ್ಯಕ್ತಿಗಳಿಂದ ಅಭಿನಯ ತರಗತಿಗಳು, ರಂಗ ಸಾಹಿತ್ಯ ಪರಿಚಯ ಮಾಡಿಕೊಡಲಾಗುವುದು ಮತ್ತು ಕಾರ್ಯಾಗಾರದ ಕಡೆಯಲ್ಲಿ ನಾಟಕ ಪ್ರದರ್ಶನ ಇರಲಿದೆ ಎಂದು ಹೇಳಿದ್ದಾರೆ. ಕಾರ್ಯಾಗಾರದಲ್ಲಿ ಕೇವಲ ೧೫ ಜನರಿಗೆ ಮಾತ್ರ ಅವಕಾಶ ಇರುತ್ತದೆ. ಪ್ರತಿದಿನ ಸಂಜೆ ೪.೩೦ ರಿಂದ ೮.೩೦ರ ವರೆಗೆ ಮತ್ತು ಶನಿವಾರ ಮತ್ತು ಭಾನುವಾರ ಬೆಳಗ್ಗೆ ೧೦ರಿಂದ ಸಂಜೆ ೭ರವರೆಗೆ ತರಬೇತಿ ನೀಡಲಾಗುವುದು. ಶಿಬಿರಾರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ೧೮ ರಿಂದ ೩೫ ವರ್ಷದೊಳಗಿನವರಿಗೆ ಮಾತ್ರ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಹೇಮಂತ್ ವೈ.ಎಂ. ೮೮೮೪೨ ೧೧೬೫೯ ಇವರನ್ನು ಸಂಪರ್ಕಿಸಲು ಕೋರಲಾಗಿದೆ.
(Visited 1 times, 1 visits today)